ದಾವಣಗೆರೆಯ ಕಾರಾಟೆಪಟುಗಳು ಶ್ರೀಲಂಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಗೆ ಕರ್ನಾಟಕದಿಂದ ತರಬೇತುದಾರ 6ನೇ ಡಿಗ್ರಿ ಬ್ಲಾಕ್ ಬೆಲ್ಟ್ ರೆನ್ಸಿ ಎಚ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಸ್ಪರ್ಧಿಗಳು ತೆರಳಲಿದ್ದಾರೆ.
ದಾವಣಗೆರೆ(ಜು.30): ಅಸೋಸಿಯೇಷನ್ ಆಫ್ ಒಕಿನಾವ ಕರಾಟೆ ದೋ ಶೋರಿನ್ ರಿಯು ಶೋರಿನ್ ಕಾನ್ ಕರ್ನಾಟಕ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಕರಾಟೆ-ಕೊಬುದೋ ಸ್ಪರ್ಧೆಗಳು ಆ.3 ಮತ್ತು 4 ರಂದು ಶ್ರೀಲಂಕಾದ ಸೇಂಟ್ ಥಾಮಸ್ ಕಾಲೇಜಿನಲ್ಲಿ ನಡೆಯಲಿವೆ.
ಈ ಸ್ಪರ್ಧೆಗೆ ಕರ್ನಾಟಕದಿಂದ ತರಬೇತುದಾರ 6ನೇ ಡಿಗ್ರಿ ಬ್ಲಾಕ್ ಬೆಲ್ಟ್ ರೆನ್ಸಿ ಎಚ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಸ್ಪರ್ಧಿಗಳು ಹರಿಹರದಿಂದ ತೆರಳಲಿದ್ದಾರೆ.
undefined
ವಾಚ್‌ಮ್ಯಾನ್‌ಗೆ ಮಂಗಳೂರು ಮೇಯರ್ ಕರಾಟೆ ಪಂಚ್!
ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಹರಿಹರದ ಎಚ್.ಎಂ.ಕಾರ್ತಿಕ್, ಹನುಮಸಾಗರದ ಮಹಾಂತೇಶ ಬೂದಿಹಾಳ್, ಗಂಗಾವತಿಯ ಷಣ್ಮುಖಪ್ಪ ಶಾವಂತಗೇರಿ, ರಾಣೆಬೆನ್ನೂರಿನ ನವೀನಕುಮಾರ ಹೊಸಂಗಡಿ, ಹೂವಿನ ಹಡಗಲಿಯ ಎಲ್.ನೇತ್ರಾಬಾಯಿ, ದಾವಣಗೆರೆಯ ಶರಣಗೌಡ, ಜಗಳೂರಿನ ಬಿ.ಎ.ರೇಖಾ ಸ್ಪರ್ಧಿಸಲಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಲರ್ ಬೆಲ್ಟ್ ವಿಭಾಗದಲ್ಲಿ ಹರಿಹರದ ಹರ್ಷವರ್ಧನ, ಹೊನ್ನಾಳಿಯ ಯು.ಬಿ.ಕುಷಾಲ್, ಹರಿಹರದ ದೇವರಾಜ, ಜಗಳೂರಿನ ಬಿ.ಎ.ಶಾಂತವೀರ, ಜಗಳೂರಿನ ಬಿ.ಎ.ಶರತ್, ಹರಿಹರದ ಸೌರಭ್ ಆರ್.ಮೆಹರ್‌ವಾಡೆ, ಪ್ರವೀಣಕುಮಾರ ಭಾಗವಹಿಸಲಿದ್ದಾರೆ. ಈ ಸ್ಪರ್ಧಿಗಳಿಗೆ ಶಾಲಾ ಅಧ್ಯಕ್ಷರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.