Udupi: ಮೀನುಗಾರಿಕಾ ಇಲಾಖೆಯ ಸಮಗ್ರ ಸುಧಾರಣೆಗೆ ಪ್ರಯತ್ನ: ಸಚಿವ ಅಂಗಾರ

Published : Jan 25, 2023, 11:25 PM IST
Udupi: ಮೀನುಗಾರಿಕಾ ಇಲಾಖೆಯ ಸಮಗ್ರ ಸುಧಾರಣೆಗೆ ಪ್ರಯತ್ನ: ಸಚಿವ ಅಂಗಾರ

ಸಾರಾಂಶ

ಮೀನುಗಾರಿಕಾ ಇಲಾಖೆಯಲ್ಲಿ ಸಮಗ್ರವಾಗಿ ಸುಧಾರಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಉಡುಪಿ (ಜ.25): ಮೀನುಗಾರಿಕಾ ಇಲಾಖೆಯಲ್ಲಿ ಸಮಗ್ರವಾಗಿ ಸುಧಾರಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು. ಇಂದು ಮಲ್ಪೆ - ಉದ್ಯಾವರ ನದಿಯಲ್ಲಿ ನಿರ್ಮಿಸಿರುವ ಜಟ್ಟಿಗಳು ಮತ್ತು ಮೀನುಗಾರಿಕೆ ಬಂದರಿನ ಯಾಂತ್ರಿಕ ಸ್ಲಿಪ್ ವೇ, ಮಲ್ಪೆ ಬಂದರಿನ ಬೇಸಿನ್ ಹಾಗೂ ನೇವಿಗೇಶನ್ ಚಾನೆಲ್ ನಿರ್ವಹಣಾ ಹೂಳೆತ್ತುವಿಕ್ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. 

ಮೀನುಗಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ, ತಂತ್ರಜ್ಞಾನ ಬಳಸಿ ಮೀನಿನ ಗುಣಮಟ್ಟ ಕಾಪಾಡುವಿಕೆ, ಒಳನಾಡು ಮೀನುಗಾರಿಕೆಗೆ ಒತ್ತು, ಮೀನು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು. ರಾಜ್ಯದಲ್ಲಿ ಪ್ರತಿವರ್ಷ 60 ಕೋಟಿ ಮೀನು ಮರಿಗಳ ಅಗತ್ಯವಿದ್ದು ಪ್ರಸ್ತುತ 40 ಕೋಟಿ ಮೀನು ಮರಿಗಳ ಉತ್ಪಾದನೆ ಮಾತ್ರ ಆಗುತ್ತಿದ್ದು,  ಇದಕ್ಕಾಗಿ ಆಲಮಟ್ಟಿಯಲ್ಲಿ 25 ಎಕರೆ ಪ್ರದೇಶದಲ್ಲಿ ಮೀನು ಮರಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಬೊಮ್ಮಾಯಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲ: ರಣದೀಪ್ ಸುರ್ಜೇವಾಲ

ಮೀನುಗಾರರ ವಿವಿಧ ಸಮಸ್ಯೆಗಳಾದ ಡೀಸೆಲ್ ಹೆಚ್ಚಳ ಸೀಮೆಎಣ್ಣೆ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕ ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಜೆಟ್ ನಲ್ಲಿ ಪ್ರತಿ ಮೀನುಗಾರಿಕೆ ದೋಣಿಗೆ 400 ಲೀ. ಡೀಸೆಲ್, ವಾರ್ಷಿಕ 2 ಲಕ್ಷ ಲೀ ಡೀಸೆಲ್ ನೀಡಬೇಕು. ಪ್ರಸ್ತುತ ಕೈಗೊಂಡಿರುವ ಮಲ್ಪೆ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿಯನ್ನ ಇದೇ ವರ್ಷದ ಮೇ ಒಳಗೆ ಮುಕ್ತಾಯ ಗೊಳಿಸಬೇಕು.ಮೀನುಗಾರ ಮಹಿಳೆಯರಿಗೆ ಒಣ ಮೀನು ಒಣಗಿಸಲು ಸೂಕ್ತ ಜಾಗ ಒದಗಿಸಬೇಕು.

ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ

ಬಂದರುನಲ್ಲಿ ಹೆಚ್ಚುವರಿಯಾಗಿ ಡಿಸೇಲ್ ಬಂಕ್ ನಿರ್ಮಾಣ,  ಪಾರ್ಕಿಂಗ್ ವ್ಯವಸ್ಥೆ ಸಮಸ್ಯೆ ಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು. ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್, ಉಡುಪಿ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ಮೂರ್ತಿ, ಮಲ್ಪೆ ಮೀನುಗಾರರ ಸಂಘ (ರಿ.) ಅಧ್ಯಕ್ಷರಾದ ದಯಾನಂದ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ಅಪರ ನಿರ್ದೇಶಕ ಗಣೇಶ್ ಸ್ವಾಗತಿಸಿದರು.

PREV
Read more Articles on
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!