ಮಹಾನಗರ ಪಾಲಿಕೆಯ ಆಡಳಿತ ನಿಷ್ಕ್ರಿಯವಾಗಿದೆ. ನಮ್ಮ ಕಾಳಜಿ ಇರುವುದು ಅಭಿವೃದ್ಧಿ ಬಗ್ಗೆ ಮಾತ್ರ. ಜಯಮ್ಮ ಗೋಪಿನಾಯ್ಕ್ ಮೇಯರ್ ಆಗಿ ಐದು ತಿಂಗಳಾದರೂ ಯಾವ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲಿ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜು.17): ಮಹಾನಗರ ಪಾಲಿಕೆಯ ಆಡಳಿತ ನಿಷ್ಕ್ರಿಯವಾಗಿದೆ. ನಮ್ಮ ಕಾಳಜಿ ಇರುವುದು ಅಭಿವೃದ್ಧಿ ಬಗ್ಗೆ ಮಾತ್ರ. ಜಯಮ್ಮ ಗೋಪಿನಾಯ್ಕ್ ಮೇಯರ್ ಆಗಿ ಐದು ತಿಂಗಳಾದರೂ ಯಾವ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲಿ. ಅದನ್ನು ಬಿಟ್ಟು ವಿಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಮೇಯರ್‌ಗೆ ತಿರುಗೇಟು ನೀಡಿದ್ದಾರೆ.
undefined
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕ್ಷುಲ್ಲಕ ರಾಜಕಾರಣ ಮಾಡುವ ಅವಶ್ಯಕತೆ ನಮಗೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ 'ವಾಚ್ ಡಾಗ್' ಇದ್ದಂತೆ. ಆಡಳಿತ ಪಕ್ಷ ತಪ್ಪು ಮಾಡಿದಾಗ ಪ್ರಶ್ನಿಸುವುದು ತಪ್ಪಲ್ಲ. ದುರಾಡಳಿತ, ದಿವಾಳಿತನದ ಬಗ್ಗೆ ಪ್ರಸ್ತಾಪ ಮಾಡಬಾರದೇ ಎಂದ ಅವರು, ಜನರು ಅಭಿವೃದ್ಧಿ ಕೆಲಸ ಮಾಡಲಿ, ವಾರ್ಡ್‌ಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಆರಿಸಿ ಕಳುಹಿಸುತ್ತಾರೆ. ನನ್ನ ವಾರ್ಡ್‌ನ ಜನರು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ಸಮಸ್ಯೆಯಾಗುವುದನ್ನು ಪ್ರಶ್ನಿಸುವುದು ತಪ್ಪೇ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ತಡೆ ಹಾಕಲು ನಾವು ಕಾವಲುಗಾರರಂತೆಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ದಾವಣಗೆರೆ: ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ ಕೊಚ್ಚಿಹೋದ ಯುವಕ
ಅನುದಾನ ಇದೆ ಎಂದು ಹೇಳಿಕೊಳ್ಳುವ ಬಿಜೆಪಿಯವರು ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ವಿಪಕ್ಷದವರ ಆರೋಪಕ್ಕೆ ಸಮರ್ಪಕ ಉತ್ತರ ನೀಡದೇ ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗ ರಾಜ್ಯ ಹಣಕಾಸು ನಿಧಿಯಲ್ಲಿ 25 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎನ್ನುತ್ತಾರೆ. ಉಸ್ತುವಾರಿ ಸಚಿವರ ಇಲಾಖೆಯಿಂದ ಹೆಚ್ಚಿನ ಅನುದಾನ ತರಲು ಇವರಿಗೆ ಸಾಧ್ಯವಾಗಿಲ್ಲ ಎಂದರೆ ಬಿಜೆಪಿ ಯಾವ ಮಟ್ಟಿಗೆ ಆಡಳಿತ ನಡೆಸುತ್ತದೆ ಎಂಬುದು ಗೊತ್ತಾಗುತ್ತದೆ. ಎರಡು ವರ್ಷದಲ್ಲಿ ಯಾವ ಕಾಮಗಾರಿಗಳಿಗೆ, ಪಾಲಿಕೆ ಅಭಿವೃದ್ದಿಗೆ ನಗರಾಭಿವೃದ್ಧಿ ಇಲಾಖೆಯಿಂದ ಎಷ್ಟು ಹಣ ಬಂದಿದೆ ಎಂಬುದನ್ನು ಹೇಳಲಿ.
ಯುಜಿಡಿ ಸೇರಿದಂತೆ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಹಣ ಇಲ್ಲ ಎಂದು ನಮ್ಮ ಬಳಿ ಹೇಳುತ್ತಾರೆ. ಮಾಧ್ಯಮದವರ ಮುಂದೆ 30 ಕೋಟಿ ರೂಪಾಯಿ ಇದೆ ಎನ್ನುತ್ತಾರೆ. ಹಾಗಾದರೆ ಅನುದಾನ ಯಾಕೆ ನೀಡುತ್ತಿಲ್ಲ. ಮೇಯರ್ ರಬ್ಬರ್ ಸ್ಟಾಂಪ್ ಆಗಿದ್ದಾರೆ. ರಾಕೇಶ್ ಜಾಧವ್ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿರುವುದು. ಮುಂಬರುವ ದಿನಗಳಲ್ಲಿ ಅನುದಾನವನ್ನು ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ನೀಡೋಲ್ಲ ಅನ್ನೋಕೆ ಯಾರು? ಏನು ಮಾತನಾಡುತ್ತೇನೆ ಎಂಬ ಅರಿವಿಲ್ಲ. ಇಂಥವರನ್ನಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮೇಯರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಲೇವಡಿ ಮಾಡಿದರು.
ಕೇವಲ ಜಯದೇವ ಶ್ರೀ ಪ್ರಶಸ್ತಿ ಪಡೆದು ಹಣವನ್ನು ವಾಪಸ್ ಮಠದ ಶಿಕ್ಷಣ ಸಂಸ್ಥೆಗೆ ನೀಡಿದ ಸಿದ್ದರಾಮಯ್ಯ
ಪಾಲಿಕೆ ಆಡಳಿತ ವೈಫಲ್ಯ, ದಿವಾಳಿತನ ಹಾಗೂ ಭ್ರಷ್ಟಾಚಾರ ವಿರೋಧಿಸಿ ಪಾಲಿಕೆಗೆ ಬೀಗ ಹಾಕುವ ಹೋರಾಟ ನಡೆಸಿದೆವು. ಆ ಬಳಿಕ ಪಾಲಿಕೆ ಆಡಳಿತ ವರ್ಗ ಎಚ್ಚೆತ್ತುಕೊಂಡಿದೆ. ಜನ ವಿರೋಧಿ ಆಗಿರುವ ಈ ಆಡಳಿತ ವರ್ಗದ ಧೋರಣೆ ವಿರುದ್ಧ ಜನರೇ ಸಿಟ್ಟಿಗೆದ್ದಿದ್ದಾರೆ ಎಂದು ತಿಳಿಸಿದರು. ಇಂದಿರಾ ಕ್ಯಾಂಟೀನ್ ಮುಚ್ಚಿ ಎರಡೂವರೆ ತಿಂಗಳಾಗಿದೆ. ಆಗ ಕೇಳಿದಾಗ ಟೆಂಡರ್ ಕರೆಯುತ್ತೇವೆ ಎಂದಿದ್ದರು. ಈಗಲೂ ಅದೇ ಮಾತು ಹೇಳುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಜನರ ಶಾಪ ತಟ್ಟುವುದು ಖಚಿತ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಪಾಲಿಕೆ ಆಡಳಿತವು ಕೂಡಲೇ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.