ನಮ್ಮೂರಿಗೆ ಗ್ರಂಥಾಲಯ ನಿರ್ಮಿಸಿಕೊಡಿ, ಅರಣ್ಯ ಇಲಾಖೆ ಕಿತ್ತುಕೊಂಡ ಕೃಷಿ ಭೂಮಿ ಬಿಡಿಸಿಕೊಡಿ,ಬಡವರ ಮನೆಗಳಿಗೆ ವಿದ್ಯುತ್ ಬೆಳಕು ಹಾಗೂ ಶಾಚಾಲಯ ನಿರ್ಮಿಸಿಕೂಡುವಂತೆ ಒತ್ತಾಯಿಸಿ ಚಿಕ್ಕನಾಯಕನಹಳ್ಳಿಯ ಆನೇಕ ಮಂದಿ ದಲಿತ ಯುವಕರು ಮಧುಗಿರಿ ಉಪವಿಭಾಗಧಿಕಾರಿ ರಿಷಿ ಆನಂದ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಾವಗಡ : ನಮ್ಮೂರಿಗೆ ಗ್ರಂಥಾಲಯ ನಿರ್ಮಿಸಿಕೊಡಿ, ಅರಣ್ಯ ಇಲಾಖೆ ಕಿತ್ತುಕೊಂಡ ಕೃಷಿ ಭೂಮಿ ಬಿಡಿಸಿಕೊಡಿ,ಬಡವರ ಮನೆಗಳಿಗೆ ವಿದ್ಯುತ್ ಬೆಳಕು ಹಾಗೂ ಶಾಚಾಲಯ ನಿರ್ಮಿಸಿಕೂಡುವಂತೆ ಒತ್ತಾಯಿಸಿ ಚಿಕ್ಕನಾಯಕನಹಳ್ಳಿಯ ಆನೇಕ ಮಂದಿ ದಲಿತ ಯುವಕರು ಮಧುಗಿರಿ ಉಪವಿಭಾಗಧಿಕಾರಿ ರಿಷಿ ಆನಂದ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ಸೋಮವಾರ ತಾಲೂಕಿನ ರಾಜವಂತಿ ಗ್ರಾಪಂ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಾರ್ಯಕ್ರಮದಲ್ಲಿ ಮೂಲಭೂತ ಸಮಸ್ಯೆ, ನಿರ್ಗತಿಕರ ಮಾಶಾಸನ ವಿಳಂಬ ಹಾಗೂ ಶಾಲೆಯ ದುಸ್ಥಿತಿ ಬಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಗಮನ ಸೆಳೆದರು.
ಈ ವೇಳೆ ಮುಖಂಡ ಆಹೋಬಳೇಶ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಶಾಲೆಯ ಮೇಲ್ವಾವಣಿ ಹಾಗೂ ಗೋಡೆಗಳು ಆತಂತ್ರವಾಗಿವೆ. ಈ ಬಗ್ಗೆ ಆನೇಕ ಬಾರಿ ಗಮನ ಸೆಳೆದರೂ ಶೀಘ್ರ ಹೊಸ ಶಾಲಾ ಕೊಠಡಿ ನಿರ್ಮಿಸಿಕೊಡುವಲ್ಲಿ ಮಧುಗಿರಿ ಉಪನಿರ್ದೇಶಕ ಹಾಗೂ ಇಲ್ಲಿನ ಬಿಇಒ ಅಶ್ವತ್ಥನಾರಾಯಣ್ ಆಸಕ್ತಿವಹಿಸಿಲ್ಲ. ಅಗತ್ಯ ಶಿಕ್ಷಕರಿದ್ದಾರೆ. ಮೊದಲು ಶಾಲಾ ಕೊಠಡಿಗಳನ್ನು ನಿರ್ಮಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಸಹಕರಿಸಿ. ಅರಣ್ಯ ಇಲಾಖೆ ಅಧಿಕಾರಿಗಳು ಬೆದರಿಸಿ ಕಿತ್ತುಕೊಂಡಿರುವ 200 ಜನರ ತಲಾ 2 ಎಕರೆ ಭೂಮಿಗೆ ಹಕ್ಕುಪತ್ರ ಹಾಗೂ ಸಾಗುವಳಿಗೆ ಭೂಮಿ ಕಲ್ಪಿಸಬೇಕು. ವ್ಯವಸಾಯ ಜಮೀನುಗಳಿಗೆ ಖಾತೆ ಮಾಡಿಸಿಕೊಡಬೇಕು. ಇಲ್ಲವಾದರೆ ಬೇರೆಡೆ ಕೃಷಿ ಭೂಮಿ ಕಲ್ಪಿಸುವಂತೆ ಒತ್ತಾಯಿಸಿದರು.
ಪಿಎಂಎಸ್‌ವೈ ಯೋಜನೆ ಅಡಿ ಮಂಜೂರಾತಿಯಾಗಿ ನಿರ್ಮಿಣ ಹಂತದಲ್ಲಿರುವ ಉಳಿಕೆ ಹಣವನ್ನು ಪಾವತಿಸಬೇಕು. ಮನೆಗಳ ಬಳಿ ಶೌಚಾಲಯ ಹಾಗೂ ನರೇಗಾದಲ್ಲಿ ರೈತರ ಜಮೀನುಗಳ ಪ್ರಗತಿ ಮತ್ತು ಕೂಲಿಕಾರರಿಗೆ ಕೆಲಸ ನೀಡುವಂತೆ ಮನವಿ ಮಾಡಿದರು.
ಡಾ,ಬಿ.ಆರ್.ಅಂಬೇಡ್ಕರ್ ಸಂಘದ ಮಂಜುನಾಥ್ ಮಾತನಾಡಿ ಸಂವಿಧಾನ ಶಿಲ್ಪಿ, ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಸರ್ಕಾರಿ ಜಾಗ ಕಲ್ಪಿಸುವಂತೆ ತಾಲೂಕು ಆಡಳಿತ ಹಾಗೂ ಗ್ರಾಪಂಗೆ ಮನವಿ ಮಾಡಿದರು.
ಮಾಸಾಶನ ವಿಳಂಬ, ನರೇಗಾ ಪ್ರಗತಿ ಕುಂಠಿತ ಹಾಗೂ ಇನ್ನಿತರೆ ಸಮಸ್ಯೆ ಅಲಿಸಿದ ಉಪವಿಭಾಗಧಿಕಾರಿ ಕೂಡಲೇ ವರದಿ ಪಡೆದು ಸಮಸ್ಯೆ ನಿವಾರಣೆಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆ, ಕೃಷಿ ಹಾಗೂ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಸೌಲಭ್ಯ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ರಾಜವಂತಿ ಗ್ರಾಪಂ ವ್ಯಾಪ್ತಿಯ ಸುಮಾರು 58ಮಂದಿ ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿಯ ಆದೇಶ ಪತ್ರ ವಿತರಿಸಲಾಯಿತು.
ಈ ವೇಳೆ ರಾಜವಂತಿ ಗ್ರಾಪಂ ಅಧ್ಯಕ್ಷ ಭವ್ಯ ರಾಮಕೃಷ್ಣಪ್ಪ ಹಾಗೂ ಉಪಾಧ್ಯಕ್ಷ ಶ್ರೀರಾಮಪ್ಪ ಹಾಗೂ ಗ್ರಾಪಂ ಸದಸ್ಯರು ಮತ್ತು ತಾಪಂ ಇಒ ಶಿವರಾಜಯ್ಯ, ಲೋಕೋಪಯೋಗಿ ಇಲಾಖೆ ಎಇಇ ಅನಿಲ್‌ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ತೋಟಗಾರಿಕೆ ಇಲಾಖೆಯ ಶಂಕರ್‌ಮೂರ್ತಿ,ಪಶುಆರೋಗ್ಯ ಇಲಾಖೆಯ ಸಿದ್ದಗಂಗಪ್ಪ,ಜಿಪಂನ ಎಇಇ ಸುರೇಶ್, ಬಿಇಒ ಅಶ್ವತ್ಥನಾರಾಯಣ್, ಕಂದಾಯ ಇಲಾಖೆಯ ಶಿರಸೇದಾರ್ ನರಸಿಂಹಮೂರ್ತಿ ಜಿಪಂ ಕುಡಿವ ನೀರು ವಿಭಾಗದ ಎಇ ಬಸವಲಿಂಗಪ್ಪ,ಕಂದಾಯ ತನಿಖಾಧಿಕಾರಿಗಳಾದ ಕಿರಣ್‌ಕುಮಾರ್,ರಾಜ್‌ಗೋಪಾಲ್ ಹಾಗೂ ಇತರೆ ಊರಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.