ಬೆಂಗಳೂರು: 10X25 ಸೈಟಲ್ಲಿ ಕಟ್ಟಿದ 5 ಅಂತಸ್ತಿನ ಕಟ್ಟಡದಲ್ಲಿ ಬಿರುಕು!

By Kannadaprabha News  |  First Published Oct 25, 2024, 9:06 AM IST

ನಂಜಪ್ಪ ಗಾರ್ಡನ್‌ನಲ್ಲಿ 10X25 ಅಡಿ ನಿವೇಶನದಲ್ಲಿ ಐದು ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತೆರವುಗೊಳಿಸುವುದಕ್ಕೆ ಸೂಚಿಸಲಾಗಿದೆ. ಜತೆಗೆ, ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದ್ದೇನೆ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್


ಬೆಂಗಳೂರು(ಅ.25):  ಮತ್ತೊಂದು ಕಟ್ಟಡವು ಹೊರಮಾವು ವ್ಯಾಪ್ತಿಯ ನಂಜಪ್ಪ ಗಾರ್ಡನ್ 4ನೇ ಅಡ್ಡ ರಸ್ತೆಯ ಪುಟ್ಟಪ್ಪ ಎಂಬುವವರ ಮಾಲೀಕತ್ವದ ಕಟ್ಟಡವಾಗಿದೆ. 10X25 ವಿಸ್ತೀರ್ಣದಲ್ಲಿ ನೆಲ ಮಹಡಿ ಜತೆಗೆ ಐದು ಅಂತಸ್ತಿನ ಕಟ್ಟಡವು ಬಿರುಕು ಬಿಟ್ಟಿದ್ದು, ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ. 

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಂಜಪ್ಪ ಗಾರ್ಡನ್‌ನಲ್ಲಿ 10X25 ಅಡಿ ನಿವೇಶನದಲ್ಲಿ ಐದು ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತೆರವುಗೊಳಿಸುವುದಕ್ಕೆ ಸೂಚಿಸಲಾಗಿದೆ. ಜತೆಗೆ, ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದ್ದೇನೆ ಎಂದರು. 

Tap to resize

Latest Videos

ಬೆಂಗಳೂರು: ಅಪಾಯಕಾರಿ ಕಟ್ಟಡಗಳ ತೆರವಿಗೆ ಕಾಯ್ದೆ ತಿದ್ದುಪಡಿ, ಡಿ.ಕೆ.ಶಿವಕುಮಾರ್‌

ಅಪಾಯಕಾರಿ ಹಂತದ 2 ಕಟ್ಟಡ ಕೆಡವಿದ ಬಿಬಿಎಂಪಿ

ಬೆಂಗಳೂರು ನಗರದ ಬಾಬಾಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಎಂಟು ಮಂದಿ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೆ ಮಹದೇವಪುರ ವಲಯದಲ್ಲಿ ಅಪಾಯದ ಸ್ಥಿತಿಯಲ್ಲಿ ಇರುವ ಎರಡು ಕಟ್ಟಡಗಳನ್ನು ಬಿಬಿಎಂಪಿ ಕಾರ್ಯಾಚರಣೆ ನಡೆಸಿ ಕೆಡವಿದೆ. 

ಈ ಪೈಕಿ ಒಂದು ಕಟ್ಟಡ ಶಿಥಿಲಗೊಂಡ ಕಟ್ಟ ಡವಾಗಿದ್ದು, ಮತ್ತೊಂದು ಮಳೆಯಿಂದ ಬಿರುಕು ಕಾಣಿಸಿಕೊಂಡ ಅನಧಿಕೃತ ಕಟ್ಟಡವಾಗಿದೆ. ಎಚ್‌ಎಎಲ್‌ ವಾರ್ಡ್‌ ಇಸ್ಲಾಂಪುರದಲ್ಲಿ ಶ್ರೀರಾಮ್ ಮಾಲೀಕತ್ವದ ನೆಲಮಹಡಿ ಸೇರಿದಂತೆ ಒಂದು ಅಂತಸ್ತಿನ ಹಳೆಯ ಕಟ್ಟಡ ಶಿಥಿಲಗೊಂಡಿರುವ ಕಾರಣಕ್ಕೆ ಮನೆಯ ಸಾಮಗ್ರಿಗಳನ್ನು ತೆರವುಗೊಳಿಸಿ ಜೆಸಿಬಿ ಮೂಲಕ ಕೆಡವಿ ಹಾಕಲಾಗಿದೆ.

click me!