'ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಸೈಡಲೈನ್ ಮಾಡೋ ಷಡ್ಯಂತ್ರ ನಡೆದಿದೆ'

By Web Desk  |  First Published Sep 28, 2019, 11:53 AM IST

ಬಿಜೆಪಿಯಲ್ಲಿ ಬಿ.ಎಲ್.ಸಂತೋಷ ಮತ್ತು ನಳಿನಕುಮಾರ ಕಟೀಲ್ ರಿಂದ ಯಡಿಯೂರಪ್ಪರನ್ನ ಸೈಡಲೈನ್ ಮಾಡೋ ಷಡ್ಯಂತ್ರ ನಡೆದಿದೆ ಎಂದ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ‌| ಬಿಎಸ್ ವೈ ಅವರನ್ನ ಸಿಎಂ ಕುರ್ಚಿಯಿಂದ ತೆಗೆದು ಹಾಕುವ ಸಂಚು ನಡೆಯುತ್ತಿದೆ| ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಹತ್ತಿಕ್ಕುವ ಮೂಲಕ ಲಿಂಗಾಯತರನ್ನ ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆದಿದೆ| ಲಿಂಗಾಯತರೆಲ್ಲಾ ಬ್ರಮನಿರಸನರಾಗಿದ್ದಾರೆ| ಬಿಜೆಪಿ ಕಥೆ ಮುಗೀತು, ಲಿಂಗಾಯತರೆಲ್ಲಾ ಕಾಂಗ್ರೆಸ್ ಕಡೆ ನೋಡ್ತಿದ್ದಾರೆ| 


ಬಾಗಲಕೋಟೆ:(ಸೆ.28) ಬಿಜೆಪಿಯಲ್ಲಿ ಬಿ.ಎಲ್.ಸಂತೋಷ ಮತ್ತು ಬಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರಿಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನ ಸೈಡಲೈನ್ ಮಾಡೋ ಷಡ್ಯಂತ್ರ ನಡೆದಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ‌ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಹಾಯಕರಾಗಿದ್ದಾರೆ. ಸಿಎಂ ಕುರ್ಚಿಯಿಂದ ತೆಗೆದು ಹಾಕುವ ಸಂಚು ನಡೆಯುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಹತ್ತಿಕ್ಕುವ ಮೂಲಕ ಲಿಂಗಾಯತರನ್ನ ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಹೀಗಾಗಿ ಲಿಂಗಾಯತರೆಲ್ಲಾ ಬ್ರಮನಿರಸನರಾಗಿದ್ದಾರೆ. ಬಹುಶಃ ಬಿಜೆಪಿ ಕಥೆ ಮುಗೀತು, ಲಿಂಗಾಯತರೆಲ್ಲಾ ಕಾಂಗ್ರೆಸ್ ಕಡೆ ನೋಡ್ತಿದ್ದಾರೆ ಎಂದು ತಿಳಿಸಿದ್ದಾರೆ. 

Tap to resize

Latest Videos

ನಳಿನಕುಮಾರ ಕಟೀಲ್ ತಮಗೆ ಬೇಕಿದ್ದವರಿಗೆ ಕಟೀಲ್ ಮಣೆ ಹಾಕುತ್ತಿದ್ದು, ಇತ್ತ ಸಿಎಂ ಯಡಿಯೂರಪ್ಪನ ಪುತ್ರನಿಗೆ ಸಿಗಬೇಕಾದ ಹುದ್ದೆ ಸಿಗದಂತೆ ಮಾಡಿ ಟಕ್ಕರ್ ನೀಡಿದ್ದಾರೆ. ಹೀಗಾಗಿ ಕಟೀಲ್ ಮತ್ತು ಯಡಿಯೂರಪ್ಪನವರ ಮಧ್ಯೆ ಶೀತಲಸಮರ ನಡೆಯುತ್ತಿದೆ. ಈ ಶೀತಲಸಮರದಲ್ಲಿ ಕಟೀಲ್ ಯಡಿಯೂರಪ್ಪನನ್ನ ರಾಜಕೀಯವಾಗಿ ಮುಗಿಸುತ್ತಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇನ್ನು ನೆರೆ ಸಂತ್ರಸ್ಥರಿಗೆ ಪರಿಹಾರ ನೀಡೋಕೆ ಯಾರೂ ಮನಸ್ಸು ಮಾಡ್ತಿಲ್ಲ, ಅದು ನಳಿನಕುಮಾರ ಕಟೀಲ್  ಅವರಿಗೂ ಬೇಕಾಗಿಲ್ಲ, ಬಿಜೆಪಿ ಸದ್ಯದ ಪರಿಸ್ಥಿತಿ ನೋಡಿದ್ರೆ ಉಪ ಚುನಾವಣೆ ನಡೆಯೋದಿಲ್ಲ, ಅದರ ಬದಲು ಸರ್ಕಾರ ಬಿದ್ದು ಸಾರ್ವತ್ರಿಕ ಚುನಾವಣೆ ನಡೆಯುತ್ತವೆ ಎಂದು ಹೇಳಿದ್ದಾರೆ. 

ಸಿಎಂ ಯಡಿಯೂರಪ್ಪ ಮತ್ತು ಕಟೀಲ್ ಅವರು ತಮಗೆ ಬೇಕೆನಿಸಿದವರಿಗೆ ಹುದ್ದೆ ನೀಡಿ ನಿಯೋಜನೆ‌ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಬಹಳ ದಿನ ಉಳಿಯೋದಿಲ್ಲ, ಸರಕಾರದಲ್ಲಿ ಶಾಸಕರ ಸಮಾಧಾನ ಮಾಡುವುದಕ್ಕೆ ಬರೀ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. 
 

click me!