ಸರ್ಕಾರದ ಸವಲತ್ತು, ಮೂಲ ಸೌಲಭ್ಯ ಕಲ್ಪಿಸಲು ಶಾಸಕರು ಹಾಗೂ ಜನರಿಗೆ ಸೇತುವೆಯಾಗಿ ಕೆಲಸ ಮಾಡುವವರೇ ನಗರಸಭೆ, ಗ್ರಾಪಂ ಸದಸ್ಯರು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ಕೊಳ್ಳೇಗಾಲ (ನ.02): ನೂತನ ಸದಸ್ಯರು ವಾರ್ಡ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಅರಿಯಬೇಕು. ಕೊಳ್ಳೇಗಾಲದ ಬಹುತೇಕ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಎಲ್ಲಾ ಸದಸ್ಯರಿಗೂ ಅರಿವಿರಬೇಕು. ಅದು ನನ್ನ ವಾರ್ಡ್, ಇದು ನಿನ್ನ ವಾರ್ಡ್ ಎನ್ನುವ ಬದಲು ಎಲ್ಲ ಸಮಸ್ಯೆ ಅರಿತು ಸ್ಪಂದಿಸಿ, ಚುನಾವಣೆ ಬಳಿಕ ಮತ ನೀಡಿದವರಿಗಿಂತ ಮತ ನೀಡದವರು ಕಡೆಗೂ ಗಮನಹರಿಸಬೇಕಿರುವುದು ನಿಮ್ಮ ಆದ್ಯತೆಯಾಗಬೇಕು. ಜನರ ಮನಸ್ಸು ಗೆಲ್ಲುವಂತಹ ಶಕ್ತಿ ಇರುವುದು ಗ್ರಾಪಂ, ಪಪಂ ಮತ್ತು ನಗರಸಭೆ ಸದಸ್ಯರಿಗೆ ಮಾತ್ರ. ಸರ್ಕಾರದ ಸವಲತ್ತು, ಮೂಲ ಸೌಲಭ್ಯ ಕಲ್ಪಿಸಲು ಶಾಸಕರು ಹಾಗೂ ಜನರಿಗೆ ಸೇತುವೆಯಾಗಿ ಕೆಲಸ ಮಾಡುವವರೇ ನಗರಸಭೆ, ಗ್ರಾಪಂ ಸದಸ್ಯರು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಗರಸಭೆ ಯಲ್ಲಿ (By Election) ಗೆಲುವು ಕಂಡ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಉಪಚುನಾವಣೆಯಲ್ಲಿ ಗೆಲುವಿನಿಂದಾಗಿ ಮುಂದೆ ನೀವು ಮಾಡುವ ಕೆಲಸದಿಂದ ಪಕ್ಷಕ್ಕೆ (Party ) ಬರುವಂತೆ ನಡೆದುಕೊಳ್ಳಿ, ಆನೆ (Elephant) ಇದೆಯೋ ಇಲ್ಲವೊ ಗೊತ್ತಿಲ್ಲ, ಸಮಯ ಸಂದರ್ಭ ಬಂದಾಗ ಆನೆಯೂ ಆಗಬೇಕು, ನರಿಯೂ ಆಗಬೇಕಾಗುತ್ತದೆ.ಆದರೆ ಜನ ಸಮಸ್ಯೆಗೆ ಸ್ಪಂದಿಸುವುದು ನಿಮ್ಮ ಆದ್ಯತೆಯಾಗಬೇಕು, ಉಪಚುನಾವಣೆಗಳನ್ನು ಎದುರಿಸುವುದು ಸುಲಭದ ಕೆಲಸವಲ್ಲ, ಈ ಚುನಾವಣೆಯಲ್ಲಿ ಗೆಲ್ಲಲು ಅನೇಕ ಕಷ್ಟಪಟ್ಟಿದ್ದಿರ ನಿಮಗೆ ಒಳ್ಳೆಯದ್ದಾಗಲಿ ಎಂದು ಶುಭಕೋರಿದರು.
undefined
ಮಹೇಶ್ ಮಂತ್ರಿಯಾಗಿದ್ದರು. ಅವರು ಯಾವುದಾದರೂ ಒಂದು ಫೈಲ್ ಪರಿಶೀಲಿಸಿದ್ರಾ ಕೇಳಿ. ಅದೆನೊ ಆಯಿತು ಬಿಡಿ, ಮುಂದಿನ ಬಾರಿ ಅವರನ್ನು ಗೆಲ್ಲಿಸಿ ಅವರನ್ನೆ ಮಂತ್ರಿ ಮಾಡಿ, ಇನ್ನುಳಿದ ಮೂರು ತಿಂಗಳಲ್ಲಿ ಇನ್ನೆನೋ ಮಾಡಿ ನನ್ನ ಮೇಲೆ ಸುಂಟರಗಾಳಿ ಬೀಸುವಂತೆ ಮಾಡಬೇಡಿ ಎಂದರು.
ಕೇಂದ್ರ ಹಾಗೂ ಸರ್ಕಾರ ಹತ್ತು ಹಲವು ಯೋಜನಗಳನ್ನು ಜಾರಿಗೊಳಿಸಿದೆ. ಹತ್ತಾರು ಸಾವಿರ ಸವಲತ್ತು ಪ್ರತಿ ಮನೆಗೂ ತಲುಪುತ್ತಿದೆ. ಆದರೆ
ಇದೆಲ್ಲಾ ರಾಷ್ಟ್ರದ ಪ್ರಧಾನಿ ದೂರದೃಷ್ಟಿಚಿಂತನೆಯಿಂದಾಗಿ ಎಂದರಲ್ಲದೆ ಬಡವರಿಗೆ ಅವರ ದೂರದೃಷ್ಟಿಫಲದಿಂದಾಗಿ ಅನುಕೂಲವಾಗಿದೆ ಎಂದರು.
ಮುಸಲ್ಮಾನ ಬಂಧುಗಳು ಈ ಬಾರಿ ಬಿಜೆಪಿ ಬೆಂಬಲಿಸಿ ಗೆಲ್ಲಿಸಿದ್ದು ನನಗೆ ಸಂತಸ ತಂದಿದೆ. ಸ್ವತಂತ್ರ ಬಂದು 75ವರ್ಷದ ಬಳಿಕ ಹಿಂದೂ,
ಮುಸ್ಲಿಮರೆಲ್ಲರೂ ಒಗ್ಗೂಡಿ ಮುಸ್ಲಿಂ ಒಬ್ಬರನ್ನು ಗೆಲ್ಲಿಸಿರುವುದು ನಿಜಕ್ಕೂ ಸಂತಸದ ವಿಚಾರ, ಬಿಜೆಪಿ ಯಾವುದೆ ಸವಲತ್ತುಗಳನ್ನು ನೇರವಾಗಿ ತಲುಪುವ
ಪ್ರತಿಫಲಕ್ಕೆ ಮುಸಲ್ಮಾನರು ಮುಂದಿನ ದಿನಗಳಲ್ಲೂ ಸಹಕರಿಸಬೇಕು, ಆಮೂಲಕ ಬಿಜೆಪಿ ಬೆಂಬಲಿಸಬೇಕು ಎಂದರು.
ಮೋದಿಯಂಥ ಪ್ರಧಾನಿಗಳ ಅವಶ್ಯ
ದೇಶ ಪಕ್ವವಾಗುತ್ತಿದೆ ಎನ್ನುವುದಕ್ಕಿಂತ ಭವಿಷ್ಯದಲ್ಲಿ ರಾಷ್ಟ್ರಕ್ಕೆ ಮೋದಿಯವರಂತಹ ಪ್ರಧಾನಿಯವರಂತಹ ಅವಶ್ಯಕತೆ ಇದೆ ಎಂಬುದನ್ನು
ರಷ್ಯಾದ ಪುಟಿನ್ ಅವರೇ ಹೇಳುತ್ತಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಉತ್ತರ ಪ್ರದೇಶದ ಚುನಾವಣೆ ವೇಳೆ ಅನೇಕ ಮುಸ್ಲಿಂ ಬಾಂಧವರ ಜೊತೆ ಚರ್ಚಿಸಿದ ವೇಳೆ ನಮಗೆ ಮೋದಿ, ಯೋಗಿಯಂತಹ ನಾಯಕರು ಬೇಕು ಅವರು ರೌಡಿಗಳನ್ನು ಬಗ್ಗು ಬಡಿದಿದ್ದಾರೆ, ಶಾಂತಿ ನೆಮ್ಮದಿಯಿಂದಿದ್ದೆವೆ ಎಂದು ತಿಳಿಸಿದರು. ಇದು ಬಿಜೆಪಿಯ ತಾಕತ್ತು, ಪ್ರಧಾನಿ ಮೋದಿ ಮತ್ತು ಯೋಗಿಯವರ ಶಕ್ತಿ ಎಂದರು ನಂಬಿಕೆ ಎನ್ನುವುದು ತಾಯಿ ಸಮಾನ, ನಗರ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಶಾಂತಿ ನೆಮ್ಮದಿ ಬೇಕು, ಅವರಿಗೆ ನಿರೀಕ್ಷೆ ಇರದು. ಅವರು ಬಯಸುವುದು ಮೂಲ ಸೌಲಭ್ಯ ಮಾತ್ರ, ಅಂತಹ ಸೌಲಭ್ಯ ಹಾಗೂ ವ್ಯವಹಾರಿಕವಾಗಿ ಕೊಳ್ಳೇಗಾಲ ನಗರಸಭೆಯೇ ಚಾ.ನಗರ ನಗರಸಭೆಗಿಂತ ಮುಂದಿದೆ, ನಂಬಿಕೆ ಮತ್ತು ಬಡತನದಲ್ಲಿ ತೀರಾ ಹಿಂದುಳಿದ ಪ್ರದೇಶ ಹನೂರು ಮತ್ತು ಕೊಳ್ಳೇಗಾಲ ಎಂಬುದನ್ನ ತೀರಾ ಹತ್ತಿರದಿಂದ ಬಲ್ಲೆ ಎಂದರು.
ಈಸಂದರ್ಭದಲ್ಲಿ ಶಾಸಕ ಮಹೇಶ್, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಚುನಾವಣಾ
ಉಸ್ತುವಾರಿ ನಾಗಶ್ರೀ ಪ್ರತಾಪ್, ಎ. ಆರ್ ಬಾಬು, ಮಂಗಲ ಶಿವಕುಮಾರ್, ನಾರಾಯಣಪ್ರಸಾದ್, ನಟರಾಜಗೌಡ, ಡಾ.ದತ್ತೇಶ್ ಕುಮಾರ್, ಪ್ರಣಯ್, ಚಿಂತು ಪರಮೇಶ್, ಮಧುಚಂದ್ರ, ಸೋಮಣ್ಣ, ಮೋಳೆ ನಟರಾಜು, ಮಾಂಬಳ್ಳಿ ಮಲ್ಲಿಕ್, ಶಂಕನಪುರ ಜಗದೀಶ್, ಶಿವಣ್ಣ, ರಾಜಪ್ಪ, ಮಹದೇವಸ್ವಾಮಿ, ಗಿರೀಶ್ ಬಾಬು ಇನ್ನಿತರರು ಇದ್ದರು.
ಕಾರ್ಯಕ್ರಮದಲ್ಲಿ ಗೆಲುವು ಸಾಧಿಸಿದ ಮಾನಸ, ಪವಿತ್ರ, ನಾಸೀರ್, ರಾಮಕೃಷ್ಣ, ಪ್ರಕಾಶ್, ರಾಮಕೃಷ್ಣ, ನಾಗಸುಂದ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಪರಾಜಿತಗೊಂಡ ಅಭ್ಯರ್ಥಿ ಪತಿ ನಾಗಮಣಿ ಗೋಪಾಲ್ ಅವರನ್ನು ಅಭಿನಂದಿಸಿದ್ದು ಗಮನ ಸೆಳೆಯಿತು. ಜೊತೆಗೆ ಉಪಚುನಮಾವಣೆಯಲ್ಲಿ ಪ್ರಭಾರಿಗಳಾಗಿ ಕೆಲಸ ನಿರ್ವಹಿಸಿದ ನಾಗಶ್ರೀ ಪ್ರತಾಪ್, ಮಂಗಲ ಶಿವಕುಮಾರ್ ಮತ್ತಿತರರನ್ನು ಗೌರವಿಸಲಾಯಿತು.
————-
ಉಪಚುನಾವಣೆಯಲ್ಲಿನ ಗೆಲುವು ಬಿಜೆಪಿಯ ಮುಂದಿನ ಚುನಾವಣೆಯ ದಿಕ್ಸೂಚಿ, 2023ರ ಚುನಾವಣೆಯಲ್ಲಿ ಇದು ಮರುಕಳಿಸಲಿದೆ. ಕಾಲೆæಳೆಯುವವರು, ಅಪಪ್ರಚಾರಕ್ಕೆ ಬೆಲೆ ನೀಡಲ್ಲ ಎಂದು ಸಾಬೀತು ಮಾಡಿದ್ದಾರೆ . ಇದೆ ಪ್ರಜಾಪ್ರಭುತ್ವದ ಗೆಲುವು, ಒಳೇಟು, ಕುತಂತ್ರ ರಾಜಕಾರಣದಲ್ಲಿ ಸರಿಯಲ್ಲ ಎಂಬುದನ್ನ ಈ ಚುನಾವಣೆಯಲ್ಲಿ ಮತದಾರರು ಸಾಭೀತು ಮಾಡಿದ್ದಾರೆ. ನಾನು ಯಾವುದೆ ಒಬ್ಬರ ಮೇಲೆ ಬೊಟ್ಟು ಮಾಡಿ ತೋರಿಸಲ್ಲ, ಉಪಚುನಾವಣೆಯಲ್ಲಿ ಏನೇನಾಗಿದ ಎಂಬುದು ರಾಜ್ಯ ಕಮಿಟಿಗೆ ತಿಳಿದಿದೆ. ಈ ಬಗ್ಗೆ ನಾನೇನು ಹೇಳಲ್ಲ. ನಮ್ಮ ತಂದೆ, ತಾಯಿ ನಮಗೆ ಪಕ್ಷ ಒಡೆಯುವುದನ್ನ ಹೇಳಿಕೊಟ್ಟಿಲ್ಲ, ನಾನು ಸೂಜಿಯಾಗಿ ಹರಿದ ಬಟ್ಟೆಯನ್ನು ದರ್ಜಿಯ ಜೊತೆ ಸೇರಿ ಸರಿಪಡಿಸುವೆ, ನಮ್ಮ ಕಾರ್ಯಕರ್ತರು ಸಹಾ ಟೀಕೆಗೆ ಕುಗ್ಗಬಾರದು.
- ಎನ್. ಮಹೇಶ್, ಕೊಳ್ಳೇಗಾಲ ಶಾಸಕ
— -------------------
ಜಿಲ್ಲಾಧ್ಯಕ್ಷನಾಗಿ ನಾನು ಪಕ್ಷ ಕಟ್ಟಬೇಕೆ ಹೊರತು, ಪಕ್ಷ ಹೊಡೆಯುವ ಕೆಲಸ ಮಾಡಲ್ಲ, ಉಪಚುನಾವಣೆಯಲ್ಲಿ ಕೆಲ ವ್ಯತ್ಯಾಸಗಳಾಗಿರುವುದು ಸಹಜ, ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ಕ್ರಮವಹಿಸಲಾಗುವುದು. ಇದಕ್ಕೂ ಮುನ್ನ ವ್ಯತ್ಸಾಸಗಳ ಪರಿಶೀಲನೆಗೆ ರಾಜ್ಯದಿಂದ 1ತಂಡ ಬರುತ್ತಿದೆ. ಇಲ್ಲಿನ ವ್ಯತ್ಯಾಸಗಳ ಕುರಿತು ವಿಭಾಗ, ರಾಜ್ಯತಂಡ ಇನ್ನೆರಡು ದಿನದಲ್ಲಿ ಪರಿಶೀಲಿಸಿ ವರದಿ ಸಲ್ಲಿಸುತ್ತಾರೆ, ಅವರ ವರದಿ ಬಳಿಕ ರಾಜ್ಯಾಧ್ಯಕ್ಷರಿಗೆ ತಿಳಿಸಿ ಹೆಚ್ಚಿನ ಮಾಹಿತಿ ತಿಳಿಸಲಾಗುವುದು.
- ಸುಂದರ್ , ಬಿಜೆಪಿ ಜಿಲ್ಲಾಧ್ಯಕ್ಷ. ಚಾ.ನಗರ
1ಕೆಜಿಎಲ್33
ಕೊಳ್ಳೇಗಾಲದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ನಗರಸಭಾ ಸದಸ್ಯರನ್ನು ಸಚಿವ ವಿ ಸೋಮಣ್ಣ ಅಭಿನಂದಿಸಿದರು. ಶಾಸಕ ಮಹೇಶ್, ರವಿಶಂಕರ್, ಸುಂದರ್, ಡಾ.ದತ್ತೇಶ್ ಇದ್ದಾರೆ.
1ಕೆಜಿಎಲ್34
ಕೊಳ್ಳೇಗಾಲದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಅಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವ ಸೋಮಣ್ಣ ಮಾತನಾಡಿದರು. ಶಾಸಕ ಮಹೇಶ್, ನಟರಾಜಗೌಡ, ನಾಗಶ್ರೀ ಪ್ರತಾಪ್ ಇದ್ದಾರೆ.