Murder Case | ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು

By Kannadaprabha News  |  First Published Nov 23, 2021, 7:15 AM IST
  • ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ - ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು
  • ಸ್ನೇಹಿತರ ಬಳಿ ತಂದೆಯ ಶೋಷಣೆ ಬಗ್ಗೆ ಹೇಳಿಕೊಂಡಿದ್ದ ಅಪ್ರಾಪ್ತೆ
  •  ತಂದೆಯ ದೌರ್ಜನ್ಯದ ಬಗ್ಗೆ ತಾಯಿ ಬಳಿ ದೂರು - ಆದರೂ ಬಗೆಹರಿಯದ ಸಮಸ್ಯೆ, ಪುತ್ರಿ ಅತಂತ್ರ

 ಬೆಂಗಳೂರು (ನ.23):  ಮನೆಗೆ ನುಗ್ಗಿ ವ್ಯಕ್ಯಿಯ ಹತ್ಯೆ (Murder) ಪ್ರಕರಣ ಸಂಬಂಧ ಮೃತನ ಪುತ್ರಿ ಸೇರಿ ನಾಲ್ವರು ಅಪ್ರಾಪ್ತರನ್ನು ಯಲಹಂಕ (Yalahanka) ನ್ಯೂ ಟೌನ್‌ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.  ಅಟ್ಟೂರು ವಾರ್ಡ್‌ ನಿವಾಸಿ ದೀಪಕ್‌ ಕುಮಾರ್‌ ಸಿಂಗ್‌(45) ಹತ್ಯೆಯಾದವರು. ಭಾನುವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ಮನೆಗೆ ನುಗ್ಗಿ ದೀಪಕ್‌ ಮೇಲೆ ಹಲ್ಲೆ ಗೈದು ಪರಾರಿಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಗಾಯಾಳು ದೀಪಕ್‌ ಮನೆಯಲ್ಲೇ ಮೃತ ಪಟ್ಟಿದ್ದರು (Death). ಈ ಸಂಬಂಧ ದಾಖಲಾಗಿದ್ದ ದೂರಿನ (Complaint)  ಮೇರೆಗೆ ಮೃತನ ಪುತ್ರಿ ಸೇರಿ ನಾಲ್ವರನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೋರ್ವ ತಲೆ ಮರೆಸಿಕೊಂಡು ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬಿಹಾರ (Bihar) ಮೂಲದ ದೀಪಕ್‌ ಜಿಕೆವಿಕೆಯಲ್ಲಿ (GKVK) ಸೆಕ್ಯೂರಿಟಿ ಗಾರ್ಡ್‌ (Security Gaurd) ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನಗರದಲ್ಲಿ ನೆಲೆಸಿದ್ದರು. ಹಿರಿಯ ಪುತ್ರಿ ನಗರದ ಖಾಸಗಿ ಕಾಲೇಜಿನಲ್ಲಿ (Private College) ಪಿಯುಸಿ (PUC) ಹಾಗೂ ಎರಡನೇ ಪುತ್ರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಭಾನುವಾರ ತಡರಾತ್ರಿ 12.30ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಏಕಾಏಕಿ ದೀಪಕ್‌ ಮನೆಗೆ ನುಗ್ಗಿ ಹಲ್ಲೆ (Attack) ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

Tap to resize

Latest Videos

undefined

ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ?

ಮೃತ ದೀಪಕ್‌ಗೆ ಇಬ್ಬರು ಪತ್ನಿಯರಿದ್ದಾರೆ (wives). ಮೊದಲ ಪತ್ನಿ ಬಿಹಾರದಲ್ಲಿ ನೆಲೆಸಿದ್ದಾರೆ. ದೀಪಕ್‌ ಕಲಬುರಗಿ (Kalaburagi) ಮೂಲದ ಮಹಿಳೆಯನ್ನು ಎರಡನೇ ವಿವಾಹವಾಗಿದ್ದು (Marriage), ಇಬ್ಬರು ಪುತ್ರಿಯರು ಇದ್ದಾರೆ. ಈ ಪೈಕಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿರಿಯ ಪುತ್ರಿಗೆ ಕಳೆದ ಒಂದೂವರೆ ವರ್ಷದಿಂದ ದೀಪಕ್‌ ಲೈಂಗಿಕ ಕಿರುಕುಳ (Sexual harassment)  ನೀಡುತ್ತಿದ್ದ. ಈ ವಿಚಾರವನ್ನು ಪುತ್ರಿ ತಾಯಿಗೂ ತಿಳಿಸಿದ್ದಳು ಎನ್ನಲಾಗಿದೆ.

ಈ ವಿಚಾರಕ್ಕೆ ಮನೆಯಲ್ಲಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅಂತೆಯೆ ಪುತ್ರಿ ಕಾಲೇಜಿನಲ್ಲಿ ತನ್ನ ಸ್ನೇಹಿತನೊಂದಿಗೆ (Friend) ತಂದೆಯ ಕಿರುಕುಳದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ.

ಪುತ್ರಿಯ ಸ್ನೇಹಿತನಿಂದ ಹತ್ಯೆ ಶಂಕೆ?

ಭಾನುವಾರ ದೀಪಕ್‌ ಪತ್ನಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮದ್ಯ (Alcohol) ಸೇವಿಸಿ ಮನೆಗೆ ಬಂದಿರುವ ದೀಪಕ್‌, ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ಈ ವೇಳೆ ಹೆದರಿದ ಆಕೆ ತನ್ನ ಕಾಲೇಜು ಸ್ನೇಹಿತನಿಗೆ ತಂದೆಯ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೇ ಮಾರಕಾಸ್ತ್ರಗಳೊಂದಿಗೆ ತಡರಾತ್ರಿ ಮನೆಗೆ ನುಗ್ಗಿರುವ ಪುತ್ರಿಯ ಸ್ನೇಹಿತ ಹಾಗೂ ಆತನ ಮೂವರು ಸಹಚರರು ದೀಪಕ್‌ ಮೇಲೆ ಹಲ್ಲೆಗೈದು ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ದಾಖಲಾದ ದೂರಿನ (Complaint) ಮೇರೆಗೆ ಯಲಹಂಕ ನ್ಯೂ ಟೌನ್‌ ಠಾಣೆ ಪೊಲೀಸರು ಮೃತನ ಪುತ್ರಿ ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು
  • ಸ್ನೇಹಿತರ ಬಳಿ ತಂದೆಯ ಶೋಷಣೆ ಬಗ್ಗೆ ಹೇಳಿಕೊಂಡಿದ್ದ ಅಪ್ರಾಪ್ತೆ
  •  ತಂದೆಯ ದೌರ್ಜನ್ಯದ ಬಗ್ಗೆ ತಾಯಿ ಬಳಿ ದೂರು - ಆದರೂ ಬಗೆಹರಿಯದ ಸಮಸ್ಯೆ, ಪುತ್ರಿ ಅತಂತ್ರ
  • ಮನೆಗೆ ನುಗ್ಗಿ ವ್ಯಕ್ಯಿಯ ಹತ್ಯೆ ಪ್ರಕರಣ ಸಂಬಂಧ ಮೃತನ ಪುತ್ರಿ ಸೇರಿ ನಾಲ್ವರು ಅಪ್ರಾಪ್ತರ ಬಂಧನ
  •  ಬಿಹಾರ ಮೂಲದ ವ್ಯಕ್ತಿ ಜಿಕೆವಿಕೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದವ ಕೊಲೆ
click me!