ಕಲಬುರಗಿ: ಕೊರೋನಾ ಚಿಕಿತ್ಸೆಗೆ ESIC ಆಸ್ಪತ್ರೆ ಸಕಲ ಸಿದ್ಧ

By Kannadaprabha NewsFirst Published Mar 14, 2020, 9:46 AM IST
Highlights

ಕೊರೋನಾ ವೈರಸ್ ಸೋಂಕು| ಚಿಕಿತ್ಸೆಗೆ ಕಲಬುರಗಿ ಇಎಸ್ಐಸಿ ಮೆಡಿಕಲ್ ಕಾಲೇಜು ಸಿದ್ಧತೆ| ಜಿಲ್ಲಾಡಳಿತ ಬಯಸಿದಲ್ಲಿ ಇನ್ನೂ 200 ಕ್ವಾರಂಟೈನ್ ವಾರ್ಡ್ ತೆರೆಯಲು ಸಿದ್ಧ| 

ಕಲಬುರಗಿ(ಮಾ.14): ದೇಶಾದ್ಯಂತ ತೀವ್ರ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಸೊಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಇಎಸ್ಐಸಿ ಮೆಡಿಕಲ್ ಕಾಲೇಜಿನಲ್ಲಿ 200 ಕ್ವಾರಂಟೈನ್ ವಾರ್ಡ್, 16 ಐಸೋಲೇಷನ್ ವಾರ್ಡ್ (2 ವೆಂಟಿಲೇಟರ್) ದೊಂದಿಗೆ ಚಿಕಿತ್ಸೆಗೆ ಸಿದ್ಧಗೊಂಡಿವೆ ಎಂದು ನವದೆಹಲಿಯ ಇಎಸ್‌ಐಸಿ ಕಾರ್ಪೊರೇಷನ್ ಸದಸ್ಯ ಶಿವಪ್ರಸಾದ ತಿವಾರಿ ಹೇಳಿದ್ದಾರೆ. 

ಅವರು ಶುಕ್ರವಾರ ಕಲಬುರಗಿ ಇಎಸ್‌ಐಸಿ ಮೆಡಿಕಲ್ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಬುರಗಿ ಇಎಸ್‌ಐಸಿ ಐಸೋಲೇಷನ್ ವಾರ್ಡ್‌ನಲ್ಲಿ ಸೂಕ್ತ ಚಿಕಿತ್ಸೆಗೆ ಅಗತ್ಯವಿರುವ ಮೆಡಿಸಿನ್, ಮಾಸ್ಕ್‌ಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದ್ದು, ನಾಳೆಯೊಳಗೆ ಕಲಬುರಗಿಗೆ ತಲುಪಲಿವೆ. ಪ್ರಸ್ತುತ ಇಲ್ಲಿನ ಐಸೊಲೇಷನ್ಸ್ ವಾರ್ಡ್‌ನಲ್ಲಿ 4 ಜನರನ್ನು ಚಿಕಿತ್ಸೆಗೆ ಒಳಪಡಿಸಿದ್ದು, 24 ಗಂಟೆ ಕಾಲ ವೈದ್ಯ ಸಿಬ್ಬಂದಿ ರೋಗಿಗಳ ಮೇಲೆ ತೀವ್ರ ನಿಗಾ ವಹಿಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾಡಳಿತ ಬಯಸಿದಲ್ಲಿ ಇನ್ನೂ 200 ಕ್ವಾರಂಟೈನ್ ವಾರ್ಡ್ ತೆರೆಯಲು ಸಿದ್ಧ. ಸಾಮಾಜಿಕ ಸುರಕ್ಷತಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಇಎಸ್‌ಐಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೊರೋನಾ ವೈರಸ್ ಸೊಂಕು ತಡೆಗಟ್ಟಲು ಸವಾಲಾಗಿ ಸ್ವೀಕರಿಸಿದೆ. ಹೊರದೇಶದಿಂದ ಬಂದವರಿಗೆ ಮಾತ್ರ ಕೊರೋನಾ ವೈರಸ್ ಸೋಂಕು ತಗಲಿದ್ದು, ಇದುವರೆಗಿನ ಪ್ರಕರಣಗಳಿಂದ ತಿಳಿದುಬಂದಿದೆ. ಕೊರೋನಾ ವೈರಸ್ ಮೂಲವಾಗಿ ಭಾರತದಲ್ಲಿ ಎಲ್ಲಿಯೂ ಹುಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. 

ರಾಜ್ಯ ಜನತೆ ಗಾಳಿ ಸುದ್ದಿಗೆ ಕಿವಿಗೊಡಬಾರದು: 

ರಾಜ್ಯದ ಜನತೆ ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡದೆ ಧೈರ್ಯ, ಆತ್ಮಸ್ಥೈರ್ಯದಿಂದ ಇರಬೇಕು. ಕೊರೋನಾ ಹರಡದಂತೆ ಜಾಗೃತಿ ವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರ ಮತ್ತು ಸೂಕ್ಷ್ಮವಾಗಿ ಪರಿಗಣಿಸಿದ್ದು, ಸಕಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
 

click me!