ಹುಣಸೂರು (ಅ.24): ಬೆಳ್ಳಂಬೆಳಗ್ಗೆ ಕೊಡಗಿನ ಕಾಫಿತೋಟಕ್ಕೆ (Coffee Estate) ತೆರಳುತ್ತಿದ್ದ ಆದಿವಾಸಿಗಳಿಗೆ (Tribal People) ಕೊರೋನಾ (Corona) ಲಸಿಕೆ (vaccine) ಹಾಕಲಾಯಿತು.
ಹನಗೋಡು ಹೋಬಳಿ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದನ್ನು ಮನಗಂಡ ಗ್ರಾಪಂನ (Grama panchayat) ಅಧ್ಯಕ್ಷ ಉದಯನ್, ಪಿಡಿಒ ದೇವರಾಜ್ ಗ್ರಾಪಂ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಚಂದ್ರಶೇಖರ್ ಅವರು ಮುಂಜಾನೆ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಕೊಡಗಿಗೆ (Kodagu) ಕೂಲಿಗಾಗಿ ಜೀಪಿನಲ್ಲಿ ತೆರಳುತ್ತಿದ್ದ ಗಿರಿಜನರಿಗೆ ತಡೆದು ಅವರ ಮನವೊಲಿಸಿ ಹಾಡಿಯ ಸಮುದಾಯ ಭವನದಲ್ಲಿ ತೆರೆಲಾಗಿದ್ದ ಲಸಿಕಾ ಕೇಂದ್ರಕ್ಕೆ (vaccination Centre) ಕರೆತಂದು ಆರೋಗ್ಯ ಸಿಬ್ಬಂದಿಯ ಸಹಕಾರದಲ್ಲಿ ಲಸಿಕೆ ಹಾಕಿಸಿದರು.
undefined
ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!
ತಹಸೀಲ್ದಾರಿಂದ ಮನವೊಲಿಕೆ: ಸ್ವತಃ ವೈದ್ಯರಾಗಿರುವ ತಹಸೀಲ್ದಾರ್ (tahasildar) ಡಾ. ಅಶೋಕ್ (Dr Ashok) ಅವರು ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಆದಿವಾಸಿಗಳ ಮನೆ-ಮನೆಗೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿದರು. ನಂತರ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ವ್ಯಾಪ್ತಿಯ ಆಶಾ-ಅಂಗನವಾಡಿ ಕಾರ್ಯಕರ್ತರಿಂದ ಮಾಹಿತಿ ಪಡೆದು ಇನ್ನೂ ಲಸಿಕೆ ಹಾಕಿಸದವರ ಮನವೊಲಿಸಿ ಲಸಿಕೆ ಹಾಕಿಸಲು ಶ್ರಮ ಹಾಕಬೇಕೆಂದು ಸೂಚಿಸಿದರು.
100 ಕೋಟಿ ಲಸಿಕೆ ಸಂಭ್ರಮ: ಕರ್ನಾಟಕದ ಜನತೆಗೆ ಮಹತ್ವದ ಕರೆ ಕೊಟ್ಟ ಬಿಜೆಪಿ
ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಉದಯನ್, ಪಿಡಿಒ (PDO) ದೇವರಾಜ್, ಹನಗೋಡು ಆರ್‌ಐ ಪ್ರಶಾಂತ್‌ರಾಜೇ ಅರಸ್, ಗ್ರಾಮ ಲೆಕ್ಕಾಧಿಕಾರಿ (Village Accountant) ಸುಮಂತ್, ಆರೋಗ್ಯ ಸಹಾಯಕ ಚಂದ್ರಶೇಖರ್, ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದ ಅಧ್ಯಕ್ಷ ಶಂಕರ್, ಯುವ ಮುಖಂಡ ಪಾಪು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
100 ಕೋಟಿ ಲಸಿಕೆ ವಿತರಣೆ
ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಎರಡನೇ ಹಂತದ ಲಸಿಕೆಯನ್ನು(Vaccine) ನೀಡುವ ಗುರಿ ಹಾಕಿಕೊಳ್ಳಲಾಗಿದ್ದು, ಮೂರನೇ ಡೋಸ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ(CN Ashwathnarayan) ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ(Bengaluru) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡುವ ಬಗ್ಗೆ ಗಮನಹರಿಸಲಾಗಿದೆ. ಮೂರನೇ ಡೋಸ್(Third Dose) ನೀಡುವ ಬಗ್ಗೆ ಯಾವೊಬ್ಬ ತಜ್ಞರು(Experts) ಸಲಹೆಯನ್ನು ಕೊಟ್ಟಿಲ್ಲ. ಹೀಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಕೋವಿಡ್(Covid19) ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು(Doctor), ವೈದ್ಯಕೀಯ ಸಿಬ್ಬಂದಿಯ ಶ್ರಮ ಮತ್ತು ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ(100 Crore Vaccine)ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶದಲ್ಲಿ ಶೇ.20ರಷ್ಟು ಲಸಿಕೆ ನೀಡುವ ಸಾಧನೆಯೂ ಆಗಿಲ್ಲ ಎಂದು ಹೇಳಿದರು.