'ಈಶ್ವರಪ್ಪ ಉಪಮುಖ್ಯಮಂತ್ರಿ ಮಾಡದಿದ್ದರೇ ಹೋರಾಟ'

By Kannadaprabha NewsFirst Published Jul 30, 2021, 7:21 AM IST
Highlights

* ಹಾಲುಮತ ಸಮಾಜದ ಮುಖಂಡ ಡಿ. ಮಲ್ಲಣ್ಣ ಎಚ್ಚರಿಕೆ
* ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಈಶ್ವರಪ್ಪ ಅವರ ಕೊಡುಗೆಯೂ ಅಪಾರ
* ಈಶ್ವರಪ್ಪನವರಿಗೆ ಪಕ್ಷನಿಷ್ಠೆ, ನಾಯಕತ್ವ ಗುಣವಿದೆ

ಕೊಪ್ಪಳ(ಜು.30): ಹಿಂದುಳಿದ ವರ್ಗದ ನಾಯಕ ಹಾಗೂ ಬಿಜೆಪಿ ಕಟ್ಟಾಅನುಯಾಯಿ, ಸಂಘಟಕರಾಗಿರುವ ಕೆ.ಎಸ್‌. ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹಾಲುಮತ ಸಮಾಜದ ಮುಖಂಡ ಡಿ. ಮಲ್ಲಣ್ಣ ಎಚ್ಚರಿಸಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಈಶ್ವರಪ್ಪ ಅವರ ಕೊಡುಗೆಯೂ ಅಪಾರ. ರಾಜ್ಯದಲ್ಲಿ ಬಿಜೆಪಿಯನ್ನು ತಳ ಮಟ್ಟದಿಂದ ಸಂಘಟಿಸಿ ಬೆಳೆಸಿದವರಲ್ಲಿ ಯಡಿಯೂರಪ್ಪನವರ ನಂತರದ ಸ್ಥಾನ ಕೆ.ಎಸ್‌. ಈಶ್ವರಪ್ಪನವರಿಗೆ ಇದೆ. ಅವರ ಪಕ್ಷನಿಷ್ಠೆ, ನಾಯಕತ್ವ ಗುಣವಿದೆ. ಹಾಗಾಗಿ ಅವರಿಗೆ ಸ್ಥಾನ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬೊಮ್ಮಾಯಿ ಪದಗ್ರಹಣಕ್ಕೆ ಗೈರು: ಶ್ರೀರಾಮುಲು ಮುನಿಸಿಗೆ ಕಾರಣವೇನು?

ಮಾದಿಗ ಸಮುದಾಯದ ಮುಖಂಡ ವಿನಯಕುಮಾರ ಮೇಲಿನಮನಿ, ಕುಷ್ಟಗಿ ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ, ಗಂಗಾಧರ ಹಿರೇಮಠ, ರಮೇಶ ಪುರ, ಶಂಕರಗೌಡ ಪಾಟೀಲ್‌ ಸೇರಿ ಇತರರು ಉಪಸ್ಥಿತರಿದ್ದರು.
 

click me!