ಪ್ರೇಮಿಗಳ ದಿನದಂದು ಡಿಕೆಶಿ ಪುತ್ರಿ ಅದ್ಧೂರಿ ಮದುವೆ

Kannadaprabha News   | Asianet News
Published : Feb 12, 2021, 10:21 AM ISTUpdated : Feb 12, 2021, 10:32 AM IST
ಪ್ರೇಮಿಗಳ ದಿನದಂದು ಡಿಕೆಶಿ ಪುತ್ರಿ ಅದ್ಧೂರಿ ಮದುವೆ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣರ ಮೊಮ್ಮಗನ ಜತೆ ವಿವಾಹ| ವಿವಾಹ ಪೂರ್ವ ಕಾರ್ಯಕ್ರಮ ಆರಂಭ| 17ಕ್ಕೆ ಆರತಕ್ಷತೆ, 28ಕ್ಕೆ ಬೀಗರ ಔತಣ| ದೇವನಹಳ್ಳಿ ತಾಲೂಕು ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್‌ ಗಾಲ್ಫ್‌ಫಶೈರ್‌ ರೆಸಾರ್ಟ್‌ನಲ್ಲಿ ಆರತಕ್ಷತೆ| 

ಬೆಂಗಳೂರು(ಫೆ.12): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ. ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಮದುವೆ ಫೆ.14ರ ಪ್ರೇಮಿಗಳ ದಿನದಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.

"

ಈ ಹಿನ್ನೆಲೆಯಲ್ಲಿ ಬುಧವಾರ ಶಿವಕುಮಾರ್‌ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನಡೆಯಿತು. ಫೆ.14ರಂದು ವೈಟ್‌ಫೀಲ್ಡ್‌ನ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ನೆರವೇರಲಿದೆ. ಫೆ.17ರಂದು ದೇವನಹಳ್ಳಿ ತಾಲೂಕು ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್‌ ಗಾಲ್ಫ್‌ಫಶೈರ್‌ ರೆಸಾರ್ಟ್‌ನಲ್ಲಿ ಆರತಕ್ಷತೆ ನಡೆಯಲಿದೆ. ಫೆ.28ರಂದು ನಗರದ ಅರಮನೆ ಮೈದಾನದಲ್ಲಿ ಬೀಗರೂಟ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುತ್ರಿ ಅದ್ದೂರಿ ನಿಶ್ಚಿತಾರ್ಥ - ಕಾಫಿ ಡೇ ಮಾಲಿಕನೊಂದಿಗೆ ಎಂಗೇಜ್

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಮೊಮ್ಮಗ ಅಮಾತ್ರ್ಯ ಹೆಗ್ಡೆ ಹಾಗೂ ಐಶ್ವರ್ಯಾ ಮದುವೆ ಮತ್ತು ಆರತಕ್ಷತೆ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
 

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!