ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿರುವುದು‌ ನನ್ನ ಅದೃಷ್ಟ: ಶಾಸಕ ಇಕ್ಬಾಲ್ ಹುಸೇನ್

Published : Jun 02, 2026, 09:48 PM IST
Iqbal Hussain

ಸಾರಾಂಶ

ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ‌ ಪಾಲಿನ‌ ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.

ರಾಮನಗರ (ಜೂ.02): ರಾಮನಗರ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ತರಲು ನನ್ನನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನ್ನ‌ ಪಾಲಿನ‌ ಅದೃಷ್ಟ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಕ್ಷೇತ್ರದಲ್ಲಿ ಹಲವು ಕೆಲಸಗಳು ನಡೆದಿವೆ. ಮುಂದುವರಿದ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಸಾಕಾರವಾಗಲಿದ್ದು, ರಾಜ್ಯದ ಎಲ್ಲ ವರ್ಗದ ಜನರ ಬಗ್ಗೆ ಚಿಂತನೆ, ದೂರದೃಷ್ಟಿತ್ವ ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಉತ್ತಮ ಆಡಳಿತ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದು ಜಿಲ್ಲೆಯ ಜನರ ಸಂತಸ ಹೆಚ್ಚಿಸಿರುವುದು ಒಂದೆಡೆಯಾದರೆ, ಜಿಲ್ಲೆಯ ಹಿರಿಮೆಯೂ ಸಹ ಹೆಚ್ಚಿಸಿದೆ. ಡಿಕೆ ಬ್ರದರ್ ಕನಸು ನಮ್ಮ‌ ಕನಸಾಗಿದೆ. ದೇಶದೆಲ್ಲೆಡೆ ಅವರದೇ ಆದ ಅಭಿಮಾನಿಗಳ ಬಳಗವಿದ್ದು, ಅವರಿಗೂ ಮುಖ್ಯಮಂತ್ರಿ ಹುದ್ದೆ ಸಿಕ್ಕಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಮನಗರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳಲಿದ್ದು, ನಗರದಲ್ಲಿ ಶೇಕಡ 70ರಷ್ಟು ಭಾಗ ಯುಜಿಡಿ ಕೆಲಸ ಆಗಬೇಕಿದೆ. ಇದಕ್ಕಾಗಿ 300 ಕೋಟಿ ರುಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇನ್ನು ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣದಂತಹ ಹತ್ತು ಹಲವು ಅಭಿವೃದ್ಧಿ ಕೆಲಸಗಳು ನಡೆಯಬೇಕಿದ್ದು, ಅವೆಲ್ಲವೂ ಇನ್ನೆರೆಡು ವರ್ಷಗಳಲ್ಲಿ ಪೂರ್ಣಗೊಂಡು ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಆಶೀರ್ವಾದದಿಂದ ಜಿಲ್ಲೆಯ ಜನರ ಕನಸಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಚಾಲನೆ ಸಿಕ್ಕಿದೆ. ನಗರದಲ್ಲಿ ಕುಡಿಯುವ ನೀರು, ಸೂರು ಕಲ್ಪಿಸಲು 300 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಗುರುತಿಸಿರುವುದು, ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ, ಸಾಗುವಳ ಚೀಟಿಗಳ ವಿತರಣೆ, ಸೇತುವೆಗಳ ನಿರ್ಮಾಣ, ಕೆರೆ ತುಂಬಿಸುವುದು, ಅರ್ಕಾವತಿ‌ ನದಿ ದಂಡೆಯಲ್ಲಿ ಪಾರ್ಕ್ ನಿರ್ಮಾಣದಂತಹ ಹತ್ತು ಹಲವು ಯೋಜನೆಗಳು ಕ್ಷೇತ್ರದಲ್ಲಿ ಸಾಕಾರವಾಗುತ್ತಿವೆ ಎಂದು ಹೇಳಿದರು.

ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ

ರಾಮನಗರದ ಇತಿಹಾಸ ಉಳ್ಳ ಅರ್ಕೇಶ್ವರ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ಜನವಸತಿ ಪ್ರದೇಶಗಳನ್ನು ಉಳಿಸಿಕೊಂಡು ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಾನೊಬ್ಬ ಜನರ ಪ್ರತಿನಿಧಿಯಾಗಿದ್ದು, ಜನರಿಗೆ ವಿರುದ್ಧವಾದ ಕೆಲಸ ಮಾಡುವುದಿಲ್ಲ. ದೇವಾಲಯ ಮತ್ತು ದರ್ಗಾಕ್ಕೆ ಅನುದಾನ ತಂದುಕೊಟ್ಟು ಅಭಿವೃದ್ಧಿ ಮಾಡುತ್ತಿದ್ದೇನೆ. ಕೆಲವರು ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅದಕ್ಕೆಲ್ಲ ನಾನು ತಲೆ‌ಕಡೆಸಿಕೊಳ್ಳುವುದಿಲ್ಲ. ಸಾರ್ವಜನಿಕರು ಆ ವಿಷಯದ ಬಗ್ಗೆ ತಲೆ‌ಕೆಡಿಸಿಕೊಳ್ಳುವುದು ಬೇಡ.

PREV
Read more Articles on
click me!

Recommended Stories

ಜಿಲ್ಲಾಡಳಿತದಿಂದ ಭಟ್ಕಳದ 'ಮುರಿನಕಟ್ಟೆ' ಮರು ನಿರ್ಮಾಣ; ಹಿಂದು-ಮುಸ್ಲಿಂ ಮುಖಂಡರ ಒಮ್ಮತದ ನಿರ್ಧಾರ!
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡಾಟ: ಖಾಸಗಿ ಜೀಪಿನಲ್ಲಿ ಅಕ್ರಮ ಪ್ರವೇಶ, ಕಾಡಾನೆಗಳನ್ನು ಕೆಣಕಿದ ಯುವಕರು!