ವಿದ್ಯಾರ್ಥಿಗಳಿಗೆ ಸಮರ್ಪಕ KSRTC ಬಸ್‌ ವ್ಯವಸ್ಥೆಗೆ ಕಲ್ಪಿಸಲು ಡಿಮ್ಯಾಂಡ್

By Kannadaprabha News  |  First Published Nov 3, 2023, 8:20 AM IST

ವಿದ್ಯಾರ್ಥಿಗಳು ಪ್ರತಿ ನಿತ್ಯ ತುಮಕೂರಿನ ಕಾಲೇಜಿಗೆ ತೆರಳುವ ವೇಳೆಯಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ದಿನ ನಿತ್ಯವೂ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.


 ಶಿರಾ :  ವಿದ್ಯಾರ್ಥಿಗಳು ಪ್ರತಿ ನಿತ್ಯ ತುಮಕೂರಿನ ಕಾಲೇಜಿಗೆ ತೆರಳುವ ವೇಳೆಯಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ದಿನ ನಿತ್ಯವೂ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಯೋಗೇಶ್, ದಿನವೂ ನಾವು ತುಮಕೂರಿಗೆ ಕಾಲೇಜಿಗೆ ಹೋಗಲು ಬೆಳಗ್ಗೆ ೬ ಗಂಟೆಗೆ ಬರುತ್ತೇವೆ. ಆದರೆ ಸಮಯಕ್ಕೆ ಸರಿಯಾಗಿ ಒಂದೂ ಬಸ್ಸು ಬರುವುದಿಲ್ಲ. ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳಿಗೆ ವಿಚಾರಿಸಿದರೆ ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಬಸ್ ಸಮರ್ಪಕವಾಗಿ ಕಳಿಸಿ ಎಂದರೆ ಪ್ರತಿಭಟನೆ ಮಾಡಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದರು.

Tap to resize

Latest Videos

ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆ ಸಮಯದಲ್ಲಿ ಕಾಲೇಜುಗಳಿಗೆ ತೆರಳಲು ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಕಡೆಗಳಿಂದ ಬರುವ ಬಸ್ಸುಗಳು ಶಿರಾ ನಗರ ಪ್ರವೇಶಿಸದೆ ಬೈಪಾಸ್ ನಲ್ಲಿಯೇ ಹೋಗುತ್ತಾರೆ. ಶಿರಾ ನಗರಕ್ಕೆ ಬಂದರೂ ತುಮಕೂರಿನ ಬಸ್ ನಿಲ್ದಾಣಕ್ಕೆ ಹೋಗುವುದಿಲ್ಲ. ಬೈಪಾಸ್ನಲ್ಲಿಯೇ ಬೆಂಗಳೂರಿಗೆ ಹೋಗುವುದಾಗಿ ಹೇಳುತ್ತಾರೆ. ಸರಕಾರ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುತ್ತದೆ. ಆದರೆ ಸರಿಯಾಗಿ ಬಸ್ಗಳೇ ಬರುವುದಿಲ್ಲ. ಕೆಲವರು ಪಾಸ್ ಇದ್ದವರನ್ನು ಬಸ್ಗಳಿಗೆ ಹತ್ತಿಸಿಕೊಳ್ಳುವುದೇ ಇಲ್ಲ. ಸಮಸ್ಯೆ ಬಗೆಹರಿಸುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಪೋಷಕರಾದ ರವಿಕುಮಾರ್ ಮಾತನಾಡಿ, ನಮ್ಮ ಮಕ್ಕಳನ್ನು ತುಮಕೂರಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಲು ಬೆಳಗ್ಗೆಯಿಂದ ಬಂದು ಕಾದರೂ ಬಸ್ಗಳು ಬರುವುದಿಲ್ಲ. ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಂತರ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಿಂದಾಗಿ ಕೆಲಕಾಲ ಹಿರಿಯೂರು, ಚಿತ್ರದುರ್ಗ, ಬಳ್ಳಾರಿ ಕಡೆಗೆ ತೆರಳುವ ಕೆ.ಎಸ್.ಆರ್.ಟಿ.ಸಿ. ಬಸ್‌ ಸಂಚಾರದಲ್ಲಿ ವತ್ಯಯವಾಯಿತು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

click me!