ಶಿರಸಿ: ಪ್ಲಾಸ್ಟಿಕ್‌ ಚೀಲದಲ್ಲಿ ಮೃತ ಆಕಳು ಕರು ಪತ್ತೆ

By Kannadaprabha News  |  First Published Sep 2, 2021, 8:53 AM IST

*  ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ
*  ರಾತ್ರಿಯ ವೇಳೆ ಮೃತ ಕರು ಎಸೆದುಹೋದ ಅನಾಗರಿಕರು
*  ಮಾನವೀಯತೆ ಮೆರೆದ ಶ್ರೀನಿವಾಸ ಹೆಬ್ಬಾರ 


ಶಿರಸಿ(ಸೆ.02):  ಇಲ್ಲಿಯ ಚಿಪಗಿ ರಸ್ತೆ ಪಕ್ಕದಲ್ಲಿ ಮೃತ ಆಕಳು ಕರುವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಎಸೆದಿರುವುದು ಪತ್ತೆಯಾಗಿದೆ.

ಈ ರಸ್ತೆಯನ್ನು ಶ್ರೀನಿವಾಸ ಹೆಬ್ಬಾರ ಅವರ ಜೀವಜಲ ಕಾರ್ಯಪಡೆಯಿಂದ ಸ್ವಚ್ಛವಾಗಿರಿಸಿಕೊಳ್ಳಲಾಗಿತ್ತು. ಇಂಥ ಸ್ಥಳದಲ್ಲಿ ಅನಾಗರಿಕರು ರಾತ್ರಿಯ ವೇಳೆ ಮೃತ ಕರುವನ್ನು ಎಸೆದುಹೋಗಿದ್ದಾರೆ. ಈ ರಸ್ತೆಯಿಂದ ಸಂಚರಿಸುತ್ತಿದ್ದ ಉರಗಪ್ರೇಮಿ ಪ್ರಶಾಂತ ಹುಲೇಕಲ್‌ ಚೀಲದಿಂದ ಗೊಬ್ಬು ವಾಸನೆ ಬೀರುತ್ತಿರುವುದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಚೀಲದಲ್ಲಿ ಕರು ಮೃತಪಟ್ಟಿರುವುದು ಕಂಡುಬಂದಿದೆ.

Latest Videos

undefined

ರೈತರ ಸಾಲಮನ್ನಾ ಇನ್ನೂ ಬಾಕಿ: ಸಂಕಷ್ಟದಲ್ಲಿ ಅನ್ನದಾತ

ಶ್ರೀನಿವಾಸ ಹೆಬ್ಬಾರ ಅವರು ಕಾರ್ಯಪಡೆಯ ತ್ಯಾಜ್ಯ ಸಾಗಿಸುವ ವಾಹನದಿಂದ ಮೃತ ಕರುವನ್ನು ನಗರಸಭೆಯ ಘನ ತ್ಯಾಜ್ಯ ಘಟಕಕ್ಕೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
 

click me!