ಮೈಸೂರು (ಆ.24): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ನಾನು ಅಷ್ಘಾನಿಸ್ತಾನದ ಉಗ್ರ ಸಂಘಟನೆ ತಾಲಿಬಾನ್‌ಗೆ ಹೋಲಿಸಿದ್ದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಯಾವುದೇ ಹೋರಾಟ ಮಾಡಿದರು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದರು.
ಸೋಮವಾರ ನಾನಾ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಕುರಿತಾದ ಹೇಳಿಕೆ ನಾನು ಈಗಲೂ ಬದ್ಧ.
ವಿಪಕ್ಷದವರನ್ನು ಟಾರ್ಗೆಟ್ ಮಾಡಿ ಇಡಿ, ಐಟಿ ದಾಳಿ: ಧ್ರುವನಾರಾಯಣ ಕಿಡಿ
ಏಕೆಂದರೆ ಮಹಿಳೆಯರಿಗೆ ಆರ್‌ಎಸ್‌ಎಸ್‌ನಲ್ಲಿ ಪ್ರಾತಿನಿಧ್ಯ ಇಲ್ಲ. ಧರ್ಮದ ಆಧಾರದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಯುತ್ತಿದೆ ಹಾಗೂ ತಾಲಿಬಾನ್ ಕೂಡ ಅದೇ ಕೆಲಸ ಮಾಡುತ್ತದೆ. ಆದ್ದರಿಂದಲೇ ನಾನು ತಾಲಿಬಾನ್‌ಗೆ ಈ ಸಂಘಟನೆ ಹೋಲಿಕೆ ಮಾಡಿದ್ದೆ’ ಎಂದು ಹೇಳಿದರು.