ಭಟ್ಕಳ ಕಪ್ಪೆಚಿಪ್ಪು ದುರಂತದಲ್ಲಿ ನಾಪತ್ತೆಯಾಗಿದ್ದ ಮಂಜಮ್ಮ ಶವ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

Published : May 24, 2026, 06:21 PM IST
BHATKAL NEWS

ಸಾರಾಂಶ

ಭಟ್ಕಳ ಕಡಲ ತೀರದಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಮುಳುಗಿದ ದುರಂತ ಘಟನೆಯಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿದ್ದ ಮತ್ತೊಬ್ಬರ ಮೃತದೇಹ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಭಟ್ಕಳ (ಮೇ.24) ಭಟ್ಕಳ (ಮೇ.24) ಭಟ್ಕಳದ ಶಿರಾಲಿ ತಟ್ಟಿ ಹಕ್ಕಲು ಪ್ರದೇಶದಲ್ಲಿ ನಡೆದ ದುರಂತ ಘಟನೆಗೆ ಕರ್ನಾಟಕ ಬೆಚ್ಚಿ ಬಿದ್ದಿದೆ. ಕಡಲ ತೀರದಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ 8 ಮಂದಿ ಮೃತಪಟ್ಟರೆ, ಮೂವರು ನಾಪತ್ತೆಯಾಗಿದ್ದರು. ಶೋಧ ಕಾರ್ಯದಲ್ಲಿ ಇದೀಗ ನಾಪತ್ತೆಯಾಗಿದ್ದ ಮಂಜಮ್ಮ ಗೋಯ್ದ ನಾಯ್ಕ ಶವ ಪತ್ತೆಯಾಗಿದೆ. 50 ವರ್ಷದ ಮಂಜಮ್ಮ ಪಡುಶಿರಾಲಿ ಶಾರದಹೊಳೆ ಮೂಲದವರಾಗಿದ್ದಾರೆ.

ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ

ಭಟ್ಕಳ ಕಡಲ ತೀರದಲ್ಲಿ ಕಪ್ಪೆ ಚಿಪ್ಪು ಮೀನುಗಾರಿಕೆ ತೆರಳಿದ್ದ ಕುಟುಂಬ ಇಡೀ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನಾಪತ್ತೆಯಾದವರ ಮಾಹಿತಿ

ಮಾದೇವ ಜಟ್ಟಪ್ಪ ನಾಯ್ಕ 52 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

ನಾಗರತ್ನ ಪರಮೇಶ್ವರ್ ನಾಯ್ಕ 40ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ

ಭಟ್ಕಳ ದುರಂತದಲ್ಲಿ ಮಡಿದವರ ವಿವವರ

  • ಲಕ್ಷ್ಮಿ ಮಾದೇವ ನಾಯ್ಕ, 38 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ
  • ಲಕ್ಷ್ಮಿ ಶಿವರಾಂ ನಾಯ್ಕ, 39ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ
  • ಉಮೇಶ್ ಮಂಜುನಾಥ್ ನಾಯ್ಕ, 42 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ
  • ಮಾಸ್ತಮ್ಮ ಮಂಜುನಾಥ್ ನಾಯ್ಕ, 43 ವರ್ಷ, ಪಡುಶಿರಾಲಿ ಶಾರದಹೊಳೆ ಭಟ್ಕಳ
  • ಲಕ್ಷ್ಮಿ ಅಣ್ಣಪ್ಪ ನಾಯ್ಕ ನಾಯ್ಕ, 44 ವರ್ಷ, ಪಡುಶಿರಾಲಿ ಶಾರದಾ ಹೊಳೆ ಭಟ್ಕಳ
  • ಮಂಜಮ್ಮ ಗೋಯ್ದ ನಾಯ್ಕ, 50 ವರ್ಷ, ಪಡುಶಿರಾಲಿ ಶಾರದಾ ಹೊಳೆ ಭಟ್ಕಳ

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ

ಭಟ್ಕಳ ದುರಂತ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬ ಹಲವರು ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ.

ಅಸ್ವಸ್ಥರಾದವರ ವಿವರ

  • ನಾಗರತ್ನ ಈಶ್ವರ ನಾಯ್ಕ
  • ಮಾದೇವಿ ನಾಯ್ಕ

ಭಟ್ಕಳ ಕಡಲ ತೀರದಲ್ಲಿ ನಡೆದ ದುರಂತದಲ್ಲಿ ಅಸ್ವಸ್ಥಗೊಂಡವರನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇತ್ತ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ನೀಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. 

ಘಟನೆ ಕುರಿತು ಮೀನುಗಾರಿಗೆ ಸಚಿವ ಮಂಕಾಳ ವೈದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ ಮಂಕಾಳ ವೈದ್ಯ ತಕ್ಷಣವೇ ಘಟನಾ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಮಾಧ್ಯಮ ಜೊತೆ ಮಾತನಾಡಿದ ಸಿದ್ದರಾಮಯ್ಯ, ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಕಡಲ ತೀರದಲ್ಲಿ ಮುಳುಗಿ ಒಂದೇ ಕುಟುಂಬದ ಹಲವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ಗಾಯಾಳುಗಳ ರಕ್ಷಣೆ ಆಗುತ್ತಿದೆ. ನಾಪತ್ತೆಯಾಗಿರುವ ಇಬ್ಬರು ಶೀಘ್ರವೇ ಕುಟುಂಬ ಸೇರಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾರವಾರ ಘಟನೆ ನಡೆಯಬಾರದಿತ್ತು. ಆದರೆ ದುರಂತ ನಡೆದು ಹೋಗಿದೆ. ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದ್ದಾರೆ. ಮಂಕಾಳ ವೈದ್ಯ ಕಾರವಾರಕ್ಕೆ ತೆರಳಿದ್ದಾರೆ. ಮೊದಲು ಬದುಕಿಸುವ ಕೆಲಸ ಮಾಡುತ್ತೇವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ ಎಂದಿದ್ದಾರೆ.

 

 

PREV
Read more Articles on
click me!

Recommended Stories

ಬರಾಕ್ ಒಬಾಮಾ ಮಂಡ್ಯ ಭೇಟಿ ಹಿನ್ನೆಲೆ, ಈ ಹಳ್ಳಿಯ ರಸ್ತೆ ಅಭಿವೃದ್ಧಿಗೆ ₹11.4ಕೋಟಿ ಮಂಜೂರು ಮಾಡಿದ ರಾಜ್ಯ ಕ್ಯಾಬಿನೆಟ್
ಮಂಗಳೂರು ಹೆದ್ದಾರಿಯ ಹೊಸ ಅಧ್ಯಾಯ, ಬೈಕಂಪಾಡಿಗೆ ಎಲಿವೇಟೆಡ್ ಫ್ಲೈಓವರ್, 414 ಕೋಟಿ ರೂ ಯೋಜನೆಗೆ ಕೇಂದ್ರದ ಅನುಮೋದನೆ