ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚನ್ನಪಟ್ಟಣಕ್ಕೆ ಬರುವುದರಿಂದ ನನಗೆ ಭಯ ಶುರುವಾಗಿದೆ.
ರಾಮಗರ (ಜೂ.20): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚನ್ನಪಟ್ಟಣಕ್ಕೆ ಬರುವುದರಿಂದ ನನಗೆ ಭಯ ಶುರುವಾಗಿದೆ. ಯಾಕೆಂದರೆ ಚನ್ನಪಟ್ಟಣವನ್ನು ಕನಕಪುರ ಮಾಡೆಲ್ ಮಾಡುತ್ತೇನೆಂದು ಜನರ ಮೇಲೆ ಬೆದರಿಕೆ, ದಬ್ಬಾಳಿಕೆ ಶುರು ಮಾಡಬಹುದು. ಇದರಿಂದ ಜನರಿಗೆ ಅನ್ಯಾಯವಾಗುವ ಆತಂಕ ಶುರುವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಆರೋಪಿಸಿದ್ದಾರೆ.
ಚನ್ನಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಚನ್ನಪಟ್ಟಣಕ್ಕೆ ಬರುವುದರಿಂದ ನನಗೆ ಭಯ ಶುರುವಾಗಿದೆ. ಯಾಕೆಂದರೆ ಅವರು ನಿನ್ನೆ ಚನ್ನಪಟ್ಟಣಕ್ಕೆ ಬಂದು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಚನ್ನಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬೆದರಿಕೆ ಹಾಕಿದ್ದಾರೆ. ಮುಂದುವರೆದು, ಕೆಲವು ಅಧಿಕಾರಿಗಳನ್ನ ಬೆಂಗಳೂರಿಗೆ ಕರೆಸಿ ಧಮ್ಕಿ ಹಾಕಿದ್ದಾರೆ. ಜೊತೆಗೆ, ಒಂದು ಸಮುದಾಯದ 7,000ರಿಂದ 8,000 ಮತಗಳನ್ನ ಹೊಸದಾಗಿ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮಾಮಾರ್ಗದಲ್ಲಿ ಚುನಾವಣೆಗೆ ಬರ್ತಿದ್ದಾರೆ. ಇದಿಂದ ಚನ್ನಪಟ್ಟಣದ ಜನರಿಗೆ ಅನ್ಯಾಯವಾಗುತ್ತದೆ ಎಂಬ ನಿಟ್ಟಿನಲ್ಲಿ ಭಯ ಆವರಿಸಿದೆ ಎಂದು ತಿಳಿಸಿದರು.
ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ದರ್ಶನ್ ಪರ ಲಾಬಿ ಮಾಡಿದ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಎಚ್ಚರಿಕೆ!
ಚನ್ನಪಟ್ಟಣ ಉಪಚುನಾವಣೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬರ್ತಿದ್ದಾರೆ. ಅವರಿಗೆ ತುಂಬು ಹೃದಯದ ಸ್ವಾಗತ. ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗೆ ಪ್ರತಿಸ್ಪರ್ಧೆ ಮುಖ್ಯ. ಹಾಗಾಗಿ, ಅವರ ಸ್ಪರ್ಧೆಯನ್ನ ಸ್ವಾಗತಿಸುತ್ತೇವೆ. ಈ ಹಿಂದೆ ಚನ್ನಪಟ್ಟಣದ ಎರಡು ಹೋಬಳಿಗಳು ಅವರಿಗೆ ಸೇರಿತ್ತು. ಆ ಋಣ ತೀರಿಸಲು ಬರ್ತೀನಿ ಎಂದಿದ್ದಾರೆ, ಬರಲಿ. ಆದರೆ, ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಡಿ.ಕೆ. ಸುರೇಶನ ಸೋಲು ಹತಾಶೆ ತಂದಿದೆ. ಅದನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ, ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯಲು ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
ಇನ್ನು ಚನ್ನಪಟ್ಟಣವನ್ನ ಕನಕಪುರದ ರೀತಿ ಅಭಿವೃದ್ಧಿ ಮಾಡ್ತೇನೆ ಎಂದಿದ್ದಾರೆ. ಕನಕಪುರ ಮಾಡೆಲ್ ಎಂದರೆ ಬೆದರಿಕೆ, ದಬ್ಬಾಳಿಕೆಯಾ.? ಜನರನ್ನ ಹೆದರಿಸುವ ತಂತ್ರವೇ ಕನಕಪುರ ಮಾಡೆಲ್.! ಚನ್ನಪಟ್ಟಣ ಕ್ಷೇತ್ರದಲ್ಲಿ ಜನ ಸದೃಡವಾಗಿದ್ದಾರೆ. ಕ್ಷೇತ್ರದಲ್ಲಿ ನೀರಾವರಿ, ಹೈನುಗಾರಿಕೆ ಸಮೃದ್ಧವಾಗಿ ನಡೆಯುತ್ತಿದೆ. ಕನಕಪುರಕ್ಕೆ ಚನ್ನಪಟ್ಟಣವನ್ನ ಹೋಲಿಸುವುದು ಬೇಡ. ಡಿ.ಕೆ. ಶಿವಕುಮಾರ್ ಹಗಲು ಹೊತ್ತಿನಲ್ಲಿ ಬಂದು ನಮ್ಮ ಕ್ಷೇತ್ರ ನೋಡಲಿ ಎಂದು ಸವಾಲು ಹಾಕಿದರು.
ಹಳೆಯ ಪೇಂಟಿಂಗ್ ಬಟ್ಟಲಿಗೆ 314 ಕೋಟಿ ರೂ. ಕೊಟ್ಟ ಉದ್ಯಮಿ; ವಿಶ್ವದಾಖಲೆ ಬರೆದ ಪಾತ್ರೆಯ ವಿಶೇಷತೆ ಗೊತ್ತಾ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್ ಸೋಲು ಹತಾಶೆ ತಂದಿದೆ. ಅದನ್ನ ಅರಗಿಸಿಕೊಳ್ಳಲಾಗದೇ, ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವು ಚುನಾವಣಾ ಆಯೋಗಕ್ಕೆ ನಾವು ಮನವಿ ಮಾಡ್ತೇವೆ. ಪಾರದರ್ಶಕವಾಗಿ ಚುನಾವಣೆ ಆಗಬೇಕು. ಚುನಾವಣೆ ನಮ್ಮ ಪರವಾಗಿ ಇದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಜನರ ಗಮನಕ್ಕಿದೆ. ಹಾಗಾಗಿ, ಉಪ ಚುನಾವಣೆ ಬಿಜೆಪಿ ಗೆಲ್ಲಲಿದೆ. ಎನ್‌ಡಿಎ ಒಕ್ಕೂಟದಿಂದ ಯಾರೇ ಅಭ್ಯರ್ಥಿಯಾದರೂ ನಾವು ಚುನಾವಣೆ ಮಾಡ್ತೇವೆ. ಆದರೆ, ಹೊಸ ಅವತಾರ ಎತ್ತಿಕೊಂಡು ಡಿಕೆಶಿ ಚನ್ನಪಟ್ಟಣಕ್ಕೆ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಕೀಯ ಜೀವನ ಮೊದಲಿನಿಂದಲೂ ಕುತಂತ್ರ ನಡೆಸುತ್ತಾ ಬಂದಿದ್ದಾರೆ ಎಂದು ಆರೋಪ ಮಾಡಿದರು.