ದೇಶಕ್ಕೆ ಅನ್ನ ಹಾಕುವ ರೈತರಿಗೆ ಖಾಸಗಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡಿದರೇ ನಾನು ಸಹಿಸುವುದಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕಾಗವಾಡ (ಜೂ.30) : ದೇಶಕ್ಕೆ ಅನ್ನ ಹಾಕುವ ರೈತರಿಗೆ ಖಾಸಗಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡಿದರೇ ನಾನು ಸಹಿಸುವುದಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಐನಾಪುರದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತ ಒಂದು ಟನ್ ಕಬ್ಬು ಬೆಳೆಯಬೇಕಾದರೆ ಎಷ್ಟುಶ್ರಮ ಪಡುತ್ತಾನೆ. ಟ್ರ್ಯಾಕ್ಟರ್ ಮಾಲೀಕ ಬಾಡಿಗೆ, ಕಬ್ಬು ಕಟಾವು ಮಾಡುವ ಶ್ರಮಿಕರ ಶ್ರಮದ ಹಣವನ್ನು ಲೂಟಿ ಹೊಡೆಯುತ್ತಿರಲ್ಲ ನಿಮಗೇನಾದರು ನಾಚಿಕೆ, ಮಾನ, ಮರ್ಯಾದೆ ಇದೇಯಾ ? ಎಂದು ಪ್ರಶ್ನಿಸಿದರು.
ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಿ: ಶಾಸಕ ಲಕ್ಷ್ಮಣ ಸವದಿ ಸೂಚನೆ
ರೈತ ಇಂದು ಗಂಡು, ಹೆಣ್ಣು ಎಂಬ ಲಿಂಗಬೇಧವಿಲ್ಲದೆ ವರ್ಷವಿಡಿ ದುಡಿದು ಬೆಳೆಸಿದ ಕಬ್ಬನ್ನು ಕೆಲ ಖಾಸಗಿ ಕಾರ್ಖಾನೆಗಳಿಗೆ ಕಳುಹಿಸಿದರೆ ಅವರು ಪ್ರತಿ ಟ್ರ್ಯಾಕ್ಟರ್‌ಗೆ ಸುಮಾರು 2 ರಿಂದ 3 ಟನ್ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡಿ ರೈತರಿಗೆ ಮೋಸ ಮಾಡಿ ಒಬ್ಬೊಬ್ಬರು ಮುರ್ನಾಲ್ಕು ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಿದ್ದಿರಲ್ಲ ಈ ದುಡ್ಡು ಎಲ್ಲಿಂದ ಬಂತು?ಎಂದು ಪ್ರಶ್ನಿಸಿ ನಾನು ಯಾವೊಂದು ಕಾರ್ಖಾನೆಯನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತಂತೆ ಹಿಂದಿನ ಬಿಜೆಪಿ ಸರ್ಕಾರವಿದ್ದಾಗದ ಅಧಿವೇಶನದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಆಗುತ್ತಿರುವ ಮೋಸದ ಬಗ್ಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದೆ. ಆಗಿನ ಸಕ್ಕರೆ ಸಚಿವರು ಕಾಟಾಚಾರಕ್ಕೆ ಒಂದು ನಿಯೋಗ ಕಳುಹಿಸಿ ಎಲ್ಲ ಕಾರ್ಖಾನೆಗಳಿಗೆ ಮೊದಲೇ ಮಾಹಿತಿ ಕೊಟ್ಟು ತಪಾಸಣೆ ಮಾಡಿ ಎಲ್ಲವು ಸರಿ ಇದೆ ಎಂದು ವರದಿ ನೀಡಿದರು ಎಂದು ತಿಳಿಸಿದರು.
ಕೆಲವು ರೈತರು ಖಾಸಗಿ ವೇ-ಬ್ರಿಜ್‌ಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ತೂಕ ಮಾಡಿಕೊಂಡು ಹೋದರೆ ಆ ವೇಬ್ರಿಜ್‌ನವರು ಸಕ್ಕರೆ ಕಾರ್ಖಾನೆಗಳಿಗೆ ಇಂಥ ನಂಬರಿಗೆ ವಾಹನ ತೂಕ ಮಾಡಿಕೊಂಡು ಹೋಗಿದೆ. ಅದರ ತೂಕ ಇಷ್ಟಿದೆ ಎಂದು ಮಾಹಿತಿ ನೀಡುತ್ತಾರೆ. ಆಗ ಕಾರ್ಖಾನೆಯವರು ಖಾಸಗಿ ವೇಬ್ರಿಜ್‌ನಲ್ಲಿ ಎಷ್ಟುತೂಕ ಬಂದಿದೇಯೋ ಅಷ್ಟೇ ತೂಕವನ್ನು ಕಾರ್ಖಾನೆಯವರು ತೋರಿಸುತ್ತಾರೆ. ತೂಕ ಮಾಡದೆ ಹೋದ ವಾಹನಗಳಿಂದ ತೂಕದಲ್ಲಿ ವ್ಯತ್ಯಾಸ ಮಾಡಿ ಮೋಸವೆಸಗುತ್ತಿದ್ದಾರೆ ಎಂದು ದೂರಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬನ್ನು ತೂಕಮಾಡಲು ಇಲೆಕ್ಟ್ರಾನಿಕ್ ವೇಬ್ರಿಜ್‌ಗಳಿವೆ. ಅವುಗಳನ್ನು ರಿಮೋಟ್ ಮೂಲಕ ನಿಯಂತ್ರಿಸುತ್ತಾರೆ. ಎಷ್ಟುತೂಕಕ್ಕೆ ಏಷ್ಟುವ್ಯತ್ಯಾಸ ಮಾಡುವುದನ್ನು ತೋರಿಸುತ್ತದೆ. ಆ ರೀತಿ ಮಾಡುತ್ತಾರೆ. ಇದರಿಂದ ರೈತರಿಗೆ ಕಬ್ಬಿನ ತೂಕದಲ್ಲಿ ಭಾರಿ ಮೋಸವಾಗುತ್ತಿದೆ ಎಂದು ಕಿಡಿಕಾರಿದರು.
ಕೆಲಸ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಶಾಸಕ ಸವದಿ ಖಡಕ್ ಸೂಚನೆ
ಈ ಕುರಿತಂತೆ ನಾನು ಮತ್ತು ರಾಜು ಕಾಗೆ ಕೂಡಿಕೊಂಡು ನಾಳೆ ನಡೆಯಲಿರುವ ಅಧಿವೇಶನದಲ್ಲಿ ಕಬ್ಬಿನ ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸದ ಬಗ್ಗೆ ಬೆಳಕು ಚೆಲ್ಲಿ ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆವು.
ಲಕ್ಷ್ಮಣ ಸವದಿ, ಶಾಸಕರು ಅಥಣಿ ಮತಕ್ಷೇತ್ರ.