ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ದಂಪತಿಯ ಸಾವಿನಲ್ಲಿ ಕೊನೆಗೊಂಡಿದೆ. ಮೂಲ್ಕಿ ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ಬುಧವಾರದಂದು ಕ್ಷುಲಕ ವಿಷಯಕ್ಕೆ ಮಾತಿಗೆ ಮಾತು ಬೆಳೆದು ನೆರೆಮನೆಯ ದಂಪತಿಯನ್ನು ಹತ್ಯೆ ಮಾಡಲಾಗಿದೆ.
ಮಂಗಳೂರು(ಏ.30): ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ದಂಪತಿಯ ಸಾವಿನಲ್ಲಿ ಕೊನೆಗೊಂಡಿದೆ. ಮೂಲ್ಕಿ ಕಿನ್ನಿಗೋಳಿ ಸಮೀಪದ ಐಕಳ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ಬುಧವಾರದಂದು ಕ್ಷುಲಕ ವಿಷಯಕ್ಕೆ ಮಾತಿಗೆ ಮಾತು ಬೆಳೆದು ನೆರೆಮನೆಯ ದಂಪತಿಯನ್ನು ಹತ್ಯೆ ಮಾಡಲಾಗಿದೆ.
ವಿನ್ಸೆಂಟ್ ಡಿಸೋಜ (48) ಮತ್ತವರ ಪತ್ನಿ ಹೆಲಿನ್ ಡಿಸೋಜ (43) ಹತ್ಯೆಯಾದವರು. ನೆರೆಮನೆಯ ನಿವಾಸಿ ಅಲ್ಪೋನ್ಸ್ ಸಲ್ದಾನಾ ಹತ್ಯೆಗೈದ ಆರೋಪಿ. ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಬಳಿಯ ಮನೆಯಲ್ಲಿ ಹತ್ಯೆಗೊಳಗಾದ ದಂಪತಿ ತಮ್ಮ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮಗನೊಂದಿಗೆ ವಾಸಿಸುತ್ತಿದ್ದರು.
undefined
ಲಾಕ್‌ಡೌನ್ ಉಲ್ಲಂಘಿಸಿದ ಯೋಧರು; ವಿಡಿಯೋ ವೈರಲ್
ನೆರೆ ಮನೆಯ ನಿವಾಸಿ ಅಲ್ಪೋನ್ಸ್ ಸಲ್ದಾನಾ ಬುಧವಾರ ಬೆಳಗ್ಗೆ ದಂಪತಿಯನ್ನು ಕ್ಷುಲ್ಲಕ ಕಾರಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಿದ್ದು ಮಾನಸಿಕನಂತೆ ವರ್ತಿಸುತ್ತಿದ್ದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಮೃತ ವಿನ್ಸೆಂಟ್ ಡಿಸೋಜ ಅವರು ಪ್ಯಾರ ಮಿಲಿಟರಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ವಿದೇಶಿ ಹಡಗಿನಲ್ಲಿ ನೌಕರಿ ಮಾಡುತ್ತಿದ್ದರೆಂದು ಎಂದು ತಿಳಿದು ಬಂದಿದೆ. ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ವಿನ್ಸೆಂಟ್ ಡಿಸೋಜ ಹಾಗೂ ನೆರೆ ಮನೆಯ ವ್ಯಕ್ತಿ ಅಲ್ಪೋನ್ಸ್ ಸಲ್ದಾನಾ ನಡುವೆ ಕೆಲವು ಸಮಯದ ಹಿಂದಿನಿಂದ ವೈಷಮ್ಯ ಇದ್ದು ಸಣ್ಣ ಪುಟ್ಟಗಲಾಟೆ ನಡೆಯುತ್ತಿತ್ತು.
ವರದಿಗಾರನಿಗೆ ಕೊರೋನಾ: ಕಾಸರಗೋಡು ಡಿಸಿಗೆ ಕ್ವಾರೆಂಟೈನ್..!
ಬುಧವಾರ ಮಧ್ಯಾಹ್ನ 11.30 ರ ಹೊತ್ತಿಗೆ ಅಲ್ಫೋನ್ಸ್, ವಿನ್ಸೆಂಟ್ ಡಿಸೋಜ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇದನ್ನು ಪ್ರಶ್ನಿಸಲು ಆತನ ಮನೆಗೆ ಹೋದಾಗ ಮನೆಯಿಂದ ಚಾಕುವನ್ನು ಹಿಡಿದುಕೊಂಡು ಬಂದು ವಿನ್ಸೆಂಟ್ ಡಿಸೋಜರಿಗೆ ಇರಿದಿದ್ದಾನೆ. ಇದನ್ನು ನೋಡಲು ಬಂದ ವಿನ್ಸೆಂಟ್ ಪತ್ನಿ ಹೆಲಿನ್ ಡಿಸೋಜ ಅವರಿಗೂ ಚಾಕುವಿನಿಂದ ಕೆಲವು ಕಡೆ ಇರಿದಿದ್ದಾನೆ. ವಿನ್ಸೆಂಟ್ ಡಿಸೋಜ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೆಲಿನ್ ಅವರು ಆಸ್ಪತ್ರಗೆ ಹೋಗುವ ದಾರಿ ಮಧ್ಯೆ ಅಸುನೀಗಿದರು.
ಕೊರೋನಾ ಹೋರಾಟಕ್ಕೆ ಸಾಗರದ ಹಿರಿಯ ಜೀವ ನೀಡಿದ ದೇಣಿಗೆ ಕೋಟಿ ರೂ.ಗೂ ಕಡಿಮೆ ಇಲ್ಲ!
ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಅಲ್ಪಾನ್ಸ್ ಸಲ್ಡಾನ ಕೂಲಿ ಕೆಲಸ ಮಾಡುತ್ತಿದ್ದು ಮಾನಸಿಕ ವ್ಯಕ್ತಿಯಂತೆ ವರ್ತಿಸುತ್ತಿದ್ದಾನೆ. ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಜಯರಾಮ ಗೌಡ, ಪೊಲೀಸ್ ಕಮೀಷನರ್ ಹರ್ಷ, ಎಸಿಪಿ ಬೆಳ್ಳಿಯಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.