ಮಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆ

Published : Mar 09, 2020, 09:34 PM ISTUpdated : Mar 09, 2020, 09:58 PM IST
ಮಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆ

ಸಾರಾಂಶ

ಕರ್ನಾಟಕದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದೆ. ಈ ಬಗ್ಗೆ ರಾಜ್ಯ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ  ಕೊರೋನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ.

ಬೆಂಗಳೂರು, [ಮಾ.09]:  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ.

ಬಂಟ್ವಾಳದ ವಿಟ್ಲ ಸಮೀಪದ ರಂಗರಮಜಲು ಎಂಬಲ್ಲಿ ಪತ್ತೆಯಾಗಿದ್ದಾನೆ. ಸಂಬಂಧಿಕರ ಮನೆಯಲ್ಲಿ ಶಂಕಿತ ಪತ್ತೆಯಾಗಿದ್ದು, ಪೊಲೀಸರು ಹಾಗೂ ವೈದ್ಯರು ಆತನನ್ನ ಮನವವೊಲಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಮಂಗಳೂರು: ಕೊರೋನ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್

ದುಬೈನಿಂದ ಭಾನುವಾರ ಬಂದಿಳಿದ ಸಂದರ್ಭದಲ್ಲಿ ಜ್ವರದ ಲಕ್ಷಣಗಳು ಕಂಡುಬಂದ ಕಾರಣದಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಗಾಗಿ ಸ್ಥಾಪಿಸಾಗಿದ್ದ ವಾರ್ಡ್ ನಲ್ಲಿ ನಿಗಾ ಇರಿಸಲಾಗಿತ್ತು. 

ಆದ್ರೆ, ತಡ ರಾತ್ರಿ 1 ಗಂಟೆ ಸುಮಾರಿಗೆ ಆತನ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಆ ವ್ಯಕ್ತಿಯನ್ನು ಕಳಿಸಿಕೊಡುವಂತೆ ಗಲಾಟೆ ಮಾಡಿದ್ದರು. ಬಳಿಕ, ತಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ.

Breaking: ಕೊರೋನಾ ಭೀತಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

PREV
click me!

Recommended Stories

Bengaluru; ತಿಂಗಳಿಗೆ 2 ಲಕ್ಷ ಸಂಪಾದನೆ, ಆದರೂ ಸಿಗದ 2BHK ಮನೆ; ಬೆಂಗಳೂರಿನಲ್ಲಿ ಹಳೆಯ ಮನೆಗಳತ್ತ ಜನರ ಒಲವು!
ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್