'ಅನರ್ಹ ಶಾಸಕ ಬಿ. ಸಿ.ಪಾಟೀಲ್ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ'

By Web DeskFirst Published Nov 28, 2019, 11:37 AM IST
Highlights

ಬಿ. ಸಿ. ಪಾಟೀಲ್ ಹತಾಶರಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ| ಬಿ.ಸಿ. ಪಾಟೀಲರನ್ನ ಮನೆಗೆ ಕಳುಯಿಸಲು ನಿರ್ಧರಿಸಿದ್ದಾರೆ| ಈ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯೇ ಹರಿಸುತ್ತಿದೆ| 

ದಾವಣಗೆರೆ(ನ.28): ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಅವರು ಹತಾಶರಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ತಿರುಗೇಟು ನೀಡಿದ್ದಾರೆ. 

'ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಲು ಸಿದ್ದರಾಮಯ್ಯನೇ ಕಾರಣ'

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪಯ್ಯ ಅವರು ಐಜಿ ಆದಂತವರು, ಬಿ.ಸಿ. ಪಾಟೀಲ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಅವರ ಪ್ರಕಾರ ಪೊಲೀಸ್ ಇಲಾಖೆ ಲಂಚ ತಗೋಳುವುದಾ? ಪಾಟೀಲ್ ಏಕೆ ಪೊಲೀಸ್ ಇಲಾಖೆ ಬಿಟ್ಟು ಬಂದ್ರು ಎಂದು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿ.ಸಿ. ಪಾಟೀಲ್ ಹತಾಶೆಗೊಂಡು ಈ ರೀತಿ ಮಾತಾಡುತ್ತಿದ್ದಾರೆ. ಅವರ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆಲ್ಲಲಿದೆ. ಹಿರೇಕೇರೂರು ಜನ ಬಿ.ಸಿ. ಪಾಟೀಲರನ್ನ ಮನೆಗೆ ಕಳುಯಿಸಲು ನಿರ್ಧರಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯೇ ಹರಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!