ಕೊಳ್ಳೇಗಾಲ: ಮನೆ ಖಾಲಿ ಮಾಡುವಂತೆ ಸಂಬಂಧಿಕರ ಒತ್ತಡ, ದಯಾಮರಣಕ್ಕೆ ಪತ್ರ ಬರೆದ ದಂಪತಿ

By Girish Goudar  |  First Published Sep 8, 2023, 9:08 PM IST

ಜಕ್ಕಳ್ಳಿಯ ಅರುಣ್ ಸೆಲ್ವ ಸಗಾಯ್ ರಾಜ್ ಮತ್ತು ಪತ್ನಿ ಲೀನಾ ದಂಪತಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದವರಾಗಿದ್ದು, ವಾಸ ಇರುವ ಮನೆಯನ್ನು ಖಾಲಿ ಮಾಡಲು ಅತ್ತೆ ಹೇಳುತ್ತಿದ್ದಾರೆ, 1 ತಿಂಗಳ ಪುಟ್ಟ ಮಗ ಹಾಗೂ ಮತ್ತೊಂದು 3ವಷ೯ದ ಪುಟ್ಟಾಣಿ ಕಂದಮ್ಮನ ಜೊತೆ ನಾವು ಎಲ್ಲಿಗೆ ತೆರಳಬೇಕು ಎಂಬುದು ತಿಳಿಯದಾಗಿದ್ದು, ಸ್ವಂತ ಮನೆ ಇಲ್ಲದ ನನಗೆ ಹಾಗೂ ನನ್ನ ಪತಿ ಅರುಣ್ ಸಗಾಯ್ ರಾಜ್ ಅವರಿಗೆ ದಯಾ ಮರಣ ಕರುಣಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

ಕೊಳ್ಳೇಗಾಲ(ಸೆ.08): ಮನೆ ಖಾಲಿ ಮಾಡುವಂತೆ ನಮ್ಮ ಸಂಬಂಧಿಕರು ಒತ್ತಡ ತರುತ್ತಿರುವ ಕಾರಣ ನಮಗೆ ದಯಾ ಮರಣ ಕರುಣಿಸಿ ಎಂದು ದಂಪತಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

ಜಕ್ಕಳ್ಳಿಯ ಅರುಣ್ ಸೆಲ್ವ ಸಗಾಯ್ ರಾಜ್ ಮತ್ತು ಪತ್ನಿ ಲೀನಾ ದಂಪತಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದವರಾಗಿದ್ದು, ವಾಸ ಇರುವ ಮನೆಯನ್ನು ಖಾಲಿ ಮಾಡಲು ಅತ್ತೆ ಹೇಳುತ್ತಿದ್ದಾರೆ, 1 ತಿಂಗಳ ಪುಟ್ಟ ಮಗ ಹಾಗೂ ಮತ್ತೊಂದು 3ವಷ೯ದ ಪುಟ್ಟಾಣಿ ಕಂದಮ್ಮನ ಜೊತೆ ನಾವು ಎಲ್ಲಿಗೆ ತೆರಳಬೇಕು ಎಂಬುದು ತಿಳಿಯದಾಗಿದ್ದು, ಸ್ವಂತ ಮನೆ ಇಲ್ಲದ ನನಗೆ ಹಾಗೂ ನನ್ನ ಪತಿ ಅರುಣ್ ಸಗಾಯ್ ರಾಜ್ ಅವರಿಗೆ ದಯಾ ಮರಣ ಕರುಣಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

Tap to resize

Latest Videos

undefined

ಚಾಮರಾಜನಗರ: ಬಂಡೀಪುರದಲ್ಲಿ ಆನೆ ಹಾವಳಿ ತಡೆಯುವಲ್ಲಿ ರೈಲ್ವೆ ಬ್ಯಾರಿಕೇಡ್ ಸಕ್ಸಸ್..!

ಈ ಹಿಂದೆ ದಂಪತಿ ಪ್ರೀತಿಸಿ ಮದುವೆಯಾಗಿದ್ದರು, ವಾಸಕ್ಕೆ ಮನೆ ಇಲ್ಲದ ಕಾರಣ ತನ್ನ ಅತ್ತೆ ಜಾಗದಲ್ಲಿ ಮನೆ ನಿಮಾ೯ಣಕ್ಕೆ ಅನುಮತಿ ಪಡೆದು ನಾಲ್ಕು ಲಕ್ಷ ಖಚು೯ ಮಾಡಿ, ಐದು ವಷ೯ದ ಹಿಂದೆ ಮನೆ ನಿರ್ಮಿಸಿಕೊಂಡಿದ್ದರು. ಈಗ ಏಕಾಏಕಿ ಮನೆ ಖಾಲಿ ಮಾಡುವಂತೆ ಮೋಕ್ಷರಾಣಿ ಒತ್ತಡ ಹೇರಿದ್ದು, ಸೆ.10ರತನಕ ಗಡುವ ವಿಧಿಸಿರುವ ಕಾರಣ ದಂಪತಿ ವಿಧಿ ಇಲ್ಲದೆ ದಯಾಮರಣಕ್ಕೆ ಪತ್ರ ಬರೆದಿದ್ದಾರೆ.

click me!