* ಚಿಕ್ಕಮಗಳೂರು ತಾಲೂಕಿನ ಗಾಳಿ ಪೂಜೆಯಲ್ಲಿ ನಡೆದ ಘಟನೆ
* ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿ
* ಜಮೀನಿನ ಮಾಲೀಕನ ಬಂಧನ
ಚಿಕ್ಕಮಗಳೂರು(ಆ.01): ವಿದ್ಯುತ್ ಶಾಕ್‌ನಿಂದ ಯೊಂದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗಾಳಿ ಪೂಜೆಯಲ್ಲಿ ಇಂದು(ಭಾನುವಾರ) ನಡೆದಿದೆ.
ಜಮೀನಿಗೆ ಹಾಕಿದ್ದ ತಂತಿ ಬೇಲಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಸುಮಾರು 15 ವರ್ಷದ ಗಂಡು ಕಾಡಾನೆ ಮೃತಪಟ್ಟಿದೆ. ಸದ್ಯ ಜಮೀನಿನ ಮಾಲೀಕನನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಸೋಲಾರ್ ವಿದ್ಯುತ್ ಸ್ಪರ್ಷಿಸಿ ಕಾಡಾನೆ ಮರಿ ಸಾವು
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಗಾಳಿಪೂಜೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.