ವಸತಿ ಗೃಹದಲ್ಲಿ ವಿವಾಹಿತೆ ಜೊತೆಗೆ ಸಿಕ್ಕಿಬಿದ್ದ ಅರಣ್ಯ ಅಧಿಕಾರಿ : ಎರಡು ದಿನ ಜೊತೆಗೆ ಇದ್ರು

By Kannadaprabha NewsFirst Published Nov 17, 2020, 12:51 PM IST
Highlights

ಅರಣ್ಯಾಧಿಕಾರಿಯೋರ್ವರು ವಿವಾಹಿತ ಮಹಿಳೆ ಜೊತೆಗೆ ಕ್ವಾಟ್ರಸ್‌fನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಎರಡು ದಿನ ತಮ್ಮ ಜೊತೆಗೆ ಆಕೆಯನ್ನು ಇರಿಸಿಕೊಂಡಿದ್ದಾರೆ

 ಚಿಕ್ಕಮಗಳೂರು (ನ.17):  ವಿವಾಹಿತ ಮಹಿಳೆಯೊಂದಿಗೆ ಅರಣ್ಯ ವಸತಿ ಗೃಹದಲ್ಲಿ ಉಪ ವಲಯ ಅರಣ್ಯಾಧಿಕಾರಿಯೊಬ್ಬ ಸಿಕ್ಕಿ ಬಿದ್ದಿರುವ ಘಟನೆ ಇಲ್ಲಿನ ಮೂಡಿಗೆರೆ ತಾಲೂಕಿನ ಗಬ್ಗಲ್‌ ಗ್ರಾಮದಲ್ಲಿ  ನಡೆದಿದೆ.

ಕೊಪ್ಪ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಚಂದನ್‌ ಸಿಕ್ಕಿಬಿದ್ದಿರುವ ಅಧಿಕಾರಿ. ಅವರ ವಿರುದ್ಧ ಬಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದೆರಡು ದಿನಗಳ ಹಿಂದೆ ಚಂದನ್‌ ಅವರು ತಾನು ವಾಸವಾಗಿರುವ ಗಬ್ಗಲ್‌ನಲ್ಲಿರುವ ಅರಣ್ಯ ವಸತಿ ಗೃಹಕ್ಕೆ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದಾರೆ. ಅವರನ್ನು ಹೊರಗೆ ಬಿಟ್ಟಿರಲಿಲ್ಲ. ಇದನ್ನು ಆಸುಪಾಸಿನ ಮನೆಯವರು ನೋಡಿದ್ದರು. ಚಂದನ್‌ ಅವರ ನಡತೆ ಸರಿ ಇರಲಿಲ್ಲ. ಇದರಿಂದ ಅಕ್ಕಪಕ್ಕದ ಮನೆಯವರು ಬೇಸರಗೊಂಡಿದ್ದರು.

ಮಹಿಳೆ ಮನೆಯೊಳಗೆ ಇರುವುದು ಖಾತ್ರಿಪಡಿಸಿದ ಅಸುಪಾಸಿನ ಮನೆಯವರು ಹಾಗೂ ಗ್ರಾಮಸ್ಥರು ಭಾನುವಾರ ಚಂದನ್‌ ಅವರ ಮನೆ ಎದುರು ದಿಢೀರ್‌ ಪ್ರತಿಭಟನೆ ನಡೆಸಿ, ಈ ವಿಷಯವನ್ನು ಬಾಳೂರು ಪೊಲೀಸರ ಗಮನಕ್ಕೆ ತಂದರು.

ಅವರಿಬ್ಬರ ನಡುವೆ ನಡೆದಿತ್ತು ಅದೆಲ್ಲವೂ : ಆ ಫೋಟೊ ಇಟ್ಕೊಂಡು ತಿರುಗಿಬಿದ್ಲು ಆಕೆ ...

ಪತ್ನಿ ಅಪಹರಣ- ಪತಿ ದೂರು: ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮನೆಯೊಳಗೆ ಚಂದನ್‌ ಹಾಗೂ ಮಹಿಳೆ ಇರುವುದು ಕಂಡುಬಂದಿತು. ಈ ಸಂದರ್ಭ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಚಂದನ್‌ ಅವರೊಂದಿಗೆ ಇದ್ದ ಮಹಿಳೆ ಸಂಪ್ಲಿ ಗ್ರಾಮದವರೆಂದು ಹೇಳಲಾಗಿದೆ. ಅವರ ಪತಿ ಸ್ಥಳಕ್ಕೆ ಆಗಮಿಸಿ ಚಂದನ್‌ ಅವರು ತನ್ನ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ಬಾಳೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜತೆಗೆ ತನ್ನ ಜಮೀನಿನಲ್ಲಿರುವ ಮರಗಳನ್ನು ಸ್ವಂತ ಉಪಯೋಗಕ್ಕೆ ಮಹಿಳೆಯ ಪತಿ ಕಟಾವು ಮಾಡಿದ್ದು, ಈ ವಿಷಯದಲ್ಲಿ ಅಧಿಕಾರಿ ಚಂದನ್‌ ಅವರು ಪತಿಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮಹಿಳೆಗೆ ಬೆದರಿಕೆ ಹಾಕಿ ಮನೆಗೆ ಕರೆಸಿಕೊಂಡಿದ್ದು ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಬಾಳೂರು ಪಿಎಸ್‌ಐ ಮೂರ್ತಿ, ಬಣಕಲ್‌ ಪಿಎಸ್‌ಐ ಶ್ರೀನಾಥ್‌ ರೆಡ್ಡಿ, ವೃತ್ತ ನಿರೀಕ್ಷಕ ಜಗನ್ನಾಥ್‌ ಭೇಟಿ ನೀಡಿದ್ದು ಮಹಿಳೆ ಹಾಗೂ ಉಪವಲಯ ಅರಣ್ಯಾಧಿಕಾರಿ ಚಂದನ್‌ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ಕೈಗೊಂಡಿದ್ದಾರೆ.

click me!