ಕೋಲಾರದ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ರಾಜ್ಯ ಸರ್ಕಾರದ ವಶಕ್ಕೆ

By Web DeskFirst Published Sep 18, 2019, 10:24 PM IST
Highlights

ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ರಾಜ್ಯ ಸರ್ಕಾರದ ವಶಕ್ಕೆ/ ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರುವ ದೇವಾಲಯ/ ಕ್ಷಿಣ ಭಾರತದಲ್ಲಿಯೆ ಹೆಸರು ವಾಸಿ ದೇವಾಲಯ

ಕೋಲಾರ[ಸೆ. 18]  ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ರಾಜ್ಯ ಸರ್ಕಾರದ ವಶಕ್ಕೆ ಬಂದಿದೆ. ಕೆಜಿಎಫ್ ನ ಜಿಲ್ಲಾ 3 ನೇ ಸತ್ರ ನ್ಯಾಯಾಲಯದ ಮಹತ್ವದ ಆದೇಶ ನೀಡಿದ್ದು ದೇವಾಲಯವನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡಲು ತಿಳಿಸಿದೆ.

ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರುವ ದೇವಾಲಯ 108 ಅಡಿ ಎತ್ತರದ ಆಕರ್ಷಕ ಶಿವಲಿಂಗದ ಮೂರ್ತಿಗಾಗಿ ದಕ್ಷಿಣ ಭಾರತದಲ್ಲಿಯೆ ಹೆಸರು ವಾಸಿಯಾಗಿದೆ.

ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ

ಆಡಳಿತಾಧಿಕಾರಿ ಪದವಿಗಾಗಿ ಕೆವಿ.ಕುಮಾರಿ ಮತ್ತು ಡಾ.ಶಿವಪ್ರಸಾದ ಮಧ್ಯೆ ಕೋರ್ಟ್ ನಲ್ಲಿದ್ದ ವ್ಯಾಜ್ಯವಿತ್ತು. ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ವಹಿವಾಟು ಹೊಂದಿರುವ ಈಶ್ವರನ ದೇಗುಲದ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು.

ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ

ಇದೀಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿ ರಚಿಸಿ ಕೋರ್ಟ್ ಆದೇಶ ನೀಡಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರ್ಕಾರದ ವಶಕ್ಕೆ ದೇವಾಲಯವನ್ನು ನೀಡಿದೆ.

ಸಾಂಬಶಿವಮೂರ್ತಿ ಸ್ವಾಮೀಜಿ ನಿಧನರಾದ ನಂತರ ದೇಗುಲ ಮತ್ತು ಆಸ್ತಿ ಮೇಲೆ ಹಕ್ಕಿಗಾಗಿ ಕಾದಾಟ ನಡೆಯುತ್ತಲೇ ಬಂದಿತ್ತು. ಗುರುವಾರ ಕೋರ್ಟ್ ಆದೇಶ ಜಿಲ್ಲಾಧಿಕಾರಿ ಕೈಸೇರಿದ ನಂತರ ದೇಗುಲ ಸುಪರ್ದಿಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

click me!