ಗಂಗಾವತಿ: ಮತ್ತೆ ಅಂಜನಾದ್ರಿ ಪರ್ವತಕ್ಕೆ ಭಕ್ತರ ಪ್ರವೇಶ ನಿಷೇಧ..!

Kannadaprabha News   | Asianet News
Published : Nov 11, 2020, 02:24 PM IST
ಗಂಗಾವತಿ: ಮತ್ತೆ ಅಂಜನಾದ್ರಿ ಪರ್ವತಕ್ಕೆ ಭಕ್ತರ ಪ್ರವೇಶ ನಿಷೇಧ..!

ಸಾರಾಂಶ

ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಬಲಿ ಪಡೆದ ಚಿರತೆ| ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ಕಸರತ್ತು| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿ ಅಂಜನಾದ್ರಿ ಬೆಟ್ಟ| ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅಂಜನಾದ್ರಿ ಪರ್ವತ ಪ್ರವೇಶ ನಿಷೇಧ| 

ರಾಮಮೂರ್ತಿ ನವಲಿ

ಗಂಗಾವತಿ(ನ.11):  ಕಳೆದ ಒಂದು ವಾರದಿಂದ ಆನೆಗೊಂದಿ ಪ್ರದೇಶದಲ್ಲಿ ಚಿರತೆ ದಾಳಿಗೆ ಜನರು ಭಯಭೀತರಾಗಿದ್ದು, ಈ ಹಿನ್ನೆಲೆ ತಾಲೂಕಿನ ಪ್ರಸಿದ್ಧ ಹನುಮ ಜನಿಸಿದ ಸ್ಥಳ ‘ಅಂಜನಾದ್ರಿ ಪರ್ವತ’ ಪ್ರವೇಶಕ್ಕೆ ಇಂದಿನಿಂದ(ನ. 11) ಜಿಲ್ಲಾಡಳಿತ ನಿಷೇಧ ಹೇರಿದೆ.

ಅಂಜನಾದ್ರಿ ಪರ್ವತ ಸುತ್ತ ಚಿರತೆ ಸಂಚಾರ ಮಾಡುತ್ತಿದೆ. ಹಾಗಾಗಿ ಭಕ್ತರ ರಕ್ಷಣೆಗಾಗಿ ಮತ್ತು ಚಿರತೆ ಸೆರೆ ಹಿಡಿಯುವುದಕ್ಕಾಗಿ ಅಂಜನಾದ್ರಿ ಪರ್ವತ ಹಾಗೂ ಪಂಪಾಸರೋವರ, ವಿಜಯಲಕ್ಷ್ಮಿ ದೇಗುಲ ಪ್ರವೇಶವನ್ನೂ ನಿಷೇಧಿಸಲಾಗಿದೆ.
ಇಲ್ಲಿಗೆ ಪ್ರತಿ ಶನಿವಾರ 15-20 ಸಾವಿರ ಭಕ್ತರು ಆಗಮಿಸುತ್ತಿದ್ದರು. ಅಲ್ಲದೇ ನಿತ್ಯ 5 ಸಾವಿರಕ್ಕೂ ಹೆಚ್ಚು ಭಕ್ತರು ಬೆಟ್ಟಏರಿ ಆಂಜನೇಯಸ್ವಾಮಿ ದರ್ಶನ ಪಡೆಯುವುದು ಸಾಮಾನ್ಯವಾಗಿದೆ. ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಚಿರತೆ ಸಂಚಾರ ಮಾಡುತ್ತಿದ್ದರಿಂದ ಸೆರೆ ಹಿಡಿಯುವುದು ಕಷ್ಟಕರವಾಗುತ್ತದೆ. ಈ ನಿಟ್ಟಿನಲ್ಲಿ ಜನಸಂದಣಿ ಕಡಿಮೆಯಾದರೆ ಚಿರತೆ ಸೆರೆ ಹಿಡಿಯುವುದಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಪ್ರವೇಶ ನಿಷೇಧಿಸಲಾಗಿದೆ.

ದುರ್ಗಾಬೆಟ್ಟದಲ್ಲಿ ಇತ್ತೀಚೆಗೆ ಯುವಕನನ್ನು ಬಲಿ ತೆಗೆದುಕೊಂಡಿದ್ದ ಚಿರತೆ ದನಕರುಗಳ ಮೇಲೆ ದಾಳಿ ಮಾಡಿತ್ತು. ಈ ಹಿನ್ನೆಲೆ ದುರ್ಗಾಬೆಟ್ಟದಲ್ಲಿರುವ ದೇವಸ್ಥಾನ ಪ್ರವೇಶ ನಿಷೇಧ ಮಾಡಲಾಗಿದೆ. ಆನೆಗೊಂದಿ, ತಳವಾರ ಘಟ್ಟ, ದುರ್ಗಾಬೆಟ್ಟ, ಜಂಗ್ಲಿ ರಂಗಾಪುರ, ಹನುಮನಹಳ್ಳಿ, ವಿರೂಪಾಪುರಗಡ್ಡೆಯ ಪ್ರದೇಶದಲ್ಲಿರುವ ಜನರಿಗೆ ಜಾಗೃತಿ ಮೂಡಿಸಿರುವ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಪ್ರಯತ್ನ ನಡೆಸಿದೆ.

ಗಂಗಾವತಿ: ನಿಲ್ಲದ ಚಿರತೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು..!

ಅರಣ್ಯಾಧಿಕಾರಿಗಳ ಕಸರತ್ತು:

ಒಂದು ವಾರದಿಂದ ಜನರಲ್ಲಿ ಭಯ ಮೂಡಿಸಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಸರತ್ತು ನಡೆಸಿದರೂ ಅಧಿಕಾರಿಗಳಿಗೆ ಚಳ್ಳೇಹಣ್ಣು ತಿನಿಸುತ್ತಾ ಗುಡ್ಡಗಾಡುಗಳಲ್ಲಿ ಅಲೆಯುತ್ತಿದೆ. 7 ಸ್ಥಳಗಳಲ್ಲಿ ಬೋನ್‌ಗಳನ್ನು ಅಳವಡಿಸಿದ್ದರೂ ಚಿರತೆ ಬೋನ್‌ ಒಳಗೆ ನುಗ್ಗದೆ ನಾಯಿ ಮತ್ತು ಕುರಿ ಮರಿಯನ್ನು ಎತ್ತಿಕೊಂಡು ಹೋಗುತ್ತಿದೆ. ಕಳೆದ ಎರಡು ದಿನಗಳಿಂದ ಚಿರತೆ ಪತ್ತೆಗೆ ಅರಣ್ಯ ಇಲಾಖೆಯವರು ಡ್ರೋಣ್‌ ಕ್ಯಾಮೆರಾ ಬಳಸಿದ್ದರು. ಆದರೂ ಸುಳಿವು ಪತ್ತೆಯಾಗಿಲ್ಲ.

ಗಂಗಾವತಿ: ಚಿರತೆ ದಾಳಿಗೆ ಯುವಕ ಬಲಿ, ಬೆಚ್ಚಿಬಿದ್ದ ಜನತೆ..!

ಕಳೆದ ಒಂದು ವಾರದಿಂದ ಚಿರತೆಯು ಗುಡ್ಡಗಾಡು ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದರಿಂದ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅಂಜನಾದ್ರಿ ಪರ್ವತ ಪ್ರವೇಶ ನಿಷೇಧಿಸಲಾಗಿದೆ. ಜನಸಂದಣಿ ಇದ್ದರೆ ಚಿರತೆ ಸೆರೆ ಹಿಡಿಯುವುದು ಕಷ್ಟ. ಈ ಕಾರಣಕ್ಕೆ ಬುಧವಾರದಿಂದ ದೇವಸ್ಥಾನ ಪ್ರವೇಶ ಅವಕಾಶವಿಲ್ಲ ಎಂದು ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ಕನಕರಡ್ಡಿ ತಿಳಿಸಿದ್ದಾರೆ. 
 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್