ಚಿಕ್ಕಮಗಳೂರಿನಲ್ಲಿ ಭತ್ತ ಬೆಳೆಯೋ ಸ್ಪರ್ಧೆ: ಅರ್ಜಿ ಆಹ್ವಾನ

By Kannadaprabha News  |  First Published Jul 28, 2019, 12:45 PM IST

ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರ ಮುಂಗಾರಿನಲ್ಲಿ ಭತ್ತದ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.


ಚಿಕ್ಕಮಗಳೂರು(ಜು.27): ನರಸಿಂಹರಾಜಪುರ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರಿನಲ್ಲಿ ಅರ್ಹ ರೈತರಿಂದ ಭತ್ತದ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರ ತಿಳಿಸಿದೆ.

ಕನಿಷ್ಠ 1 ಎಕರೆ ಪ್ರದೇಶದಲ್ಲಿ ಯಾವುದಾದರೂ ಒಂದೇ ತಳಿಯ ಭತ್ತವನ್ನು ಬೆಳೆದ ರೈತರು ಆ.31ರೊಳಗೆ ಸ್ಪರ್ಧೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ತಮ್ಮ ಜಮೀನಿನ 1 ಎಕರೆ ಭತ್ತದ ಪಹಣಿಯೊಂದಿಗೆ ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ನಿಗದಿತ ಅರ್ಜಿ ನಮೂನೆಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ.

Latest Videos

ಹಾಸನ: ತುಂಬಿ ಹರಿದ ಹೇಮೆ, ಕೃಷಿಕರಲ್ಲಿ ಉತ್ಸಾಹ

ರಾಜ್ಯ/ ಜಿಲ್ಲಾ/ ತಾಲೂಕು ಮಟ್ಟಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತಿಲ್ಲ. ಆದ್ದರಿಂದ ಅರ್ಜಿ ಶುಲ್ಕ ಪ.ಜಾ/ ಪ.ಪಂ. ವರ್ಗದವರಿಗೆ .25, ಸಾಮಾನ್ಯ ವರ್ಗಕ್ಕೆ .100 ಇದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!