ಸೀಡಿ ಕೇಸ್ ಸ್ಫೋಟ ಹಿಂದೆ ಇರೋದು ಡಿಕೆಶಿ ಹಾಗೂ ಕಾಂಗ್ರೆಸ್ ಶಾಸಕಿ : ಗಂಭೀರ ಆರೋಪ

Kannadaprabha News   | Asianet News
Published : Apr 03, 2021, 04:05 PM IST
ಸೀಡಿ ಕೇಸ್ ಸ್ಫೋಟ  ಹಿಂದೆ ಇರೋದು ಡಿಕೆಶಿ ಹಾಗೂ ಕಾಂಗ್ರೆಸ್ ಶಾಸಕಿ : ಗಂಭೀರ ಆರೋಪ

ಸಾರಾಂಶ

ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸೀಡಿ ಪ್ರಕರಣದ ಹಿಂದೆ ಇರೋದು ಇವರಿಬ್ಬರು. ಹಣವನ್ನೂ ಅವರೇ ನೀಡಿದ್ದಾರೆನ್ನುವ ಗಂಭೀರ ಆರೋಪವೀಗ ಕೇಳಿ ಬಂದಿದೆ. 

ಚಾಮರಾಜನಗರ (ಏ.03): ರಾಜ್ಯದಲ್ಲಿ ಸದ್ದಾಗುತ್ತಿರುವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಹಿಂದೆ ಇರೋದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಬಿಜೆಪಿ ರೈತ ಅಮ್ಮನಪುರ ಮಲ್ಲೇಶ್ ಆರೋಪಿಸಿದ್ದಾರೆ. 

ಚಾಮರಾಜನಗರದಲ್ಲಿಂದು ಮಾತನಾಡಿದ ಮುಖಂಡ ಮಲ್ಲೇಶ್, ರಮೇಶ್ ಜಾರಕಿಹೊಳಿಯವರನ್ನು ಹಳಿಯಲು  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ರಾಸಲೀಲೆ ಸಿಡಿ ಕೇಸ್ : ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶುರುವಾಯ್ತು ಸಂಕಷ್ಟ..!?
 
ಡಿ.ಕೆ.ಶಿವಕುಮಾರ್ ಈ ಪ್ರಕರಣದ ಫಂಡರ್. ಅದೊಂದು ಸಮ್ಮತಿ ಸೆಕ್ಸ್,  ಖಾಸಗಿ ವಿಚಾರ. ಆದರೆ ಆ ಸಿ.ಡಿ ಇಟ್ಟುಕೊಂಡು ಡಿಕೆಶಿ ರಾಜಕೀಯ ಮಾಡುತ್ತಿರುವುದು ಅಸಹ್ಯಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿ ಪರಿಶುದ್ದರೆ? ..

135 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್‌ ಗೆ ಡಿಕೆಶಿ ಅಧ್ಯಕ್ಷರಾಗಿ ರುವುದು ನಾಚಿಕೆ ಗೇಡು. ಜನಸಾಮಾನ್ಯರ ಸಮಸ್ಯೆ ಗಳನ್ನಿಟ್ಟುಕೊಂಡು ಹೋರಾಟ ಮಾಡುವುದನ್ನು ಬಿಟ್ಟು ಅಸಹ್ಯಕರ ಸಿಡಿಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ನಾಚಿಕೆಗೇಡು. ಡಿಕೆಶಿ ಪರಿಶುದ್ಧರಾಗಿದ್ದಾರಾ..? ಎಂದು ಪ್ರಶ್ನೆ ಮಾಡಿದ್ದಾರೆ. 

ಇಂತಹ ಅಧ್ಯಕ್ಷರನ್ನಿಟ್ಟುಕೊಂಡು ಕಾಂಗ್ರೆಸ್ ನೈತಿಕ ವಾಗಿ ಅಧಃಪತನವಾಗಿದೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಡಿಕೆಶಿಯನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಅಮ್ಮನಪುರ ಮಲ್ಲೇಶ್ ಆಗ್ರಹಿಸಿದರು. 

PREV
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್