ಸಚಿವ ಹೆಬ್ಬಾರರ ಸಭೆಗೆ ಬರುತ್ತಿದ್ದಾಗ ರಸ್ತೆ ಅಪಘಾತ: ಎಂಜಿನಿಯರ್‌ ಸಾವು

Kannadaprabha News   | Asianet News
Published : Aug 08, 2021, 10:20 AM IST
ಸಚಿವ ಹೆಬ್ಬಾರರ ಸಭೆಗೆ ಬರುತ್ತಿದ್ದಾಗ ರಸ್ತೆ ಅಪಘಾತ: ಎಂಜಿನಿಯರ್‌ ಸಾವು

ಸಾರಾಂಶ

* ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್‌ ಬಳಿ ನಡೆದ ಘಟನೆ * ನೆರೆ ನಿಯಂತ್ರಣ ಮತ್ತು ಕೋವಿಡ್‌ ಕುರಿತ ಸಭೆಗೆ ಆಗಮಿಸುವ ವೇಳ ಘಟನೆ * ಮೂವರಿಗೆ ಗಂಭೀರ ಗಾಯ, ಮಣಿಪಾಲ ಆಸ್ಪತ್ರೆಗೆ ದಾಖಲು  

ಅಂಕೋಲಾ(ಆ.08): ನೆರೆ ನಿಯಂತ್ರಣ ಮತ್ತು ಕೋವಿಡ್‌ ಕುರಿತು ಕಾರವಾರದಲ್ಲಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಭೆಗೆ ಆಗಮಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸಿದ್ದಾಪುರದ ಲೋಕೋಪಯೋಗಿ ಇಲಾಖೆಯ ಎಇಇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬಾಳೆಗುಳಿ ಕ್ರಾಸ್‌ ಬಳಿ ನಡೆದಿದೆ.

ಸಿದ್ದಾಪುರದ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಾರುತಿ ಮುದುಕಣ್ಣನವರ (58) ಮೃತಪಟ್ಟವರು.

ಆಂಧ್ರದಲ್ಲಿ ಭೀಕರ ಅಪಘಾತ: ಬಾಗಲಕೋಟೆ ಮೂಲದ ನವ ದಂಪತಿ ಸೇರಿ ಮೂವರ ದುರ್ಮರಣ

ಶಿರಶಿಯ ಲೋಕೋಪಯೋಗಿ ಎಂಜಿನಿಯರ್‌ ಕೃಷ್ಣಾ ರೆಡ್ಡಿ, ಟೆಕ್ನೀಷಿಯನ್‌ ರವಿ ಪಾಟೀಲ, ಎಫ್‌ಡಿಸಿ ಸಿಬ್ಬಂದಿ ಚೇತನ ಹಾಗೂ ಕಾರು ಚಾಲಕ ರಾಘವೇಂದ್ರ ನಾಗೇಶ ಬಂಡಾರಿ ಗಾಯಗೊಂಡವರು. ಕೃಷ್ಣಾ ರೆಡ್ಡಿ, ರವಿ ಪಾಟೀಲ ಹಾಗೂ ಚೇತನ ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?