ಮಸಾಜ್‌ ಯಂತ್ರದೊಳಗೆ ಅಡಗಿತ್ತು ಕೋಟಿ ಮೌಲ್ಯದ ನಶೆ ವಸ್ತು

By Kannadaprabha NewsFirst Published Sep 10, 2020, 7:24 AM IST
Highlights

ಮಸಾಜ್ ಮಾಡುವ ಆ ಯಂತ್ರದ ಒಳಗೆ ಅಡಗಿತ್ತು ಮಾದಕತೆಯ ವಸ್ತು. ಕೋಟ್ಯಂತರ ಮೌಲ್ಯದ ವಸ್ತುವನ್ನು ಯಂತ್ರದೊಳಗೆ ಬಚ್ಚಿಟ್ಟು ಸಾಗಣೆ ಮಾಡಲಾಗುತಿತ್ತು.

ಬೆಂಗಳೂರು (ಸೆ.10): ವಿದೇಶದಿಂದ ಕಳ್ಳ ಹಾದಿಯಲ್ಲಿ ರಾಜ್ಯಕ್ಕೆ ನುಸುಳುವ ಮಾದಕ ವಸ್ತು ಪತ್ತೆ ಕಾರ್ಯಾಚರಣೆಯನ್ನು ಬಿರುಸುಗೊಳಿಸಿರುವ ಸೀಮಾ ಸುಂಕ (ಕಸ್ಟಮ್ಸ್‌) ಅಧಿಕಾರಿಗಳು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ಮತ್ತೆ 1 ಕೋಟಿ ರು. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಬೆಲ್ಜಿಯಂ ದೇಶದಿಂದ ಎಲೆಕ್ಟ್ರಾನಿಕ್‌ ಮಸಾಜ್‌ ಯಂತ್ರಗಳಲ್ಲಿ ಅಡಗಿಸಿ ಕೆಐಎಗೆ ಕೊರಿಯರ್‌ ಮೂಲಕ ಡ್ರಗ್ಸ್‌ ರವಾನೆಯಾಗಿದೆ. ಮಂಗಳವಾರ ಶಂಕೆ ಮೇರೆಗೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲಿಸಿದಾಗ ಡ್ರಗ್ಸ್‌ ಪತ್ತೆಯಾಗಿದೆ. ಆದರೆ ಈ ವಸ್ತು ಯಾರಿಗೆ ತಲುಪಬೇಕಿತ್ತು. ಯಾರೂ ಕಳುಹಿಸಿದ್ದರು ಎಂಬುದು ಗೊತ್ತಾಗಿಲ್ಲ. 

ಈಗ 1,980 ಗ್ರಾಂ. ಎಂಡಿಎಂಎ/ ಎಕ್ಟಾಸಿ ಮಾತ್ರೆಗಳು ಸೇರಿದಂತೆ .1 ಕೋಟಿ ಮೌಲ್ಯದ ಡ್ರಗ್ಸ್‌ ಸಿಕ್ಕಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೆಐಎ ವಿಮಾನದಲ್ಲಿ .1.09 ಕೋಟಿ ಮೌಲ್ಯದ ಗಾಂಜಾವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಹದಿನೈದು ದಿನಗಳ ಅವಧಿಯಲ್ಲಿ ಇದೂ ಮೂರನೇ ದಾಳಿಯಾಗಿದೆ.

click me!