ಕೊರೋನಾ ವೈರಸ್‌ನಿಂದ ಮೃತ ವ್ಯಕ್ತಿ ತಾಳಿಕೋಟೆ ಪಟ್ಟಣಕ್ಕೆ ಹೋಗಿದ್ದ ಎಂಬ ಬಗ್ಗೆ ಮಾಹಿತಿ ಇಲ್ಲ| ಈ ಬಗ್ಗೆ ಅವರ ಕುಟುಂಬದವರು ಸೂಕ್ತ ಮಾಹಿತಿ ನೀಡುತ್ತಿಲ್ಲ| ಕೌನ್ಸಲಿಂಗ್ ಮೂಲಕ ಮಾಹಿತಿ ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ|
ಕಲಬುರಗಿ(ಮಾ.14): ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಹೋದವರ ಪಟ್ಟಿ ಸಿಕ್ಕಿದ್ದು, ಅಂತ್ಯಕ್ರಿಯೆಗೆ ಒಟ್ಟು 75 ಜನ ಹೋಗಿದ್ದರು ಎಂದು ತಿಳಿದು ಬಂದಿದೆ. ಅಂತ್ಯಕ್ರಿಯೆಗೆ ಹೋದ ಎಲ್ಲ 75 ಜನರಿಗೆ ಹೋಂ ಐಸೋಲೆಷನ್ ಮಾಡಲಾಗಿದೆ. ಈ ಎಲ್ಲಾ 75 ಜನರಿಗೆ ಮಾನಿಟರ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಅವರು ಹೇಳಿದ್ದಾರೆ.
ಇಂದು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೃತ ವ್ಯಕ್ತಿ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣಕ್ಕೆ ಹೋಗಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಅವರ ಕುಟುಂಬದವರು ಸೂಕ್ತ ಮಾಹಿತಿ ನೀಡುತ್ತಿಲ್ಲ. ಕೌನ್ಸಲಿಂಗ್ ಮೂಲಕ ಮಾಹಿತಿ ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೋಂ ಐಸೋಲೆಷನ್‌ನಲ್ಲಿದ್ದವರಿಗೆ ಅಗತ್ಯ ವಸ್ತುಗಳನ್ನ ಅವರ ಮನೆಗಳಿಗೆ ಕಳುಹಿಸಲಾಗುತ್ತಿದೆ. ಅತಿ ತುರ್ತು ಕೆಲಸ ಇದ್ದರೆ ಮಾತ್ರ ಕಲಬುರಗಿಗೆ ಬನ್ನಿ, ಇಲ್ಲದಿದ್ರೆ ಸದ್ಯ ಕಲಬುರಗಿ ಕಡೆ ಬರಬೇಡಿ. ಕಲಬುರಗಿಯಲ್ಲಿರುವವರು ಮನೆಯಲ್ಲಿಯೇ ಇರಿ. ಅತಿ ಜರೂರು ಕೆಲಸ ಇದ್ರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ ಎಂದು ಜಿಲ್ಲಾಧಿಕಾರಿ ಶರತ್ ಅವರು ಮನವಿ ಮಾಡಿಕೊಂಡಿದ್ದಾರೆ.
ಕಲಬುರಗಿಯ ಓರ್ವ ಪರ್ತಕರ್ತರಿಗೆ ಐಸೋಲೆಷನ್ ಸೂಚನೆ ನೀಡಲಾಗಿದೆ. ಮೃತನ ಕುಟುಂಬದವರ ಸಂದರ್ಶನ ಮಾಡಿದ್ದಕ್ಕೆ ಕೊರೋನಾ ವೈರಸ್ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರ ಜೊತೆಗೆ ಮತ್ತಿಬ್ಬರು ಖಾಸಗಿ ವಾಹಿನಿ ವರದಿಗಾರರಿಗೂ ಐಸೋಲೆಷನ್‌ಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.