ನಮ್ಮ ಕೈ ಕಟ್ಟಿಹಾಕಿದಂತಾಗಿದೆ : ಸಂಸದೆ ಸುಮಲತಾ ಬೇಸರ

By Kannadaprabha NewsFirst Published Jul 3, 2021, 3:07 PM IST
Highlights
  • ಸಂಸದರ ಆದರ್ಶ ಗ್ರಾಮ ಗ್ರಾಮಗಳಲ್ಲಿ ನಿರೀಕ್ಷಿತ ಅಭಿವೃದ್ಧಿ  ಕೆಲಸಗಳಾಗಿಲ್ಲ
  • ಎದುರಾಗಿರುವ ಕೊರೋನಾ ಕಾರಣದಿಂದ ಪ್ರಗತಿ ಕಾಮಗಾರಿಗಳು ಸ್ಥಗಿತ
  •  ಸಂಸದರ ನಿಧಿಯನ್ನು ರದ್ದು ಮಾಡಿದ್ದಾರೆ - ಇದರಿಂದ ಕೈ ಕಟ್ಟಿಹಾಕಿದಂತಾಗಿದೆ

ಮಂಡ್ಯ (ಜು.03): ಸಂಸದರ ಆದರ್ಶ ಗ್ರಾಮ ಗ್ರಾಮಗಳಲ್ಲಿ ನಿರೀಕ್ಷಿತ ಅಭಿವೃದ್ಧಿ  ಕೆಲಸಗಳಾಗಿಲ್ಲ.  ಅದು ನನಗೂ ಗೊತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. 

ಮದ್ದೂರಿನಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಸಂಸದೆ ಸುಮಲತಾ ಒಂದೂವರೆ ವರ್ಷದಿಂದ ಎದುರಾಗಿರುವ ಕೊರೋನಾ ಕಾರಣದಿಂದ ಪ್ರಗತಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸಂಸದರ ನಿಧಿಯನ್ನು ರದ್ದು ಮಾಡಿದ್ದಾರೆ. ಇದರಿಂದ ನಮ್ಮ ಕೈ ಕಟ್ಟಿಹಾಕಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಆರ್‌ಎಸ್‌ ಡ್ಯಾಂ ಬಿರುಕಿಗೆ ಸಾಕ್ಷ್ಯಗಳಿವೆ: ಸಂಸದೆ ಸುಮಲತಾ .

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಸ್  ನಿಲ್ದಾಣಕ್ಕೆ ಬೆಸಗರಹಳ್ಳಿಯಲ್ಲಿ ಚಾಲನೆ ನೀಡಲಾಗಿದೆ. ಸ್ವಚ್ಛತೆ ಕಾಪಾಡುವುದರೊಂದಿಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಅಭಿವೃದ್ಧಿ ಎಷ್ಟು ಮಾಡಿದರು ಸಾಲುವುದಿಲ್ಲ. ಜಿ.ಪಂ. ತಾಪಂಗಳು ಆದರ್ಶ ಗ್ರಾಮಗಳ ಬೆಳವಣಿಗೆಗೆ ನೆರವಾಗಬೇಕು. ಕೇಂದ್ರದ ಅನುದಾನ ನೇರವಾಗಿ ಅಲ್ಲಿಗೆ ಬರುವುದರಿಂದ ಅವರು ಪ್ರಗತಿ ಕಾಮಗಾರಿಗಳಿಗೆ  ಹಣ ಒದಗಿಸಬೇಕಿದೆ. 

ಎಲ್ಲರೂ ಕೊರೋನಾ ನಿರ್ವಹಣೆಯಲ್ಲಿ ಸಕ್ರಿಯರಾಗಿರುವುದರಿಂದ ಈ ಕೆಲಸಗಳ ಕಡೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಹೇಳಿದರು.

click me!