ವಿಜಯಪುರ: ಮಳೆಗಾಗಿ ಬೆಂಕಿ ಬಬಲಾದಿ ಮಠದ ಮೊರೆ ಹೋದ ಅನ್ನದಾತ..!

By Girish Goudar  |  First Published Oct 18, 2023, 10:45 PM IST

ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಇತ್ತ ಕುಡಿಯೋ ನೀರಿಗು ತತ್ವಾರ ಎದುರಾಗುತ್ತಿದೆ. ಹಿಂಗಾರಿ ಮಳೆಯು ಕೈಹಿಡಿಯುವ ಲಕ್ಷಣಗಳು ಕಾಣ್ತಿಲ್ಲ. ಹೀಗಾಗಿ ಬರದ ಹೊಡೆತಕ್ಕೆ ನಲುಗಿರುವ ರೈತರು ಈಗ ವಿಜಯಪುರ ಜಿಲ್ಲೆಯ ಪ್ರಸಿದ್ಧ ಕಾಲಜ್ಞಾನ ಬಬಲಾದಿ ಮಠದ ಸದಾಶಿವ ಅಜ್ಜನ ಮೊರೆ ಹೋಗಿದ್ದಾರೆ. ರೈತರು, ಜಾನುವಾರುಗಳ ಮೇಲೆ ಕರುಣೆ ತೋರಿ ಮಳೆ ಕೊಡು ಸದಾಶಿವ ಅಜ್ಜ ಅಂತಾ ಬೆಂಕಿ ಬಬಲಾದಿ ಮಠಕ್ಕೆ ದೌಡಾಯಿಸುತ್ತಿದ್ದಾರೆ.


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಅ.18):  ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಶಾಕ್‌ ಎದುರಾಗಿದೆ. ಸಧ್ಯದ ಬರದ ವಾತಾವರಣ ರೈತರಲ್ಲಿ ಆತಂಕ ಮೂಡಿಸಿದ್ದು, ಹೀಗೆ ಮುಂದುವರೆದರೆ ಕಥೆ ಏನು ಅನ್ನುವ ಭಯ ಆವರಿಸಿದೆ. ಹೀಗಾಗಿ ಮಳೆಗಾಗಿ ಈಗ ರೈತರು ಕಾಲಜ್ಞಾನಿ ಸದಾಶಿವ ಅಜ್ಜನ ಮೊರೆ ಹೋಗಿದ್ದಾರೆ. ಹಿಂಗಾರಿ ಮಳೆಯನ್ನಾದ್ರೂ ನೀಡು ಸದಾಶಿವ ಅಂತ ಬೆಂಕಿ ಬಬಲಾದಿ ಮಠಕ್ಕೆ ಪಾದಯಾತ್ರೆ ತೆರಳಿ ಮೊರೆ ಇಡ್ತಿದ್ದಾರೆ. 

Tap to resize

Latest Videos

ಮಳೆಗಾಗಿ ಬೆಂಕಿ ಬಬಲಾದಿ ಮಠದ ಮೊರೆ ಹೋದ ರೈತರು..!

ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಇತ್ತ ಕುಡಿಯೋ ನೀರಿಗು ತತ್ವಾರ ಎದುರಾಗುತ್ತಿದೆ. ಹಿಂಗಾರಿ ಮಳೆಯು ಕೈಹಿಡಿಯುವ ಲಕ್ಷಣಗಳು ಕಾಣ್ತಿಲ್ಲ. ಹೀಗಾಗಿ ಬರದ ಹೊಡೆತಕ್ಕೆ ನಲುಗಿರುವ ರೈತರು ಈಗ ವಿಜಯಪುರ ಜಿಲ್ಲೆಯ ಪ್ರಸಿದ್ಧ ಕಾಲಜ್ಞಾನ ಬಬಲಾದಿ ಮಠದ ಸದಾಶಿವ ಅಜ್ಜನ ಮೊರೆ ಹೋಗಿದ್ದಾರೆ. ರೈತರು, ಜಾನುವಾರುಗಳ ಮೇಲೆ ಕರುಣೆ ತೋರಿ ಮಳೆ ಕೊಡು ಸದಾಶಿವ ಅಜ್ಜ ಅಂತಾ ಬೆಂಕಿ ಬಬಲಾದಿ ಮಠಕ್ಕೆ ದೌಡಾಯಿಸುತ್ತಿದ್ದಾರೆ.

ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ಯುವಕರ ದುರ್ಮರಣ

ಎತ್ತಿನ ಬಂಡಿ ಹೂಡಿಕೊಂಡು ಕಾಲ್ನಡಿಗೆ ಯಾತ್ರೆ..!

ಬರಗಾಲ ಆವರಿಸುವ ಕಾರಣ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ  ರೈತರು ಎತ್ತಿನ ಬಂಡಿಗಳ ಹೂಡಿಕೊಂಡು ಬಬಲಾದಿ ಮಠಕ್ಕೆ ಪಾದಯಾತ್ರೆ ಹೋಗ್ತಿದ್ದಾರೆ. ಅಲ್ಲಿ ಸದಾಶಿವ ಅಜ್ಜನ ದರ್ಶನ ಪಡೆದು ಮಳೆ ಕೊಡುವಂತೆ ಬೇಡಿಕೊಳ್ತಿದ್ದಾರೆ. ಹೀಗೆ ಬೇಡಿಕೊಂಡರೆ ಸದಾಶಿವ ಅಜ್ಜ ಮಳೆ ಕೊಡ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿಯೇ ಬರದಿಂದ ಕಂಗೆಟ್ಟಿರುವ ರೈತರು ಬಬಲಾದಿ ಮಠಕ್ಕೆ ಭಕ್ತಿಯಿಂದ ಕಾಲ್ನಡಿಗೆ ಹೋಗ್ತಿದ್ದಾರೆ‌.

ಕೋವಿಡ್ ಸಂದರ್ಭದಲ್ಲು ಕಾಲಜ್ಞಾನ ಮಠಕ್ಕೆ ಮುಗಿಬಿದ್ದಿದ್ದ ಭಕ್ತರು..!

ಅಷ್ಟಕ್ಕು ಮಳೆಗಾಗಿ ರೈತರು-ಭಕ್ತರು ಬಬಲಾದಿ ಮಠಕ್ಕೆ ಯಾಕೆ ಮೊರೆ ಹೋಗಿದ್ದಾರೆ ಅನ್ನೋದಕ್ಕೆ ಇಲ್ಲಿ ಕಾರಣವು ಇದೆ. ಹಿಂದೆ ಕೋವಿಡ್‌ ಮಹಾಮಾರಿ ಹೊತ್ತಿ ಉರಿದಾಗ ಬಬಲಾದಿ ಮಠದಿಂದ 5 ಸೋಮವಾರ ಮನೆಯಲ್ಲಿ ಸದಾಶಿವ ಅಜ್ಜನಿಗೆ ಅಂಬಲಿ-ಕಾಯಿ ನೈವೇದ್ಯ ಮಾಡುವಂತೆ ಸಂದೇಶ ನೀಡಲಾಗಿತ್ತು. ಭಕ್ತರು ಬಬಲಾದಿ ಸಿದ್ದು ಮುತ್ಯಾ ಹೇಳಿದಂತೆ ಅಂಬಲಿ-ಕಾಯಿ ನೈವೇದ್ಯ ಮಾಡಿದ್ರು, ಬಳಿಕ ಹೊತ್ತಿ ಉರಿಯುತ್ತಿದ್ದ ಕೊರೊನಾ ಹತೋಟಿಗೆ ಬಂದಿತ್ತು, ಗ್ರಾಮೀಣ ಪ್ರದೇಶದಲ್ಲಿ ಸಾವು-ನೋವುಗಳು ಕಡಿಮೆಯಾಗಿದ್ವು. ಹೀಗಾಗಿ ಇದೆ  ಕಾರಣಕ್ಕೆ ರೈತರು ಮಳೆಗಾಗಿ ಬೆಂಕಿ ಬಬಲಾದಿ ಕಾಲಜ್ಞಾನಿ ಸದಾಶಿವ ಅಜ್ಜನ ಮೊರೆ ಹೋಗ್ತಿದ್ದಾರೆ..

ವಿಜಯಪುರದಲ್ಲಿ ಮಳೆ ಇಲ್ಲದೆ ಬರ ತಾಂಡವ: ಸಭೆಯಲ್ಲೆ ರಾಜೀನಾಮೆ ಕೊಡ್ತೀನಿ ಎಂದ ನಾಗಠಾಣ ಶಾಸಕ

ಬರದ ನಡುವೆ ಬಬಲಾದಿ ಮಠದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ..!

ಮಳೆ ನೀಡುವಂತೆ ಬಬಲಾದಿ ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೂರು ಜಿಲ್ಲೆಗಳ ಕೃಷ್ಣಾ ನದಿ ತೀರದ ರೈತರೆ ಹೆಚ್ಚಿನ ಪ್ರಮಾಣದಲ್ಲಿ ಬರ್ತಿದ್ದು, ಮಠ ತುಂಬಿ ತುಳುಕುತ್ತಿದೆ. ಅದ್ರಲ್ಲು ಪ್ರತಿ ಸೋಮವಾರ ಭಕ್ತರನ್ನ ನಿಯಂತ್ರಿಸಲು ಮಠದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಈ ನಡುವೆ ಸಾಕ್ಷಾತ್‌ ಶಿವನ ಸ್ವರೂಪಿಯಾದ ಕಾಲಜ್ಞಾನಿ ಸದಾಶಿವ ಅಜ್ಜ ಹಿಂಗಾರಿ ಮಳೆಯನ್ನಾದ್ರು ಕರುಣಿಸ್ತಾನೆ ಎನ್ನುವ ನಂಬಿಕೆಯಲ್ಲಿದೆ ರೈತಾಪಿ ವರ್ಗ. 

ಕೋವಿಡ್, ಜಲಪ್ರಳಯ, ಭೂಕಂಪ, ಯುದ್ಧಗಳ ಬಗ್ಗೆ ನಿಖರ ಭವಿಷ್ಯ..!

ಇನ್ನು ಬಬಲಾದಿ ಮಠದ ಮೇಲೆ ಭಕ್ತರು ಇಷ್ಟೊಂದು ವಿಶ್ವಾಸವಿಡೋದಕ್ಕು ಕಾರಣಗಳಿವೆ. ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠದಲ್ಲಿ ಏನೇ ಭವಿಷ್ಯ ನುಡಿದ್ರು ಅದು ಸತ್ಯವಾಗುತ್ತೆ. ಜಗತ್ತಿನಲ್ಲಿ ನಡೆದ ಅನೇಕ ವಿಪ್ಲವಗಳ ಬಗ್ಗೆ ಬಬಲಾದಿ ಮಠ ಭವಿಷ್ಯ ನುಡಿದಿದೆ. ಹಿಂದೆ ಸದಾಶಿವ ಅಜ್ಜನವರು ಮುಂಡಗಿ ಪದಗಳ ರೂಪದಲ್ಲಿ ಬರೆದಿಟ್ಟ ಕಾಲಜ್ಞಾನವನ್ನ ಪ್ರತಿವರ್ಷ ಬದಲಾಗುತ್ತದೆ. ಇಲ್ಲಿ ನುಡಿದ ಭವಿಷ್ಯ ಸತ್ಯವಾಗುತ್ತೆ.  ಕೋವಿಡ್ ಬಗೆಗೆ ಇಲ್ಲಿ ನಿಖರ ಭವಿಷ್ಯವನ್ನ ನುಡಿಯಲಾಗಿತ್ತು, ಅನೇಕ ಯುದ್ಧ ಸಂದರ್ಭಗಳ ಬಗ್ಗೆ ನುಡಿಯಲಾಗಿತ್ತು. ಜಲಪ್ರಳಯದ ಬಗ್ಗೆಯೂ ಭವಿಷ್ಯ ನುಡಿಯಲಾಗಿದೆ. ಅವೆಲ್ಲವೂ ಸತ್ಯವಾಗಿವೆ. 

click me!