ದಸರಾ ಪಾಸ್ ಗೊಂದಲ; ಇರೋದ್ರಲ್ಲೇ ಎಲ್ಲ ಸರಿದೂಗಿಸ್ಬೇಕು: ಸೋಮಣ್ಣ

By Kannadaprabha NewsFirst Published Oct 6, 2019, 9:00 AM IST
Highlights

ಮೈಸೂರು ದಸರಾಗೆ ಟಿಕೆಟ್, ಪಾಸ್‌ಗಳ ಗೊಂದಲ ವಿಚಾರವಾಗಿ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಟಿಕೆಟ್‌, ಪಾಸ್‌ ಗೊಂದಲದ ಕುರಿತು ನಾನು ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲಿನಿಂದ ನಡೆದುಕೊಂಡು ಬಂದಂತೆ ಈ ಬಾರಿಯೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಮೈಸೂರು(ಅ.06): ಪ್ರತಿವರ್ಷದಂತೆ ಈ ಬಾರಿಯೂ ಪಾಸ್‌ ವಿತರಿಸಲಾಗುತ್ತಿದೆ. ಟಿಕೆಟ್‌, ಪಾಸ್‌ ಗೊಂದಲದ ಕುರಿತು ನಾನು ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲಿನಿಂದ ನಡೆದುಕೊಂಡು ಬಂದಂತೆ ಈ ಬಾರಿಯೂ ನಡೆಯಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಉಸ್ತುವಾರಿ ಸಚಿವನಾಗಿ ನೇಮಕಗೊಂಡ ದಿನದಿಂದ ಒಂದೆರಡು ದಿನ ಬಿಟ್ಟರೆ ಮೈಸೂರಿನಲ್ಲೇ ಇದ್ದುಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಸಂಸದರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಕೊಟ್ಟಸಲಹೆ ಸ್ವೀಕರಿಸಿದ್ದೇನೆ.

ಮೈಸೂರು: ಗಜಪಡೆ, ಪೊಲೀಸ್ ತುಕಡಿ ತಾಲೀಮು

ಎಲ್ಲವನ್ನ ಸರಿಪಡಿಸಿಕೊಂಡು ಹೋಗುವ ಸಾಮರ್ಥ್ಯ ಅವರಿಗಿದೆ. ಅರಮನೆಯಲ್ಲಿ 25 ರಿಂದ 26 ಸಾವಿರ ಆಸನದ ವ್ಯವಸ್ಥೆ ಇದೆ. ನೂರು, ಇನ್ನೂರು ಪಟ್ಟು ಪಾಸ್‌ಬೇಡಿಕೆ ಜಾಸ್ತಿ ಇದೆ. ಎಲ್ಲವನ್ನು ನಿಭಾಯಿಸಿ ಕೊಡಲು ಸಾಧ್ಯವಾಗಲ್ಲ. ಸುಪ್ರೀಂಕೋರ್ಟ್‌, ಹೈಕೋರ್ಟ್‌ನಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಇರುವಷ್ಟುವ್ಯವಸ್ಥೆಯಲ್ಲಿ ಸರಿದೂಗಿಸಬೇಕಿದೆ ಎಂದು ಅವರು ಹೇಳಿದರು.

ಇನ್ನಷ್ಟುಬಿಡುಗಡೆ:

ಕೇಂದ್ರ ಸರ್ಕಾರ ಈಗ 1200 ಕೋಟಿ ಪರಿಹಾರದ ಹಣವನ್ನು ತಾತ್ಕಾಲಿಕವಾಗಿ ನೀಡಿದೆ. ವರದಿಯಲ್ಲಿ ಸಣ್ಣಪುಟ್ಟದೋಷವಿದೆ ಅಂಥ ಹೇಳಿದೆ. ಅದನ್ನು ಸರಿಪಡಿಸಿಕಳುಹಿಸಲಾಗುವುದು. ಶೀಘ್ರದಲ್ಲೇ ಇನ್ನಷ್ಟುಪರಿಹಾರದ ಅನುದಾನ ಬಿಡುಗಡೆಯಾಗಲಿದೆ. ಮುಖ್ಯಮಂತ್ರಿಗಳ ಕಳಕಳಿ, ಪ್ರಭಾವದಿಂದ ರಾಜ್ಯ ಸರ್ಕಾರದ ಬೊಕ್ಕಸದಿಂದಲೇ . 3500 ಕೋಟಿ ಅನುದಾನ ಬಿಡುಗಡೆಯಾಗಿದೆ. ಸಂತ್ರಸ್ಥರ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಯುವ ದಸರಾ: ನಾಡಹಬ್ಬದಲ್ಲಿ ಹೆಜ್ಜೆ ಹಾಕೋಣ ಬಾರಾ

click me!