ಮುಸ್ಲಿಮರಿಗೆ ಚಿಕನ್ ಬಿರಿಯಾನಿ ಹಂಚಿದ ನಗರಸಭೆ ಮಾಜಿ ಅಧ್ಯಕ್ಷ

By Kannadaprabha News  |  First Published May 7, 2020, 1:01 PM IST

ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ಉಪವಾಸ ವೃತಾಚರಣೆಯಲ್ಲಿರುವ ಮುಸ್ಲಿಂ ಬಾಂಧವರಿಗೆ ನಗರಸಭೆ ಮಾಜಿ ಅಧ್ಯಕ್ಷ ಎಂ ಸಮಿವುಲ್ಲಾ ಚಿಕನ್‌ ಬಿರಿಯಾನಿ ವಿತರಣೆ ಮಾಡಿದರು.


ಅರಸೀಕೆರೆ(ಮೇ.7): ದಾನ ಧರ್ಮದ ಪ್ರತೀಕವಾದ ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಉಪವಾಸ ವೃತ ಕೈಗೊಂಡಿದ್ದಾರೆ. ವೃತಾಚರಣೆಯಲ್ಲಿರುವ ಮುಸ್ಲಿಂ ಬಾಂಧವರಿಗೆ ಪ್ರತಿದಿನ ಸಂಜೆ ನಗರಸಭೆ ಮಾಜಿ ಅಧ್ಯಕ್ಷ ಎಂ ಸಮಿವುಲ್ಲಾ ಚಿಕನ್‌ ಬಿರಿಯಾನಿ ವಿತರಣೆ ಮಾಡಿದರು.

ಜಾಮಿಯಾ ಮಸೀದಿ ಸಮೀಪವಿರುವ ಶಾದಿಮಾಲಿನಲ್ಲಿ ಪ್ರತಿದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿರಿಯಾನಿ ಪೊಟ್ಟಣಗಳನ್ನು ಸಿದ್ಧಪಡಿಸಿ ನಗರದ ಮುಜಾರ್ವಾ ಮೊಹಲ್ಲಾ, ಸಿದ್ದಪ್ಪ ನಗರ. ಟಿಪ್ಪು ನಗರ, ಜೇನುಕಲ್‌ ಬಡಾವಣೆ, ಇಂದಿರಾನಗರ ಸೇರಿದಂತೆ ಇತರ ಬಡಾವಣೆಗಳಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಇತರೆ ಸಮುದಾಯದವರಿಗೂ ವಿತರಿಸುವ ಮೂಲಕ ಮತ್ತೊಂದು ರೀತಿಯಲ್ಲಿ ರಂಜಾನ್‌ ಆಚರಣೆ ನಡೆಸಲಾಗುತ್ತಿದೆ.

Latest Videos

undefined

ಇಂದಿನಿಂದ ಕಾರವಾರದಲ್ಲಿ ಕಡಲಿಗಿಳಿಯುತ್ತೆ ಮೀನು ಬೇಟೆ ಬೋಟುಗಳು..!

ಕೊರೋನಾ ಸೋಂಕು ದೇಶಕ್ಕೆ ತಂದ ಸಂಕಷ್ಟದ ನಡುವೆ ರಂಜಾನ್‌ ಪ್ರಯುಕ್ತ ಲೋಕ ಕಲ್ಯಾಣ ಬಯಸಿ ವೃತ ನಡೆಸುತ್ತಿರುವ ಮುಸ್ಲಿಮರಿಗೆ ಬಿರಿಯಾನಿ ವಿತರಿಸುತ್ತಿರುವ ಸಮೀವುಲ್ಲಾ ಅವರ ಸೇವೆಯನ್ನು ಮುಸ್ಲಿಂ ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರ ಸಾವು ಎಂದ ಸಂಸದ!

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮೀವುಲ್ಲಾ, ದಾನದಲ್ಲೆ ಶ್ರೇಷ್ಠದಾನ ಅನ್ನದಾನ. ಹಾಗಾಗಿ, ಉಪವಾಸ ನಿರತರಿಗೆ ಅನ್ನದಾನದ ಮೂಲಕ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಮಾಡಿರುವ ಪಾಪ ಕಾರ್ಯಗಳಿಗೆ ಭಗವಂತ ಕ್ಷಮಿಸಲಿ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಾರ್ಕಿ, ಮುಖಂಡರಾದ ನಸ್ರುಲ್ಲಾ ಎಸ್‌ ಸೂಫಿಯಾನ್‌ ಮತ್ತು ಪಾಕ ತಜ್ಞ ಮನನ್‌ ಮತ್ತಿತರರು ಉಪಸ್ಥಿತರಿದ್ದರು.

click me!