ಅನ್ನ ನೀಡುವ ರೈತರು ಹಾಗೂ ದೇಶವನ್ನು ಕಾಯುವ ಯೋಧರು ನಮ್ಮ ಕಣ್ಣುಗಳಿದ್ದಂತೆ. ದೇಶದ ಗಡಿಭಾಗಗಳಲ್ಲಿ ಯೋಧರು ಪ್ರಾಣದ ಹಂಗು ತೊರೆದು ತ್ಯಾಗದ ಮನೋಭಾವನೆಯಿಂದ ದೇಶ ಕಾಯುತ್ತಾರೆ. ಅದು ಬೆಲೆ ಕಟ್ಟಲಾಗದ ಸೇವೆಯಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಸೆ.15): ಅನ್ನ ನೀಡುವ ರೈತರು ಹಾಗೂ ದೇಶವನ್ನು ಕಾಯುವ ಯೋಧರು ನಮ್ಮ ಕಣ್ಣುಗಳಿದ್ದಂತೆ. ದೇಶದ ಗಡಿಭಾಗಗಳಲ್ಲಿ ಯೋಧರು ಪ್ರಾಣದ ಹಂಗು ತೊರೆದು ತ್ಯಾಗದ ಮನೋಭಾವನೆಯಿಂದ ದೇಶ ಕಾಯುತ್ತಾರೆ. ಅದು ಬೆಲೆ ಕಟ್ಟಲಾಗದ ಸೇವೆಯಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ಗುರು ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದ್ಯಸ್ಯರ 10ನೇ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಏನು ಕೊಟ್ಟಿತು ಎಂಬುದು ಮುಖ್ಯವಲ್ಲ, ನಾನು ದೇಶಕ್ಕೆ ಏನು ಕೊಡಬೇಕು, ಕೊಟ್ಟಿದ್ದೇನೆ ಎಂಬ ಮನೋಭಾವನೆ ಮುಖ್ಯವಾಗಿದೆ. ಗಡಿಕಾಯುವ ಸೈನಿಕರು ತನ್ನ ಕುಟಂಬವನ್ನು ಮೆರೆತು ದೂರದ ದುರ್ಗಮ ಪ್ರದೇಶಗಳಲ್ಲಿ ಹಗಲು- ರಾತ್ರಿ ಗಡಿಗಳಲ್ಲಿ ಭಾರತ ಮಾತೆಯನ್ನು ರಕ್ಷಿಸುವ ಕೆಲಸ ಅನನ್ಯವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೈನಿಕರನ್ನು ಬೆನ್ನುತಟ್ಟಿ ಗೌರವಿಸಿದರು. ಪ್ರಧಾನಿ ನರೇಂದ್ರ ಮೋದಿ ಅಕ್ಕಪಕ್ಕದ ದೇಶಗಳಿಗೆ ಎಚ್ಚರಿಕೆ ನೀಡುತ್ತ, ಭದ್ರತೆಗೆ ಹೆಚ್ಚು ಆದ್ಯ ನೀಡಿದ್ದಾರೆ ಎಂದರು.
undefined
ಮನುಷ್ಯನಲ್ಲಿರುವ ಶ್ರೇಷ್ಠವಾದ ಜ್ಞಾನವೆಂದರೆ ಅದು ವಿಜ್ಞಾನ: ಸಚಿವ ಈಶ್ವರ್ ಖಂಡ್ರೆ
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾನು ಇರುವವರೆಗೂ ವಾರ್ಷಿಕ ಸಭೆಗೆ ಉಚಿತ ಊಟ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಈ ಸಂದರ್ಭದಲ್ಲಿ ವಾಗ್ದಾನ ನೀಡಿದರು. 2023- 2024ನೇ ಸಾಲಿನ ಆಡಿಟ್ ಆದ ಜಮಾ-ಖರ್ಚುನ್ನು ಸಂಘದ ಖಜಾಂಚಿ ಎಂ.ಆರ್. ತೋಟಪ್ಪ ಓದಿದರು. ಹುತಾತ್ಮರಾದ ಯೋಧರಿಗೆ ಮತ್ತು ನಿಧನರಾದ ಮಾಜಿ ಸೈನಿಕರಿಗೆ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷ ಎಂ.ವಾಸಪ್ಪ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ರೈತ ಸಂಘದ ಮುಖಂಡ ಹಿರೇಮಠದ ಬಸವರಾಜಪ್ಪ ಕಸಬಾ ಸೊಸೈಟಿ ಅಧ್ಯಕ್ಷ ಗೋಪಾಲಪ್ಪ ಮಾತನಾಡಿದರು. ಸೊರಟೂರು ಗ್ರಾಮದ ನಿವೃತ್ತ ಉಪನ್ಯಾಸಕ ಭರಮಗೌಡ ವಿಶೇಷ ಉಪನ್ಯಾಸ ನೀಡಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಕ್ಕನಹಳ್ಳಿ ಬಸವರಾಜಪ್ಪ, ಬಸವಂತಪ್ಪ, ರಾಮಪ್ಪ, ದಿಡಗೂರು ಹನುಮಂತಪ್ಪ, ಕಾರ್ಯದರ್ಶಿ ಗಂಗಾಧರ, ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಲಾರಾಧ್ಯ, ಬೆನಕನಹಳ್ಳಿ ಸಿದ್ದೇಶಪ್ಪ, ಅವಳಿ ತಾಲೂಕಿನ ಮಾಜಿ ಸೈನಿಕರು, ಕುಟಂಬದವರು ಇದ್ದರು.
Chamarajanagar: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರಾಜ್ಯದಲ್ಲಿ ಏಳನೇ ಸ್ಥಾನ
ಜೈ ಜವಾನ್ ಜೈ ಕಿಸಾನ್ ಎನ್ನುವಂತೆ ಸೈನಿಕರು ದೇಶವನ್ನು ರಕ್ಷಣೆ ಮಾಡಿದರೆ ರೈತರು ದೇಶಕ್ಕೆ ಅನ್ನ ಕೊಡುವ ಬೆನ್ನೆಲುಬಿನಂತೆ ಇದ್ದಾರೆ. ದೇಶದಲ್ಲಿ ಸೈನಿಕರಿಗೆ ಯಾವಾಗಲೂ ಗೌರವ ಸಿಗಬೇಕು. ಯಾವುದೇ ಸಂಘಟನೆ ಬಲಿಷ್ಠ ಆಗಬೇಕಾದರೆ ಸ್ವಾರ್ಥ ಇರಬಾರದು. ಸಂಘವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ