ರೈಲಿನ ವ್ಯಾಗನಗಳಲ್ಲಿ ಬಂದ ಕಲ್ಲಿದ್ದಲನ್ನು ಖಾಲಿ ಮಾಡಿದ ನಂತರ ಸ್ವಚ್ಛತೆಗೊಳಿಸಲು ಗುತ್ತಿಗೆ ಪಡೆದಿರುವ ಗುರುರಾಘವೇಂದ್ರ ಎಂಟರ್ ಪ್ರೈಸಸ್‌ನ ಕರ್ನೂಲ್ ಮೂಲದ ಗುತ್ತಿಗೆದಾರ ಶ್ರೀನಿವಾಸಲು ಹಾಗೂ ಯರಮರಸ್ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ಧ ಕಲ್ಲಿದ್ದಲು ಕಳ್ಳತನ ಪ್ರಕರಣ ದಾಖಲು.
ರಾಯಚೂರು(ನ.26): ಸಮೀಪದ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್)ನಿಂದ ಕಲ್ಲಿದ್ದಲನ್ನು ಕದ್ದು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರೈಲಿನ ವ್ಯಾಗನಗಳಲ್ಲಿ ಬಂದ ಕಲ್ಲಿದ್ದಲನ್ನು ಖಾಲಿ ಮಾಡಿದ ನಂತರ ಸ್ವಚ್ಛತೆಗೊಳಿಸಲು ಗುತ್ತಿಗೆ ಪಡೆದಿರುವ ಗುರುರಾಘವೇಂದ್ರ ಎಂಟರ್ ಪ್ರೈಸಸ್‌ನ ಕರ್ನೂಲ್ ಮೂಲದ ಗುತ್ತಿಗೆದಾರ ಶ್ರೀನಿವಾಸಲು ಹಾಗೂ ಯರಮರಸ್ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ಧ ಕಲ್ಲಿದ್ದಲು ಕಳ್ಳತನ ಪ್ರಕರಣ ದಾಖಲಾಗಿದೆ.
undefined
ಚುನಾವಣೆ ಕರ್ತವ್ಯಕ್ಕೆ ಹೋಗಿದ್ದ ರಾಜ್ಯದ ಹೋಮ್ ಗಾರ್ಡ್ಸ್ ಮಧ್ಯಪ್ರದೇಶದಲ್ಲಿ ಪರದಾಟ!
ಸಿಂಗರೇಣಿ ಕೋಲ್ ಕೊಲೀರಿಸ್ ಸಂಸ್ಥೆಯಿಂದ ಜಿಲ್ಲೆಯಲ್ಲಿರುವ ಉಭಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ರೈಲಿನ ವ್ಯಾಗನ್‌ಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಸ್ಥಾವರಗಳಿಗೆ ಕಲ್ಲಿದ್ದಲನ್ನು ವ್ಯಾಗನ್‌ಗಳ ಮುಖಾಂತರ ಡಂಪ್ ಮಾಡಿದ ಬಳಿಕ ವ್ಯಾಗನ್‌ಗಳ ಸ್ವಚ್ಛತೆಗಾಗಿ ದಕ್ಷಿಣ ಮಧ್ಯೆ ರೈಲ್ವೆ ಗುಂತಕಲ್ ವಾಣಿಜ್ಯ ವಿಭಾಗದಿಂದ ಕರ್ನೂಲ್ ಮೂಲದ ಗುರುರಾಘವೇಂದ್ರ ಏಜೆನ್ಸಿಯ ಶ್ರೀನಿವಾಸಲು ಅವರು ಟೆಂಡರ್ ಪಡೆದುಕೊಂಡಿದ್ದರು. ಗುತ್ತಿಗೆದಾರರು ಹಾಗೂ ರೈಲ್ವೆ ಸ್ಟೇಷನ್ ಮಾಸ್ಟರ್ ಸೇರಿಕೊಂಡು ವ್ಯಾಗನ್‌ಗಳ ಸ್ವಚ್ಛತೆಯ ಹೆಸರಿನಲ್ಲಿ ಸುಮಾರು 5 ಲಕ್ಷ ಮೌಲ್ಯದ 120 ಮೆಟ್ರಿಕ್ ಟನ್ ಗುಣಮಟ್ಟದ ಕಲ್ಲಿದ್ದಲನ್ನು ಕದ್ದು ಯರಮರಸ್ ರೈಲ್ವೆ ನಿಲ್ದಾಣ ಹೊರವಲಯದ ಜಮೀನಿನಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಎಚ್ಚೇತ್ತ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿಯನ್ನು ಸಹ ಕಲೆಹಾಕಿ ವರದಿ ರೂಪಿಸುತ್ತಿದ್ದು, ಇದೇ ವೇಳೆ ವೈಟಿಪಿಎಸ್ನ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ಜಿ.ಸಿ ಅವರು ರೈಲ್ ವ್ಯಾಗನ್ ಸ್ವಚ್ಛತೆಯ ಗುತ್ತಿಗೆದಾರರ ಹಾಗೂ ಯರಮರಸ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಾಖೋತ್ಪನ್ನ ಸ್ಥಾವರಕ್ಕೆ ಸರಬರಾಜಾಗುವ ಕಲ್ಲಿದ್ದಲಿನ ಕಳ್ಳತನಕ್ಕೆ ಸಂಬಂಧಿಸಿದಂತೆ ವೈಟಿಪಿಎಸ್‌ಎನ್ ಅಧಿಕಾರಿ ನೀಡಿದ ದೂರು ದಾಖಲಿಸಿಕೊಂಡಿದ್ದು, ಶೀಘ್ರದಲ್ಲಿಯೇ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ತಿಳಿಸಿದ್ದಾರೆ.