'ಯಡಿಯೂರಪ್ಪ ಸೂಚಿಸಿದರೆ ಸಂತೋಷದಿಂದ ಡಿಸಿಎಂ ಹುದ್ದೆ ತ್ಯಜಿಸುತ್ತೇನೆ'

Suvarna News   | Asianet News
Published : Jan 27, 2020, 11:19 AM IST
'ಯಡಿಯೂರಪ್ಪ ಸೂಚಿಸಿದರೆ ಸಂತೋಷದಿಂದ ಡಿಸಿಎಂ ಹುದ್ದೆ ತ್ಯಜಿಸುತ್ತೇನೆ'

ಸಾರಾಂಶ

ಪಕ್ಷ ಯಾವುದೇ ನಿರ್ಣಯ ಕೈಗೊಂಡರು ಅದಕ್ಕೆ ನಾನು ಬದ್ಧ| ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದ ಗೋವಿಂದ ಕಾರಜೋಳ|ಡಿಸಿಎಂ ಸ್ಥಾನ ಹೆಚ್ಚಾಗಿರುವ ಪರಿಣಾಮ ಜನರಿಗೆ ಯಾವುದೇ ತೊಂದರೆ ಆಗಿಲ್ಲ|

ವಿಜಯಪುರ(ಜ.27): ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತಾನಾಡುತ್ತಾರೆ. ನಾನು ಪ್ರವಾಸದಲ್ಲಿ ಇರುವ ಕಾರಣ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದೇನೆ. ನಾವು ಬೆಳೆದಿರುವದೇ ಪಾರ್ಟಿಯಿಂದ. ಪಕ್ಷ ಯಾವುದೇ ನಿರ್ಣಯ ಕೈಗೊಂಡರು ಅದಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸದ ಸಂಬಂಧ ಸೋಮವಾರ ನಗರದಲ್ಲಿ ಮಧ್ಯಮದವರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಅದ್ಯಕ್ಷರು, ಪ್ರಧಾನ ಮಂತ್ರಿ, ಯಡಿಯೂರಪ್ಪ ನವರು ಏನು ನಿರ್ಣಯ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ದನಾಗಿದ್ದೇನೆ. ನಾನು ಸಚಿವ ಸ್ಥಾನ ಬಿಡು ಎಂದರೆ ಅತ್ಯಂತ ಖುಷಿ ಇಂದ ಬಿಡುವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸಿಎಂ ಸ್ಥಾನ ಹೆಚ್ಚಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಸ್ಥಾನ ಹೆಚ್ಚಾಗಿರುವ ಪರಿಣಾಮ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಸಾರ್ವಜನಿಕರ ಜೊತೆ ನಾವು ಸಾರ್ವಜನಿಕರು‌ ಸಾಮಾನ್ಯ ಜನರಿಗೆ ಕೊಡುವ ವ್ಯವಸ್ಥೆ ನಮಗೆ ಕೊಡಿ ಎಂದು ನಾನು ಮೊದಲೇ ಹೇಳಿದ್ದೇನೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೂ ಸ್ಥಾನ ಮಾನ ಸಿಗಬೇಕು ಎಂದು ಹೇಳಿದ್ದಾರೆ.
 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!