ಲೀಲಾ ಗೋವಿಂದರಾಜು ನಗರಸಭಾ ಚುನಾವಣಾ ಫಲಿತಾಂಶದಲ್ಲಿ ಗೆಲುವು| 2 ಮತಗಳ ಅಂತರದಿಂದ ಜಯ| ಮತ ಎಣಿಕೆಗೆ ಒಂದು ದಿನ ಇರುವಂತೆ ಕೋವಿಡಡ್‌ನಿಂದ ನಿಧನ ಹೊಂದಿದ್ದ ಲೀಲಾ| ವಿಜೇತ ಅಭ್ಯರ್ಥಿಯೇ ಸಾವನ್ನಪ್ಪಿರುವ ಕಾರಣ 4ನೇ ವಾರ್ಡಿಗೆ ಮರು ಚುನಾವಣೆ|
ರಾಮನಗರ(ಮೇ.01): ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ರಾಮನಗರ ನಗರಸಭೆ 4ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು (42) ಶುಕ್ರವಾರ ಪ್ರಕಟಗೊಂಡ ನಗರಸಭಾ ಚುನಾವಣಾ ಫಲಿತಾಂಶದಲ್ಲಿ ಗೆಲುವು ದಾಖಲಿಸಿದ್ದಾರೆ.
ಮತ ಎಣಿಕೆಗೆ ಒಂದು ದಿನ ಇರುವಂತೆ ಲೀಲಾರವರು ನಿಧನ ಹೊಂದಿದ್ದರು. ಆದರೆ, ನಿರೀಕ್ಷೆಯಂತೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್‌ನ ಅನುಸೂಯ ಅವರನ್ನು ಪರಾಭವಗೊಳಿಸಿದ್ದಾರೆ. ಚುನಾವಣೆಯಲ್ಲಿ 1123 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಲೀಲಾ ಅವರು 917 ಮತಗಳನ್ನು ಪಡೆದರೆ, ಜೆಡಿಎಸ್‌ನ ಅನುಸೂಯ ಅವರು ಕೇವಲ 107 ಮತಗಳಷ್ಟೆಪಡೆಯಲು ಶಕ್ತರಾಗಿದ್ದಾರೆ. 810 ಮತ ಅಂತರದಿಂದ ಲೀಲಾ ಗೆಲುವು ಸಾಧಿಸಿದ್ದಾರೆ. ವಿಜೇತ ಅಭ್ಯರ್ಥಿಯೇ ಸಾವನ್ನಪ್ಪಿರುವ ಕಾರಣ 4ನೇ ವಾರ್ಡಿಗೆ ಮರು ಚುನಾವಣೆ ನಡೆಯಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ: ಹಲವೆಡೆ ಅಧಿಕಾರಕ್ಕೇರಿದ ಕಾಂಗ್ರೆಸ್, ಮುದುಡಿದ ಕಮಲ
2 ಮತಗಳ ಅಂತರದಿಂದ ಗೆಲುವು:
ರಾಮನಗರ ನಗರಸಭೆಯ 17ನೇ ವಾರ್ಡ್ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿತ್ತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಿರಿಜಮ್ಮ ಅವರು ಕೇವಲ 2 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗಿರಿಜಮ್ಮ 564 ಮತ ಪಡೆದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಗಿರಿಜಾ ಅವರು 562 ಮತಗಳನ್ನು ಪಡೆದು ಕೇವಲ 2 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona