ಬಸವಕಲ್ಯಾಣ: ಮಾಸ್ಕ್‌ ಧರಿಸಿದ್ರೆ ಮಾತ್ರ ಚಿನ್ನ​ದಂಗ​ಡಿಗೆ ಪ್ರವೇಶ..!

By Kannadaprabha News  |  First Published Jul 6, 2020, 12:49 PM IST

ಸುವರ್ಣಕಾರರ ಸಂಘದಿಂದ ಮುಂಜಾಗ್ರತಾ ಕ್ರಮ ಪಾಲನೆಗೆ ನಿರ್ಧಾರ| ನಿತ್ಯ ಸಂಜೆ 5ರವರೆಗೆ ಮಾತ್ರ ವಹಿ​ವಾ​ಟು| ಬೀದರ್‌ ಜಿಲ್ಲೆ ಬಸವಕಲ್ಯಾಣ ಪಟ್ಟಣ| ಗೋಲ್ಡ್‌ ಮಾರ್ಕೆಟ್‌ ಅಂಗಡಿಯವರು ಗ್ರಾಹಕರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು| ಸುರಕ್ಷತೆಯ ದೃಷ್ಠಿಯಿಂದ ಅಗತ್ಯ ಕ್ರಮ|


ಬಸವಕಲ್ಯಾಣ(ಜು.06): ಮಾಸ್ಕ್‌ ಧರಿಸಿದವರಿಗೆ ಮಾತ್ರ ಅಂಗಡಿಗೆ ಪ್ರವೇಶ ಎನ್ನುವ ನಿರ್ಧಾರವನ್ನು ಸರಾಫ್‌ ಮತ್ತು ಸುವರ್ಣಕಾರರ ಸಂಘ ತಿರ್ಮಾ​ನಿ​ಸಿ​ದೆ.

ಸದ್ಗುರು ಸದಾನಂದ ಸ್ವಾಮಿ ಮಠದ ಪರಿಸರದಲ್ಲಿರುವ ಸರಾಫ್‌ ಮಾರ್ಕೆಟ್‌ನಲ್ಲಿ ಸಂಘದಿಂದ ಆಯೋಜಿಸಲಾಗಿದ್ದ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮತ್ತು ಸೇವಾ ಭಾರತಿ ಸಹಕಾರದಿಂದ ಸ್ಯಾನಿಟೈಜರ್‌ ವಿತರಣೆಯಲ್ಲಿ ಈ ಬಗ್ಗೆ ನಿರ್ಧ​ರಿಸಲಾಯಿತು.

Latest Videos

undefined

ಕೊರೋನಾ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ನಿರ್ಣಯ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿಯ ಸರಾಫ್‌ ಮಾರ್ಕೆಟ್‌ನಲ್ಲಿ ಸೋಮವಾರದಿಂದ ಶನಿವಾರದ ವರೆಗೆ ಪ್ರತಿ ದಿನ ಸಂಜೆ 5ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ನಿರ್ಧಾರಿಸಲಾಯಿತು.

ರೈತರಿಗೆ ಸಾಲದ ಮಿತಿ ಹೆಚ್ಚಿಸಲು ಚಿಂತನೆ: ಸಚಿವ ಸೋಮಶೇಖರ್‌

ಕಾರ್ಯಕ್ರಮಕ್ಕೆ ತಹಸೀಲ್ದಾರ ಸಾವಿತ್ರಿ ಶರಣು ಸಲಗರ್‌ ಚಾಲನೆ ನೀಡಿ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕ. ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಂಪ್ಲೆಕ್ಸ್‌ನಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಪಿಐ ಜೆಎಸ್‌ ನ್ಯಾಮಗೌಡರ್‌ ಮಾತನಾಡಿ, ಗೋಲ್ಡ್‌ ಮಾರ್ಕೆಟ್‌ ಅಂಗಡಿಯವರು ಗ್ರಾಹಕರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು. ಸುರಕ್ಷತೆಯ ದೃಷ್ಠಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾರ್ಕೆಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಎಸ್‌ಐ ವಸೀಮ ಪಟೇಲ್‌, ಸರಾಫ್‌ ಮತ್ತು ಸುವರ್ಣಕಾರರ ಸಂಘದ ಅಧ್ಯಕ್ಷ ಬಾಳ ಸಾಹೇಬ ಕುಲ್ಕರ್ಣಿ, ಉಪಾಧ್ಯಕ್ಷ ಚನ್ನಪ್ಪ ರಾಜಾಪೂರೆ, ಕಾರ್ಯದರ್ಶಿ ವಿಜಯಕುಮಾರ ಪಾಂಚಾಳ, ಪ್ರಮುಖರಾದ ಭಾರ್ಗವಚಾರಿ, ಕಾಶಿನಾಥ ಪಾಂಚಾಳ, ಗಂಗಾಧರ ಅಂಬುಲಗೆ, ಮಲ್ಲಿಕಾರ್ಜುನ ಶೀಲವಂತ, ಅರವಿಂದ ಪವಾರ, ಜೀತೇಂದ್ರ ಕುಲ್ಕರ್ಣಿ, ಶಶಿಕಾಂತ ಶೀಲವಂತ ಹಾಗೂ ಇತರರು ಉಪಸ್ಥಿತರಿದ್ದರು.
 

click me!