KPSC ಹುದ್ದೆಗಾಗಿ ನಡೆದ ಡೀಲಿಂಗ್ ಒಂದರ ಆಡಿಯೋ ವೈರಲ್ ಆಗಿದೆ. ಕೋಟ್ಯಂತರ ಹಣ ಪಡೆದಿರುವ ಬಗ್ಗೆ ಈ ಆಡಿಯೋದಲ್ಲಿ ವಿಚಾರ ಬಹಿರಂಗವಾಗಿದೆ.
ಚನ್ನಪಟ್ಟಣ (ಮಾ.24): ಕೆಎಎಸ್ ಹುದ್ದೆಗೆ ಕೆಪಿಎಸ್‌ಸಿ ಸದಸ್ಯರೊಬ್ಬರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಸಂಭಾಷಣೆಯನ್ನೊಳಗೊಂಡಿರುವ ಆಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್ ಆಗಿದೆ.
ತಾಲೂಕು ಮೂಲದ ಕೆಪಿಎಸ್ಸಿ ಸದಸ್ಯರೊಬ್ಬರು ತಮ್ಮ ಆಪ್ತರಾದ ಸ್ಥಳೀಯ ಕಾಂಗ್ರೆಸ್ ಮುಖಂಡರ ಮೂಲಕ ಕೆಎಎಸ್ ಹುದ್ದೆಗೆ ಹಣ ಪಡೆದಿದ್ದು, ಕೆಲಸ ಆಗದ ಹಿನ್ನೆಲೆಯಲ್ಲಿ ಹಣವನ್ನು ಹಿಂದಕ್ಕೆ ನೀಡಿದ್ದಾರೆ ಎಂಬ ಸಂಭಾಷಣೆ ಈ ಆಡಿಯೋ ಕ್ಲಿಪ್‌ನಲ್ಲಿ ಇದೆ.
undefined
ಬೆಂಗಳೂರಿನಲ್ಲಿ ವಾಸವಿರುವ ತಾಲೂಕು ಮೂಲದ ನಿವೃತ್ತ ಅಧಿಕಾರಿಯೊಬ್ಬರ ಪುತ್ರಿಗೆ ಕೆಲಸ ಕೊಡಿಸುವುದಾಗಿ ಕೆಪಿಎಸ್ಸಿ ಸದಸ್ಯರು ಮತ್ತು ತಾಲೂಕು ಕಾಂಗ್ರೆಸ್‌ನ ಇಬ್ಬರು ಮುಖಂಡರು ಡೀಲ್ ನಡೆಸಿದ್ದು, ಒಂದು ಕೋಟಿ ಹಣ ಪಡೆದಿರುವ ಬಗ್ಗೆ, ಕೆಲಸ ಆಗದ ಹಿನ್ನೆಲೆಯಲ್ಲಿ 50 ಲಕ್ಷ ರು. ಹಣ ನೀಡಿದ್ದಾರೆ ಎಂದು, ಬಾಕಿ ಉಳಿದಿರುವ 50 ಲಕ್ಷ ರು. ಹಣವನ್ನು ನೀಡಿಲ್ಲ ಎಂಬ ವಿಷಯ ಸಂಭಾಷಣೆಯಲ್ಲಿದೆ.
ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ ಹೊರಡಿಸಿದ ಮುಖ್ಯ ಕಾರ್ಯದರ್ಶಿ
ತಾಲೂಕು ಕಾಂಗ್ರೆಸ್‌ನ ಪ್ರಭಾವಿ ಮುಖಂಡರೊಬ್ಬರು ಈ ದೂರವಾಣಿಯಲ್ಲಿ ಹಣ ನೀಡಿದ್ದಾರೆ ಎನ್ನಲಾದ ನಿವೃತ್ತ ಅಧಿಕಾರಿಯ ಜತೆಗೆ ಸಂಭಾಷಣೆ ನಡೆಸಿದ್ದು, ಕೆಪಿಎಸ್ಸಿ ಸದಸ್ಯರು ನನಗೆ ತಲುಪಿರುವ ಹಣವನ್ನು ಹಿಂದಕ್ಕೆ ನೀಡಿದ್ದೇನೆ. ಬಾಕಿ ಹಣವನ್ನು ನೀವು ಕೊಟ್ಟಿರುವ ಮುಖಂಡರ ಬಳಿಯೇ ಪಡೆದುಕೊಳ್ಳಿ ಎಂದು ಹೇಳಿದ್ದಾರೆ ಎಂಬ ಸಂಗತಿ ಸಂಭಾಷಣೆಯಲ್ಲಿದೆ.
ನಿರಾಕರಣೆ: ಆದರೆ ಈ ಆಡಿಯೋ ತುಣುಕನ್ನು ಕೆಲ ಕಾಂಗ್ರೆಸ್ ಮುಖಂಡರು ನಿರಾಕರಿಸಿದ್ದು, ಇದು ನಕಲಿ ಆಡಿಯೋ ಆಗಿದೆ. ಕೆಪಿಎಸ್‌ಸ್ಸಿ ಸದಸ್ಯರ ಸದಸ್ಯತ್ವದ ಅವಧಿ ಮಾ.26ಕ್ಕೆ ಕೊನೆಗೊಳ್ಳಲಿದ್ದು, ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ ಎಂದು ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.