ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್ : ಮುಖಂಡರು ಕಿಡಿ

By Kannadaprabha NewsFirst Published Dec 10, 2020, 11:09 AM IST
Highlights

ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು ಇದಕ್ಕೆ ಮುಖಂಡರು ಕಿಡಿಕಾರಿದ್ದಾರೆ. ಇದರಿಂದ ನಿಜಮುಖ ಬಯಲಾಗಿದೆ ಎಂದಿದ್ದಾರೆ. 

ಮಳವಳ್ಳಿ (ಡಿ.10):  ವಿಧಾನ ಪರಿಷತ್‌ನಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ-2020ರ ಅಂಗೀಕಾರಕ್ಕೆ ಬಿಜೆಪಿ ಜತೆ ಕೈ ಜೋಡಿಸಿ ಜೆಡಿಎಸ್‌ ತನ್ನ ನಿಜ ಮುಖವನ್ನು ಬಯಲುಗೊಳಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್‌.ಎಲ್.ಭರತ್‌ ರಾಜ್‌ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ದೇಶ್ಯಾಂದಂತ ಕಾರ್ಪೊರೇಟ್‌ ಕೃಷಿ ನೀತಿಯ ಸಾವಿರಾರು ಸಂಘಟನೆಗಳು ಭಾರತ್‌ ಬಂದ್‌ ನಡೆಸುತ್ತಿದ್ದ ದಿನವೇ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ತನ್ನ ಸರ್ವಾಧಿಕಾರಿ ಧೋರಣಿ ಮೂಲಕ ಕಾರ್ಪೊರೇಚ್‌ ಕಂಪನಿಗಳ ಪರ ನಿಂತು ವಿಧಾನ ಪರಿಷತ್ತಿನಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ-2020ಯನ್ನು ಮಂಡಿಸಿ ಅಂಗೀಕಾರ ಪಡೆದಿದ್ದು, ಅದಕ್ಕೆ ಜೆಡಿಎಸ್‌ ಪಕ್ಷ ಬೆಂಬಲ ನೀಡಿರುವುದನ್ನು ಖಂಡಿಸಿದ್ದಾರೆ.

ಕೈ ನಾಯಕಿ ಮರಳಿ ಜೆಡಿಎಸ್ ಸೇರ್ಪಡೆ : ಚುನಾವಣೆ ಬೆನ್ನಲ್ಲೇ ಶಾಕ್

ಈ ತಿದ್ದುಪಡಿ ಕಾಯ್ದೆಯು ಕೃಷಿಯನ್ನು ರೈತರ ಕೈಯಿಂದ ಕಂಪನಿಗಳ ಕೈಗೆ ವರ್ಗಾಯಿಸಲು ನೆರವಾಗುವ ಸಾಧನವಾಗಿದೆ. ಅಲ್ಲದೇ ಭ್ರಷ್ಠತೆಯ ಮೂಲಕ ಸಂಗ್ರಹಿಸುವ ಕಪ್ಪು ಹಣವನ್ನು ಬಿಳಿಯಾಗಿಸಲು ಸಹಕಾರಿಯಾಗಿದೆ. ಉದ್ಯೋಗ ಭದ್ರತೆಯನ್ನು ದುರ್ಬಲಗೊಳಿಸಲಾಗಿದೆ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿ ರಾಜ್ಯದೊಳಗೆ ಆರ್ಥಿಕ ಅಸಮಾನತೆಯನ್ನು ತೀವ್ರವಾಗಿ ಹೆಚ್ಚಿಸುತ್ತದೆ. ಕೂಡಲೇ ಈ ತಿದ್ದುಪಡಿ ಮಸೂದೆಯನ್ನು ಪ್ರಕಟಿಸದೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

click me!