ನಕಲಿ ನೆಗೆಟಿವ್ ರಿಪೋರ್ಟ್ ತಂದ ನಾಲ್ವರು ಕೇರಳಿಗರು ಅರೆಸ್ಟ್

By Suvarna NewsFirst Published Aug 26, 2021, 12:26 PM IST
Highlights
  • ಮಂಗಳೂರು ಪ್ರವೇಶಕ್ಕೆ ನಕಲಿ ನೆಗೆಟಿವ್ ರಿಪೋರ್ಟ್ ತಂದ ನಾಲ್ವರ  ಅರೆಸ್ಟ್
  • ಮಂಗಳೂರು ಹೊರವಲಯದ ತಲಪಾಡಿ ಗಡಿಭಾಗದಲ್ಲಿ ಇಂದು ನಾಲ್ವರ ಬಂಧನ

ಮಂಗಳೂರು (ಆ.26):  ಮಂಗಳೂರು ಪ್ರವೇಶಕ್ಕೆ ನಕಲಿ ನೆಗೆಟಿವ್ ರಿಪೋರ್ಟ್ ತಂದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರು ಹೊರವಲಯದ ತಲಪಾಡಿ ಗಡಿಭಾಗದಲ್ಲಿ ಇಂದು ನಾಲ್ವರ ಬಂಧನವಾಗಿದೆ.

ಕೇರಳದಿಂದ ಬಂದಿದ್ದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್  ನಕಲಿ ಕೋವಿಡ್ ನೆಗೆಟಿವ್ ಆರ್ ಟಿಪಿಸಿಆರ್ ರಿಪೋರ್ಟ್ ತಂದಿದ್ದರು. ಈ ಕೃತ್ಯ ಎಸಗಿದ ಹಿನ್ನೆಲೆ ಕೇರಳದ ನಾಲ್ವರನ್ನು ಬಂಧಿಸಲಾಗಿದೆ. 

ದಕ್ಷಿಣ ಕನ್ನಡ: 20 ದಿನದಲ್ಲಿ 630 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌..!

ಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ರಿಪೋರ್ಟ್ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ್ದರು. ಗಡಿಯಲ್ಲಿ ತಡೆದು ರಿಪೋರ್ಟ್ ಪರಿಶೀಲಿಸಿದಾಗ ನಕಲಿ‌ ಎನ್ನುವುದು ಬೆಳಕಿಗೆ ಬಂದಿದೆ.  ಇದರಲ್ಲಿ ಓರ್ವ ವಿದ್ಯಾರ್ಥಿಯಾಗಿದ್ದು, ಉಳಿದ ಮೂವರು ಆಸ್ಪತ್ರೆ ನೆಪದಲ್ಲಿ ಮಂಗಳೂರಿಗೆ ಬರುತ್ತಿದ್ದರು.

ಮೊಬೈಲ್ ‌ನಲ್ಲಿ ರಿಪೋರ್ಟ್ ತೋರಿಸಿದಾಗ ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ನಕಲಿ ರಿಪೋರ್ಟ್ ತಂದಿರುವುದು ಬೆಳಕಿಗೆ ಬಂದಿದ್ದು, ಬಂಧಿತ ನಾಲ್ವರನ್ನು ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸಿದ್ದಾರೆ.

click me!