'ಬ್ರಿಟಿಷರಿಗೆ ಕಾಂಗ್ರೆಸ್ ಹೆದರಿಲ್ಲ, ಇನ್ನು ರಣ ಹೇಡಿ ಬಿಜೆಪಿಗೆ ಅಂಜುವ ಪ್ರಶ್ನೆಯೇ ಇಲ್ಲ'

By Web Desk  |  First Published Sep 4, 2019, 3:56 PM IST

ಮನಿ ಮನಿ ಲಾಂಡರಿಂಗ್  ಪ್ರಕರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಂಧನಕ್ಕೆ ಮಾಜಿ ಕಾಂಗ್ರೆಸ್ ಸಚಿವ ಖಂಡಿಸಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 


ಬಾಗಲಕೋಟೆ, [ಸೆ.04]:  ಸೇಡಿನ ರಾಜಕಾರಣ ಒಳ್ಳೆಯದಲ್ಲ. ಸೇಡಿನ ರಾಜಕಾರಣ ಮಾಡೋಕೆ ಹೋದ್ರೆ ಬಿಜೆಪಿ ದೊಡ್ಡ ಬೆಲೆ ತೆರಬೇಕಾಗುತ್ತೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬಾಗಲಕೋಟೆಯಲ್ಲಿ ಮಾತನಾಡಿದ ಎಸ್.ಆರ್.ಪಾಟೀಲ್, ಬ್ರಿಟಿಷರ ಲಾಠಿ, ಬೂಟಿನೇಟು, ನೇಣುಗಂಬವೇರಿ ಹೆದರದೇ  ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದಿದೆ. ಸೂರ್ಯ ಮುಳಗದ ಸಾಮ್ರಾಜ್ಯ ಅನ್ನೋ ಬ್ರಿಟಿಷರಿಗೆ ಕಾಂಗ್ರೆಸ್ ಹೆದರಿಲ್ಲ. ಇನ್ನು ರಣ ಹೇಡಿ ಬಿಜೆಪಿಗೆ ಅಂಜುವ ಪ್ರಶ್ನೆಯೇ ಇಲ್ಲ ಎಂದು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಆಕ್ರೋಶಭರಿವತಾಗಿ ಮಾತನಾಡಿದ್ದಾರೆ.

Tap to resize

Latest Videos

ಡಿಕೆಶಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಶಾಸಕರು ಬರದಂತೆ ನೋಡಿಕೊಂಡಿದ್ದು ನಿಜವಾದ ಉಪ್ಪು ತಿಂದ ನೀಚ ಕೃತ್ಯ ಎಂದು ವಾಗ್ದಾಳಿ ನಡೆಸಿದರು. 

ಡಿಸಿಎಂ ಗೋವಿಂದ ಕಾರಜೋಳ ಉಪ್ಪು ತಿಂದವರು ನೀರು ಕುಡಿಯಬೇಕೆಂದಿದ್ದಾರೆ. ಯಾರು ಉಪ್ಪು ತಿಂದಿದ್ದಾರೆ? ನಮ್ಮ ಶಾಸಕರನ್ನು ರಕ್ಷಣೆ ಮಾಡಿದ್ರೆ ಅದು ಉಪ್ಪು ತಿಂದಂಗಾ? ನಮ್ಮ ಪಕ್ಷದ ಶಾಸಕರನ್ನು ಮುಂಬೈ ಕರೆದುಕೊಂಡು ಹೋಗಿ. ಬಾಕ್ಸರ್,ಗುಂಡಾಗಳಿಂದ ರಕ್ಷಣೆ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ನಮ್ಮ ಶಾಸಕರನ್ನು ಹೊಟೇಲ್ ನಿಂದ ಹೊರಬರದಂತೆ ನೋಡಿಕೊಳ್ತು ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳಗೆ ತಿರುಗೇಟು ನೀಡಿದರು. 

click me!