ಮಾನವೀಯತೆಯನ್ನೇ ಮರೆತ ಜನ: ಸೋಂಕಿತ ತಂದೆ-ತಾಯಿಯೊಂದಿಗೆ ಮಗು..!

By Kannadaprabha News  |  First Published May 12, 2021, 12:16 PM IST

* ಬಾಗಿಲು ಹಾಕಿಕೊಂಡಿರುವ ನೆರೆಹೊರೆಯವರು
* ಸೋಂಕಿತ ತಾಯಿಯೇ ಮಗುವಿಗೆ ಊಟ ಮಾಡಿಸಬೇಕು
* ಮಗುವಿಗೂ ಸೋಂಕು ತಗುಲುವ ಆತಂಕ 
 


ಕೂಡ್ಲಿಗಿ(ಮೇ.12): ಸೋಂಕಿತ ತಂದೆ-ತಾಯಿಯ ಜತೆ 5 ವರ್ಷದ ಮಗು ಜೀವನ ನಡೆಸುತ್ತಿದೆ. ಆಸರೆಯಾಗಬೇಕಿದ್ದ ನೆರೆಹೊರೆಯವರು ಸಹ ಬಾಗಿಲು ಮುಚ್ಚಿಕೊಂಡಿದ್ದು, ಸೋಂಕಿತ ತಾಯಿಯೇ ಮಗುವಿಗೆ ಅಡುಗೆ ಮಾಡಿ ನೀಡುತ್ತಿದ್ದಾರೆ. ಇದರಿಂದ ಮಗುವಿಗೆ ಸೋಂಕು ತಗುಲುವ ಆತಂಕ ಶುರುವಾಗಿದೆ.

Latest Videos

undefined

ತಾಲೂಕಿನ ಶ್ರೀಕಂಠಾಪುರ ತಾಂಡಾದ ಗಂಗಾಧರ (32), ಪತ್ನಿ ಸಾವಿತ್ರಿಬಾಯಿಗೆ (30) ಇಬ್ಬರಿಗೂ ಕೊರೋನಾ ಸೋಂಕು ತಗುಲಿದ್ದು, ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಇವರೊಂದಿಗೆ 5 ವರ್ಷದ ಗಂಡು ಮಗುವಿದೆ. ನಿತ್ಯ ದುಡಿದು ಅಂದಿನ ಊಟ ಮಾಡುತ್ತಿದ್ದು ಈ ಕುಟುಂಬಕ್ಕೆ ಇದೀಗ ಸೋಂಕಿನಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇಂತಹ ವೇಳೆ ಆಸರೆಯಾಗಬೇಕಿದ್ದ ನೆರೆಹೊರೆಯವರು ಬಾಗಿಲು ಹಾಕಿಕೊಂಡಿದ್ದಾರೆ. ಕೊನೆಯ ಪಕ್ಷ ಆ ಮಗುವಿಗೂ ಊಟ ನೀಡುವ ಉದಾರತೆ ತೋರುತ್ತಿಲ್ಲ. ಇತ್ತ ಸ್ಥಳೀಯ ಅಧಿಕಾರಿಗಳು ಸಹ ಬಡ ಕುಟುಂಬಕ್ಕೆ ಆಹಾರ ಕಿಟ್‌ ನೀಡದೆ ಇರುವುದರಿಂದ ಈ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

"

'ಯಾರೂ ಕೊರೋನಾದಿಂದ ಸತ್ತಿಲ್ಲ'

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಬಸಣ್ಣ, ಸೋಂಕಿತ ತಂದೆ-ತಾಯಿಯ ಜತೆಗೆ ಮಗು ಇರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಬುಧವಾರ ಗ್ರಾಮಕ್ಕೆ ಗುಡೇಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಕಳಿಸಿ ಪರಿಶೀಲಿಸಲಾಗುವುದು. ಆ ಕುಟುಂಬಕ್ಕೆ ನೆರವುಬೇಕಾದಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!