ವಿಜಯಪುರದಲ್ಲಿ ಅನಿಷ್ಟ ದೇವದಾಸಿ ಪದ್ಧತಿ ಇಂದಿಗೂ ಜೀವಂತ!

By Suvarna News  |  First Published Dec 13, 2019, 10:09 AM IST

ಬಾಲಕಿಗೆ ಮುತ್ತು ಕಟ್ಟಿ ದೇವದಾಸಿ ಮಾಡಲು ಹೊರಟಿದ್ದ ಘಟನೆ ಜಿಲ್ಲೆಯ ಕಾಕಂಡಕಿ ಗ್ರಾಮದಲ್ಲಿ ನಡೆದಿದೆ|  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಬಾಲಕಿಯ ರಕ್ಷಣೆ| ಬಾಲಕಿ 5 ವರ್ಷದವಳಿದ್ದಾಗಲೇ ಕುಟುಂಬಸ್ಥರು ಮುತ್ತು ಕಟ್ಟಿದ್ದರು|


ವಿಜಯಪುರ(ಡಿ.13): ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಕೆಲವೊಂದು ಅನಿಷ್ಟ ಪದ್ಧತಿಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಂತಹ ಅನಿಷ್ಟ ಪದ್ಧತಿಗಳಲ್ಲಿ ದೇವದಾಸಿ ಪದ್ಧತಿ ಕೂಡ ಒಂದು. ಈ ಅನಿಷ್ಟ ಪದ್ಧತಿ ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ. 

ಹೌದು, ಬಾಲಕಿಗೆ ಮುತ್ತು ಕಟ್ಟಿ ದೇವದಾಸಿ ಮಾಡಲು ಹೊರಟಿದ್ದ ಘಟನೆ ಜಿಲ್ಲೆಯ ಕಾಕಂಡಕಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬಾಲಕಿ 5 ವರ್ಷದವಳಿದ್ದಾಗಲೇ ಕುಟುಂಬಸ್ಥರು ಮುತ್ತು ಕಟ್ಟಿದ್ದ ಎಂದು ತಿಳಿದು ಬಂದಿದೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೀಗ ಬಾಲಕಿ ಹದಿಹರಿಯದ ವಯಸ್ಸಿಗೆ ಬಂದಿದ್ದಾಳೆ. ಈಗ ಬಾಲಕಿಯನ್ನು ದೇವದಾಸಿಯನ್ನಾಗಿ ಮಾಡಲು ನಡೆಸಿದ ಯತ್ನವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಈ ವೇಳೆ ಬಾಲಕಿಯನ್ನು  ರಕ್ಷಣೆ ಮಾಡಿದ ಅಧಿಕಾರಿಗಳು ಬಾಲಕಿಯರ ಬಾಲ‌ ಮಂದಿರಕ್ಕೆ ಕಳುಹಿಸಿದ್ದಾರೆ. 

ಕಾಕಂಡಕಿ ಗ್ರಾಮದಲ್ಲೆ ದೇವದಾಸಿ ಕೆಂಚಮ್ಮಳಿಗೆ ದೇಗುಲ ಕಟ್ಟಿ ಪೂಜಿಸಲಾಗುತ್ತದೆ. ಇದೇ ಗ್ರಾಮದಲ್ಲಿ ಘಟನೆ ನಡೆದಿರೋದು ವಿಪರ್ಯಾಸವೇ ಸರಿ. ಕಳೆದ ಒಂದು ವಾರದ ಹಿಂದೆ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ.

click me!