ಅವ್ರನ್ನ ಪಕ್ಷದಿಂದ ಹೊರಗೆ ಹಾಕಲಾಗುತ್ತದೆ : ಡಿಕೆಶಿ ಎಚ್ಚರಿಕೆ

Kannadaprabha News   | Asianet News
Published : Nov 30, 2020, 08:50 AM IST
ಅವ್ರನ್ನ ಪಕ್ಷದಿಂದ ಹೊರಗೆ ಹಾಕಲಾಗುತ್ತದೆ :  ಡಿಕೆಶಿ ಎಚ್ಚರಿಕೆ

ಸಾರಾಂಶ

ಕಾಂಗ್ರೆಸ್ ಭಿನ್ನಮತ ದರ್ಶನವಾಗಿದ್ದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಹೊರಗೆ ಹಾಕುವ ಬಗ್ಗೆ ವಾರ್ನಿಂಗ್ ನೀಡಿದ್ದಾರೆ. 

ಉಡುಪಿ (ನ.30): ಕೆಪಿಪಿಸಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ಗೆ ಉಡುಪಿ ಜಿಲ್ಲಾ ಕಾಂಗ್ರೆಸ್‌ನೊಳಗಿನ ಭಿನ್ನಮತದ ದರ್ಶನವಾಗಿದೆ. 

ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತಿನಲ್ಲಿ ಇರಲಾಗದವರನ್ನು ಹೊರಗೆ ಹಾಕಬೇಕಾಗುತ್ತದೆ ಎಂದು ಪರೋಕ್ಷವಾಗಿ ಪ್ರಮೋದ್‌ ಮಧ್ವರಾಜ್‌ದೆ ಎಚ್ಚರಿಕೆ ನೀಡಿದ್ದಾರೆ. 

ಭಾನುವಾರ ಡಿಕೆಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಯಿತು. 

ವಿಡಿಯೋ ಬಾಂಬ್ ಸಿಡಿಸಿದ ಡಿಕೆಶಿ: ಒಬ್ಬರ ಜೀವನ, ಪ್ರಾಣದ ಮೇಲೆ ಚೆಲ್ಲಾಟ ಬೇಡವೆಂದ ಬಿಜೆಪಿ ...

ಈ ವೇಳೆ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಅವರು, ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಪಕ್ಷಕ್ಕೆ ಮುಜುಗರ ಮಾಡುವುದನ್ನು, ಬ್ಲಾಕ್‌ಮೇಲ್‌ ಮಾಡುವುದನ್ನು ಸಹಿಸುವುದಿಲ್ಲ. ಪಕ್ಷ ನಡೆಯುವುದೇ ನನ್ನಿಂದ ಎಂದು ತಿಳಿಕೊಂಡಿದ್ದರೆ, ಅದು ಭ್ರಮೆ. ಅಂತಹವರನ್ನು ಗೌರವದಿಂದಲೇ ಪಕ್ಷದಿಂದ ಕಳಿಸಲಾಗುತ್ತದೆ ಎಂದರು.

PREV
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ