ಮೋದಿ ಎನ್ನುವ ಭ್ರಮ ಈಗ ಕಳಚಿ ಹೋಗಿದೆ ಎಂದು ನಾಯಕಿಯೋರ್ವರು ಹೇಳಿದ್ದಾರೆ. ದೇಶದಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು ಇದೇ ವೇಳೆ ಅಸಮಾಧಾನ ಹೊರ ಹಾಕಿದ್ದಾರೆ.
ಚಾಮರಾಜನಗರ (ಡಿ.09): ಈ ಹೋರಾಟ ಕೇವಲ ರೈತರ ಹೋರಾಟವಲ್ಲ, ರೈತರಿಗೆ ಸಂಬಂಧಿಸಿದ ಹೋರಾಟವಲ್ಲ, ಅನ್ನ ತಿನ್ನುವವರ ಹೋರಾಟ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ನಗರದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿ ಮಾತನಾಡಿ, ಪ್ರಗತಿಪರರು, ನಗರವಾಸಿಗಳು, ವಿವಿಧ ಸಂಘಟನೆಗಳ ಹೋರಾಟಗಾರರು ಇಂದು ಸ್ಪಂದಿಸುತ್ತಿರುವ ರೀತಿ ನೋಡಿದರೆ ಮೋದಿ ಎಂಬ ಭ್ರಮೆ ಕಳಚಿ ಬಿದ್ದಿದೆ ಎಂದರು.
undefined
ಯಾವತ್ತು ಆಗಿರದ ಅಭಿವೃದ್ಧಿ ಆಗಲಿದೆ, ಹಾಗಾಗಲಿದೆ-ಹೀಗಾಗಲಿದೆ, ಓರ್ವ ನೇತಾರ, ಆಧ್ಯಾತ್ಮಿಕ ಸಂತ ಪ್ರಧಾನಿಯಾಗಿದ್ದಾರೆ ಎಂಬ ಭ್ರಮೆಗೆ ಮಧ್ಯಮವರ್ಗ ಹಾಗೂ ಬಹುಸಂಖ್ಯಾತರು ಒಳಪಟ್ಟಿಲ್ಲ ಎನ್ನುವುದಕ್ಕೆ ಇಂದಿನ ಹೋರಾಟ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
'ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು' ಪಾಟೀಲರ ಬಿಸಿ ಹೇಳಿಕೆ! ..
ಕಳೆದ 14 ದಿನಗಳಿಂದ ನಡೆಯುತ್ತಿರುವ ಹೋರಾಟ ಪಂಜಾಬ್ ವರ್ಸಸ್ ಕೇಂದ್ರ ಸರ್ಕಾರವಾಗಿದೆ. ದಕ್ಷಿಣ ಭಾರತದ ರೈತ ಸಂಘಟನೆಗಳು ಅವರ ಪ್ರತಿಭಟನೆಯಲ್ಲಿ ಭಾಗಿಯಾಗದಿರಲು ರೈಲುಗಳಿಲ್ಲ, ಕೊರೋನಾ ಅಡ್ಡಿಯಾಗಿದೆ. ಹರ್ಯಾಣ ಮತ್ತು ಪಂಜಾಬ್ ದೆಹಲಿಗೆ ಸಮೀಪವಿರುವುದರಿಂದ ಪಂಜಾಬ್ ಹೋರಾಟದ ನೇತೃತ್ವ ವಹಿಸಿದೆ. ಈ ಮೂರು ಕಾನೂನುಗಳು ಕೇವಲ ರೈತರಿಗೆ ಸಂಬಂಧಿಸಿದ್ದಲ್ಲ, 3 ಹೊತ್ತು ಅನ್ನ ತಿನ್ನುವವರು ಪ್ರಶ್ನಿಸಬೇಕಾದ ಕಾನೂನುಗಳು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ನೋಡಿದರೆ ಮತ್ತೊಂದು ಸ್ವಾತಂತ್ರ್ಯ ಚಳವಳಿ ಆರಂಭವಾಗಿದೆ. ಇದು ಇಡೀ ದೇಶ ವ್ಯಾಪಿಸಬೇಕು ಎಂದು ಕರೆಕೊಟ್ಟರು.
ಬಿಜೆಪಿ ಧೋರಣೆ ನೋಡಿದರೆ ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ತೆಗೆದುಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ರೈತರ ಹಿತ ಕಾಯಲು ಇಷ್ಟುಸುತ್ತಿನ ಸಭೆಗಳು ಬೇಕಾಗಿತ್ತೇ?, ಬಹುಸಂಖ್ಯಾತರು ವಿರೋಧಿಸುತ್ತಿರುವಾಗ ಇಷ್ಟುಸುತ್ತಿನ ಮಾತುಕತೆ ಅವಶ್ಯಕತೆ ಬೇಕಾಗಿರಲಿಲ್ಲ. ಈಗ ನಮ್ಮನ್ನು ನಾವು ಎಚ್ಚರಿಸಿಕೊಳ್ಳಬೇಕು, ನಮ್ಮೊಳಗಿರುವ ಬಿಜೆಪಿ ಬೆಂಬಲವನ್ನು ಇಲ್ಲವಾಗಿಸಬೇಕು. ನಮ್ಮ ಹೋರಾಟ ಮುಂದಿನ ತಲೆಮಾರಿಗಾಗಿ ಎಂದು ಎಲ್ಲರಿಗೂ ಅರ್ಥೈಸಬೇಕು, ಜನಾಂದೋಲವಾಗಬೇಕೆಂದರು.