ನೀವು ಕೊಡುವ ಪರಿಹಾರ ಅರ್ಜಿ ಹಾಕೋಕೆ ಸಾಲೋದಿಲ್ಲ: ಸಿದ್ದು ಸರ್ಕಾರದ ವಿರುದ್ಧ ರೇಣುಕಾಚಾರ್ಯ ಕೆಂಡ..!

By Girish Goudar  |  First Published Jul 21, 2024, 10:01 PM IST

ದಪ್ಪ ತೊಗಲಿನ ಸರಕಾರ ಈ ಪಾಪರ್ ಸರ್ಕಾರ ಇದು. ಅತಿವೃಷ್ಟಿಯಲ್ಲಿ ಅನಾಹುತ ಆದವರಿಗೆ ನೀವು ಕೊಡುವ ಹಣ ಅರ್ಜಿ ಹಾಕೋಕೆ ಸಾಲೋದಿಲ್ಲ. ಬೆಳೆ ಪರಿಹಾರ ಹಾಗೂ ಮನೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ


ದಾವಣಗೆರೆ(ಜು.21): ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ರೈತ, ಜನ ವಿರೋಧಿ ಸರ್ಕಾರವಾಗಿದೆ.  ಇವರಿಗೆ ರೈತರ, ಸಾಮಾನ್ಯ ಜನರ ಬಗ್ಗೆ ಕಳಕಳಿ ಕಾಳಜಿ ಇಲ್ಲ. ಕಳೆದ 15 ದಿನದಿಂದ ಮಳೆ ಸುರಿಯುತ್ತಿದೆ, ಇದ್ರಿಂದ ಬೇರೆ ಬೇರೆ ಬೆಳೆ ಬೆಳೆದ ರೈತರಿಗೆ ನಷ್ಟ ಆಗುತ್ತಿದೆ. ತಕ್ಷಣ ಸರ್ವೇ ಮಾಡಿ ಪರಿಹಾರ ನೀಡಬೇಕು. ಇವರು ಮಾತು ಎತ್ತಿದರೆ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಭಾನುವಾರ) ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಭಾರತೀಯ ರೈತ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರೇಣುಕಾಚಾರ್ಯ, ಬರಗಾಲದ ಹಣ ಬಂದಿಲ್ಲ, ಬರಗಾಲ ಹೋಗಿ ಮಳೆಗಾಲ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಂದು ಮನೆಗೆ 5 ಲಕ್ಷ ಕೊಡಲಾಗುತ್ತಿತ್ತು. ಸ್ವಲ್ಪ ಹಾನಿ ಆದ್ರೆ ಮೂರು ಲಕ್ಷ ಕೊಡಲಾಗುತ್ತಿತ್ತು. ಕೊನೆಗೆ 50 ಸಾವಿರ ನೀಡಲಾಗುತ್ತಿತ್ತು. ಮನೆಗಳಿಗೆ ನೀರು ನುಗ್ಗಿದ್ರೆ 10 ಸಾವಿರ ನೀಡಲಾಗುತ್ತಿತ್ತು. ಈಗ ಆರು, ಐದು ಸಾವಿರ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ದಪ್ಪ ತೊಗಲಿನ ಸರಕಾರ ಈ ಪಾಪರ್ ಸರ್ಕಾರ ಇದು. ಅತಿವೃಷ್ಟಿಯಲ್ಲಿ ಅನಾಹುತ ಆದವರಿಗೆ ನೀವು ಕೊಡುವ ಹಣ ಅರ್ಜಿ ಹಾಕೋಕೆ ಸಾಲೋದಿಲ್ಲ. ಬೆಳೆ ಪರಿಹಾರ ಹಾಗೂ ಮನೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Latest Videos

undefined

ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಹೆಚ್ಚು: ಮಾಜಿ ಸಚಿವ ಎಚ್.ಎಂ. ರೇವಣ್ಣ

ಭದ್ರಾ ಜಲಾಶಯದ ದುರಸ್ಥಿಗೆ ತಕ್ಷಣ ಡಿಪಿಆರ್ ಮಾಡಬೇಕು. 100-150 ಕೋಟಿ ಹಣವನ್ನು ದುರಸ್ಥಿ ಕಾರ್ಯಕ್ಕೆ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು. ಎಮೆರ್ಜೆನ್ಸಿ ಗೇಟ್ ಬೆಡ್ ಕಾoಕ್ರೀಟ್  ಹಾಕಬೇಕು. ಗೇಟ್ ಗಳನ್ನು ದುರಸ್ಥಿ ಮಾಡಬೇಕು, ಜಂಗಲ್ ತೆಗೆಸಬೇಕು, ಹೂಳು ತೆಗೆಸಬೇಕು. ನಾಲೆಗಳನ್ನು ಸಹ ದುರಸ್ಥಿ ಮಾಡಬೇಕು ತಕ್ಷಣ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಐಸಿಸಿ ಮೀಟಿಂಗ್ ಕರೆದು ದಿನಾಂಕ ನಿಗಧಿ ಮಾಡಿ ನಾಲೆಗಳಿಗೆ ನೀರು ಹರಿಸಬೇಕು. ಇದೇ ತಿಂಗಳು 24 ರೊಳಗೆ ಸರ್ಕಾರ ನಿರ್ಧಾರ ತಿಳಿಸದಿದ್ದರೆ. ಬಾಡ ಕ್ರಾಸ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ರೇಣುಕಾಚಾರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.  

click me!